ಆ್ಯಪ್ನಗರ

ರೈತರಿಗೆ ಹರಿಸಿದ ನೀರು ಕಬಳಿಸಿಲ್ಲ: ಕೆಪಿಸಿ ಎಂ.ಡಿ.

ಶಕ್ತಿನಗರದ ಆರ್‌ಟಿಪಿಎಸ್ ಮತ್ತು ಯರಮರಸ್‌ನ ವೈಟಿಪಿಎಸ್‌ಗೆ ಹಂಚಿಕೆಯಾಗಿರುವ ನೀರನ್ನು ಮಾತ್ರ ವಿದ್ಯುತ್ ಉತ್ಪಾದನೆಗೆ ಬಳಕೆ ಮಾಡಲಾಗುತ್ತಿದೆ. ರೈತರಿಗೆಂದು ಹರಿಸಿದ ನೀರು ಬಳಕೆ ಮಾಡುವ ಗೋಜಿಗೆ ಹೋಗಿಲ್ಲ ಎಂದು ಕೆಪಿಸಿ ಎಂ.ಡಿ. ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕುಮಾರ್‌ನಾಯಕ್ ಹೇಳಿದರು.

ವಿಕ ಸುದ್ದಿಲೋಕ 8 Apr 2017, 8:22 am
ರಾಯಚೂರು: ಶಕ್ತಿನಗರದ ಆರ್‌ಟಿಪಿಎಸ್ ಮತ್ತು ಯರಮರಸ್‌ನ ವೈಟಿಪಿಎಸ್‌ಗೆ ಹಂಚಿಕೆಯಾಗಿರುವ ನೀರನ್ನು ಮಾತ್ರ ವಿದ್ಯುತ್ ಉತ್ಪಾದನೆಗೆ ಬಳಕೆ ಮಾಡಲಾಗುತ್ತಿದೆ. ರೈತರಿಗೆಂದು ಹರಿಸಿದ ನೀರು ಬಳಕೆ ಮಾಡುವ ಗೋಜಿಗೆ ಹೋಗಿಲ್ಲ ಎಂದು ಕೆಪಿಸಿ ಎಂ.ಡಿ. ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕುಮಾರ್‌ನಾಯಕ್ ಹೇಳಿದರು.
Vijaya Karnataka Web
ರೈತರಿಗೆ ಹರಿಸಿದ ನೀರು ಕಬಳಿಸಿಲ್ಲ: ಕೆಪಿಸಿ ಎಂ.ಡಿ.


ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ‘‘ಕೃಷ್ಣಾ ನದಿಯಲ್ಲಿ ನೀರಿನ ಅಭಾವವಿರುವುದರಿಂದ ನೀರಿಗೆ ಬೇಡಿಕೆ ಹೆಚ್ಚಿದೆ. ಆದರೆ, ನಾರಾಯಣಪುರ ಮತ್ತು ಗೂಗಲ್ ಬ್ಯಾರೇಜ್‌ನಲ್ಲಿ ಕೆಪಿಸಿಗೆ ಹಂಚಿಕೆಯಾಗಿರುವ ನೀರು ಸಂಗ್ರಹಿಸಲಾಗಿದ್ದು, ಅಲ್ಲಿಂದಲೇ ನೀರು ಪಡೆಯಲಾಗುತ್ತಿದೆ’’ ಎಂದರು.

‘‘ಕೆಪಿಸಿ ಅಧಿಕಾರಿಗಳು ನದಿಗೆ ಅಡ್ಡಲಾಗಿ ಮರಳಿನ ಚೀಲವಿರಿಸಿ ಕಾನೂನು ಉಲ್ಲಂಘಿಸಿದ್ದಾರೆ. ಆ ಮೂಲಕ ರೈತರ ನೀರನ್ನೇ ವಿದ್ಯುತ್ ಉತ್ಪಾದನೆಗೆ ಬಳಕೆ ಮಾಡಲಾಗುತ್ತಿದೆ’’ ಎಂದು ಈಚೆಗೆ ನದಿ ತೀರದಲ್ಲಿ ಗ್ರಾಮೀಣ ಶಾಸಕ ತಿಪ್ಪರಾಜ ಹವಲ್ದಾರ್ ಅವರು ಕೆಪಿಸಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ‘‘ಕೆಪಿಸಿ ಜಾಕ್‌ವೆಲ್‌ನಲ್ಲಿ ತನ್ನ ಪಾಲಿನ ನೀರನ್ನು ಮಾತ್ರ ನಿಲುಗಡೆ ಮಾಡುತ್ತಿದೆ. ಹೆಚ್ಚುವರಿ ನೀರು ಹರಿದು ಮುಂದೆ ಸಾಗುತ್ತಿದೆ’’ ಎಂದಷ್ಟೇ ಹೇಳಿದರು.

ಈ ಸಂದರ್ಭದಲ್ಲಿ ಜಿ.ಪಂ. ಸಿಇಒ ಕೂರ್ಮಾರಾವ್ ಎಂ., ಎ.ಡಿ.ಸಿ. ಗೋವಿಂದರೆಡ್ಡಿ ಸೇರಿ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ