ಆ್ಯಪ್ನಗರ

ವೈಟಿಪಿಎಸ್: ಬಿಎಚ್‌ಇಎಲ್ ತಂಡ ಪರಿಶೀಲನೆ

ಯರಮರಸ್ ಸೂಪರ್ ಕ್ರಿಟಿಕಲ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ(ವೈಟಿಪಿಎಸ್)ದ ಮೊದಲ ಘಟಕದ ಉತ್ಪಾದನೆ ಪ್ರಮಾಣವನ್ನು 800 ಮೆಗಾ ವ್ಯಾಟ್‌ಗೆ ಕೊಂಡೊಯ್ಯುವ ಭಾಗವಾಗಿ ಬಿಎಚ್‌ಇಎಲ್‌ನ ಬೆಂಗಳೂರು ಹಾಗೂ ತ್ರಿಚ್ಚಿಯ ತಜ್ಞರ ತಂಡ ವೈಟಿಪಿಎಸ್‌ಗೆ ಬುಧವಾರ ಭೇಟಿನೀಡಿದ್ದು, ಪರಿಶೀಲನೆ ಆರಂಭಿಸಿದೆ.

ವಿಕ ಸುದ್ದಿಲೋಕ 2 Mar 2017, 8:11 am
ರಾಯಚೂರು: ಯರಮರಸ್ ಸೂಪರ್ ಕ್ರಿಟಿಕಲ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ(ವೈಟಿಪಿಎಸ್)ದ ಮೊದಲ ಘಟಕದ ಉತ್ಪಾದನೆ ಪ್ರಮಾಣವನ್ನು 800 ಮೆಗಾ ವ್ಯಾಟ್‌ಗೆ ಕೊಂಡೊಯ್ಯುವ ಭಾಗವಾಗಿ ಬಿಎಚ್‌ಇಎಲ್‌ನ ಬೆಂಗಳೂರು ಹಾಗೂ ತ್ರಿಚ್ಚಿಯ ತಜ್ಞರ ತಂಡ ವೈಟಿಪಿಎಸ್‌ಗೆ ಬುಧವಾರ ಭೇಟಿನೀಡಿದ್ದು, ಪರಿಶೀಲನೆ ಆರಂಭಿಸಿದೆ.
Vijaya Karnataka Web
ವೈಟಿಪಿಎಸ್: ಬಿಎಚ್‌ಇಎಲ್ ತಂಡ ಪರಿಶೀಲನೆ


ಈ ಘಟಕದಲ್ಲಿ ವಾಣಿಜ್ಯ ಬಳಕೆ ವಿದ್ಯುತ್ ಉತ್ಪಾದನೆಗೆ ಭರದ ಸಿದ್ಧತೆ ನಡೆದಿದೆ. ಕಳೆದ ತಿಂಗಳಾಂತ್ಯಕ್ಕೆ ಪರೀಕ್ಷಾರ್ಥ ವಿದ್ಯುತ್ ಉತ್ಪಾದನೆ ಆರಂಭಗೊಂಡಿತ್ತು. ನಿರಂತರ ವಿದ್ಯುತ್ ಉತ್ಪಾದಿಸಲಾಗುತ್ತಿದ್ದು, ಬುಧವಾರ 500 ಮೆಗಾ ವ್ಯಾಟ್ ಉತ್ಪಾದನೆ ದಾಖಲಾಯಿತು. ಈ ಘಟಕದ ಸೇಫ್ಟಿ ವಾಲ್ವ್ ತಪಾಸಣೆಗೆ ಬಿಎಚ್‌ಇಎಲ್ ತಜ್ಞರ ಜಂಟಿ ತಂಡ ಭೇಟಿನೀಡಿದೆ. ವೈಟಿಪಿಎಸ್‌ನ ಚೀಫ್ ಎಂಜಿನಿಯರ್ ಲಕ್ಷ್ಮಣ ಕಬಾಡೆ ಸೇರಿ ಇತರ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿತು.

ಈ ತಂಡದಿಂದ ಸುರಕ್ಷತೆಯ ಭರವಸೆ ದೊರೆತ ನಂತರ ಘಟಕದಲ್ಲಿ 800 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಲಾವುಗುದು ಎಂದು ಕೆಪಿಸಿ ಎಂ.ಡಿ. ಕುಮಾರ್‌ನಾಯಕ್ ಅವರು ಈ ಹಿಂದೆಯೇ ತಿಳಿಸಿದ್ದಾರೆ. ನಿಗದಿಯಂತೆ ನಿರಂತರ ವಿದ್ಯುತ್ ಉತ್ಪಾದಿಸಿದ ನಂತರವೇ ವಾಣಿಜ್ಯ ಬಳಕೆಗೆ ಘಟಕ ಸಿದ್ಧ ಎಂದು ಪ್ರಕಟಿಸಲು ಕೆಪಿಸಿ ಯೋಜಿಸಿದೆ. ತರಾತುರಿ ಪ್ರದರ್ಶಿಸದೇ ತಾಂತ್ರಿಕ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆಯ ಹೆಜ್ಜೆ ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ಎರಡು ದಿನಗಳ ಕಾಲ ತಂತ್ರಜ್ಞರು ವೈಟಿಪಿಎಸ್‌ನಲ್ಲಿದ್ದು ಕಾರ್ಯನಿರ್ವಹಣೆ ಪರಿಶೀಲಿಸಲಿದ್ದಾರೆ. ನಂತರ ಅವರು ಪ್ರಕಟಿಸಲಿರುವ ನಿರ್ಧಾರ ಆಧರಿಸಿ, ವಾಣಿಜ್ಯ ಬಳಕೆ ವಿದ್ಯುತ್ ಉತ್ಪಾದನೆಗೆ ಹಾದಿ ಸುಗಮವಾಗಲಿದೆ ಎಂದು ಕೆಪಿಸಿ ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ