ಆ್ಯಪ್ನಗರ

ಬೆಂಗಳೂರಿನ ಆಟಗಾರರ ಪ್ರಾಬಲ್ಯ

ರಾಯಚೂರು ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಯೋಜಿಸಿದ್ದ ಎರಡು ದಿನಗಳ ರಾಜ್ಯ ಮಟ್ಟದ ಮುಕ್ತ ಷಟಲ್ ಬ್ಯಾಡ್ಮಿಂಟನ್ ಸಿಂಗಲ್ಸ್ ಹಾಗೂ ಡಬಲ್ಸ್‌ನಲ್ಲಿ ಬೆಂಗಳೂರಿನ ಆಟಗಾರರು ಸಮಗ್ರ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ವಿಕ ಸುದ್ದಿಲೋಕ 8 Nov 2016, 7:57 am
ರಾಯಚೂರು: ರಾಯಚೂರು ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಯೋಜಿಸಿದ್ದ ಎರಡು ದಿನಗಳ ರಾಜ್ಯ ಮಟ್ಟದ ಮುಕ್ತ ಷಟಲ್ ಬ್ಯಾಡ್ಮಿಂಟನ್ ಸಿಂಗಲ್ಸ್ ಹಾಗೂ ಡಬಲ್ಸ್‌ನಲ್ಲಿ ಬೆಂಗಳೂರಿನ ಆಟಗಾರರು ಸಮಗ್ರ ಪ್ರಶಸ್ತಿ ತಮ್ಮದಾಗಿಸಿಕೊಂಡರು.
Vijaya Karnataka Web
ಬೆಂಗಳೂರಿನ ಆಟಗಾರರ ಪ್ರಾಬಲ್ಯ


ಇಲ್ಲಿನ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಬೆಂಗಳೂರಿನ ಕಿರಣ್‌ಕುಮಾರ್ ವಿಜಯಿಯಾದರು. ಬೆಂಗಳೂರಿನ ನಿಖಿಲ್ ತಿಯೋಟಿಯಾ ರನ್ನರ್ ಅಪ್ ಹಾಗೂ ಮಂಡ್ಯದ ಶ್ರೀನಿವಾಸ್ ಮೂರನೇ ಸ್ಥಾನ ಪಡೆದರು. 17 ವರ್ಷದೊಳಗಿನ ಬಾಲಕರ ಡಬಲ್ಸ್ ನಲ್ಲಿ ಬೆಂಗಳೂರಿನ ಮನೋಹರ್ ಮತ್ತು ಆರ್ಯನ್ ಜೋಡಿ, ಬೆಳಗಾವಿಯ ಅಂಚಿಕ್ಯಾ ಮತ್ತು ತೇಜಸ್ ಹಾಗೂ ರಾಯಚೂರಿನ ಅಭಿರಾಮ ಮತ್ತು ಪ್ರಥಮ್ ಜೋಡಿ ಕ್ರಮವಾಗಿ ಮೊದಲ ಮೂರು ಬಹುಮಾನ ಪಡೆದರು.

ಪುರುಷರ ಡಬಲ್ಸ್ ನಲ್ಲಿ ಬೆಂಗಳೂರಿನ ರಾಘವನ್ ಮತ್ತು ವೈಭವ್ ಜೋಡಿ ಪ್ರಥಮ, ಬೆಂಗಳೂರಿನ ಆಶಿತ್ ಸೂರ್ಯ ಮತ್ತು ಅಮಿತ್ ಎರಡನೇ ಹಾಗೂ ಬೆಂಗಳೂರಿನ ಶಿವಕುಮಾರ್ ಮತ್ತು ಸಂಜೀತ್ ಮೂರನೇ ಸ್ಥಾನ ಗಳಿಸಿದರು. 40ವರ್ಷ ಮೇಲ್ಪಟ್ಟ ಪುರುಷರ ಡಬಲ್ಸ್ ನಲ್ಲಿ ಬೆಂಗಳೂರಿನ ಶ್ರೀನಾಥ್ ಮತ್ತು ಜಗದೀಶ್ ಚಾಂಪಿಯನ್ ಆದರೆ, ರಾಯಚೂರಿನ ಕಿರಣ್ ಬೆಲ್ಲಂ ಮತ್ತು ನಾಗರಾಜ್ ಜಿ. ರನ್ನರ್ ಅಪ್, ಹಾಸನದ ಜಯರಾಮ್ ಮತ್ತು ಸುರೇಶ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಮೊದಲ ಮೂರು ಬಹುಮಾನಗಳನ್ನು ಪಡೆದ ವಿಜಯಿ ಆಟಗಾರರಿಗೆ ಕ್ರಮವಾಗಿ 25ಸಾವಿರ ರೂ. 15ಸಾವಿರ ರೂ. ಹಾಗೂ 2500ರೂ. ಮತ್ತು ಟ್ರೋಫಿ ನೀಡಿ ಗೌರವಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ