Please enable javascript.ಒಂದೇ ಕುಟುಂಬದ ಮೂವರ ಸಾವು - ಒಂದೇ ಕುಟುಂಬದ ಮೂವರ ಸಾವು - Vijay Karnataka

ಒಂದೇ ಕುಟುಂಬದ ಮೂವರ ಸಾವು

ವಿಕ ಸುದ್ದಿಲೋಕ 27 Feb 2015, 7:20 am
Subscribe

ತಾಲೂಕಿನ ಸಾಸಲಮರಿ ಬಳಿ ಬುಧವಾರ ರಾತ್ರಿ ಲಾರಿಯೊಂದು ಮ್ಯಾಕ್ಸಿಕ್ಯಾಬ್‌ಗೆ ಡಿಕ್ಕಿಹೊಡೆದು, ಮದುವೆಗೆ ಹೊರಟಿದ್ದ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಒಂದೇ ಕುಟುಂಬದ ಮೂವರ ಸಾವು
ಸಿಂಧನೂರು (ರಾಯಚೂರು); ತಾಲೂಕಿನ ಸಾಸಲಮರಿ ಬಳಿ ಬುಧವಾರ ರಾತ್ರಿ ಲಾರಿಯೊಂದು ಮ್ಯಾಕ್ಸಿಕ್ಯಾಬ್‌ಗೆ ಡಿಕ್ಕಿಹೊಡೆದು, ಮದುವೆಗೆ ಹೊರಟಿದ್ದ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವಧುವಿನ ತಾಯಿ ಜಯಮ್ಮ ಸಾನಬಾಳ (42), ಚಿಕ್ಕಮ್ಮ ಸಿಂಧನೂರು ಪಟೇಲವಾಡಿಯ ಗೌರಮ್ಮ (40) ಹಾಗೂ ಅಜ್ಜಿ ಕೆ.ಹೊಸಳ್ಳಿ ಗ್ರಾಮದ ಶಿವಗಂಗಮ್ಮ (60) ಮೃತರು. ಮ್ಯಾಕ್ಸಿಕ್ಯಾಬ್‌ನಲ್ಲಿದ್ದ 13 ಜನರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಮಸ್ಕಿ ಸಮೀಪದ ಸಾನಬಾಳ ಗ್ರಾಮದ ಪ್ಯಾಟಯ್ಯಸ್ವಾಮಿ ಕುಟುಂಬದ ವಧುವಿನೊಂದಿಗೆ ಸಿರುಗುಪ್ಪದಲ್ಲಿ ಗುರುವಾರ ಬೆಳಗ್ಗೆ 11ಕ್ಕೆ ನಡೆಯಲಿದ್ದ ಮದುವೆಗೆ 18ಕ್ಕೂ ಹೆಚ್ಚು ಜನರು ಮ್ಯಾಕ್ಸಿಕ್ಯಾಬ್‌ನಲ್ಲಿ ತೆರಳುತ್ತಿದ್ದರು. ಅಪಘಾತ ಹಿನ್ನೆಲೆಯಲ್ಲಿ ಮದುವೆ ರದ್ದಾಯಿತು.

ಸಿರುಗುಪ್ಪ ಕಡೆಯಿಂದ ಬಂದ ಲಾರಿ, ಮ್ಯಾಕ್ಸ್‌ಕ್ಯಾಬ್ ಮೇಲೆ ಹರಿದಿದೆ. ಚಾಲಕನ ಹಿಂದೆ ಕುಳಿತಿದ್ದ ಮೂವರು ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರು. ಲಾರಿ ರಭಸಕ್ಕೆ ಮ್ಯಾಕ್ಸಿಕ್ಯಾಬ್ ರಸ್ತೆಯಾಚೆ ನುಗ್ಗಿತು. ರಸ್ತೆ ಗಡಿಯಲ್ಲಿದ್ದ ವಿದ್ಯುತ್ ಕಂಬವೊಂದು ಮ್ಯಾಕ್ಸಿಕ್ಯಾಬ್ ಪಲ್ಟಿಯಾಗದಂತೆ ತಡೆದಿದೆ. ಆದರೆ ಆಗ ವಿದ್ಯುತ್ ಸಂಪರ್ಕ ಸ್ಥಗಿತವಾಗಿತ್ತು ಎನ್ನಲಾಗಿದೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ