ಆ್ಯಪ್ನಗರ

‘ಅಪರಾಧ ಚಟುವಟಿಕೆ ತಡೆಗೆ ಸಹಕರಿಸಿ’

ಅಪರಾಧ ಚಟುವಟಿಕೆ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಪಿಎಸ್‌ಐ ಮಂಜುನಾಥ ಹೇಳಿದರು.

ವಿಕ ಸುದ್ದಿಲೋಕ 22 Jul 2017, 8:02 am
ಮಾನ್ವಿ: ಅಪರಾಧ ಚಟುವಟಿಕೆ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಪಿಎಸ್‌ಐ ಮಂಜುನಾಥ ಹೇಳಿದರು.
Vijaya Karnataka Web
‘ಅಪರಾಧ ಚಟುವಟಿಕೆ ತಡೆಗೆ ಸಹಕರಿಸಿ’


ಅವರು ಗುರುವಾರ ಪಟ್ಟಣದ 5ನೇ ವಾರ್ಡ್‌ನ ಪೊಲೀಸ್‌ಬೀಟ್ ಸಭೆ ಉದ್ದೇಶಿಸಿ ಮಾತನಾಡಿದರು. ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಸುಮಾರು 50 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವುದರಿಂದ ಅಪರಾಧ ತಡೆ ಮತ್ತು ಸಾರ್ವಜನಿಕರ ರಕ್ಷಣೆಯ ಜವಾಬ್ದಾರಿ ಪೋಲಿಸರ ಮೇಲೆ ಹೆಚ್ಚಿದೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕರು ಪೊಲೀಸರ ಜತೆಗೆ ಸಹಕರಿಸಬೇಕು ಅಂದಾಗ ಮಾತ್ರ ಅಪರಾಧಗಳನ್ನು ನಿಯಂತ್ರಿಸಲು ಸುಲಭವಾಗುತ್ತದೆ ಎಂದ ಅವರು ಈಗಾಗಲೇ ಪಟ್ಟಣದ ಹಲವು ಕಡೆಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅಲ್ಲದೇ ರಾತ್ರಿ 10 ಪೊಲೀಸರ ತಂಡ ಗಸ್ತು ತಿರುಗುತ್ತಾರೆ. ಇದು ಕಳ್ಳತನ, ಇತರೆ ಅಪರಾಧ ತಡೆಗೆ ನೆರವಾಗಿದೆ ಎಂದು ಹೇಳಿದರು.

ಪೊಲೀಸ್ ಬೀಟ್ ಒಳಗೊಂಡಂತೆ ಪ್ರತಿ ವಾರ್ಡ್‌ನ ವಾಟ್ಸ್ ಆ್ಯಪ್ ಗ್ರೂಪ್ ಇರುತ್ತದೆ. ಇದರ ಮೂಲಕವೂ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ತಿಳಿಸಬಹುದು, ಈ ಎಲ್ಲ ವಿಧಾನಗಳ ಬಳಕೆ ಮಾಡುವುದರ ಮೂಲಕ ಶಾಂತಿ ಕಾಪಾಡಲು ನಾಗರಿಕರು ಸಹಕರಿಸಬೇಕು ಎಂದು ಹೇಳಿದರು. ವಾರ್ಡ್‌ನ ಬೀಟ್ ಪೊಲೀಸ್ ಶಾಂತಗೌಡ, ಪುರಸಭೆ ಸದಸ್ಯ ಹುಸೇನ್‌ಬೇಗ್, ಹಿರಿಯ ನ್ಯಾಯವಾದಿ ಗುಮ್ಮಾ ಬಸವರಾಜ್, ಪ್ರಥಮದರ್ಜೆ ಗುತ್ತಿಗೆದಾರ ಸಲ್ಲಾವುದ್ದೀನ್, ಜಿ.ನಾಗರಾಜ್, ಕೆ.ಬಾಷಾ, ಚಾಂದ್‌ಪಾಷಾ, ಸಂತೋಷ ಜೈನ್ ಇನ್ನಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ