ಆ್ಯಪ್ನಗರ

ತಿಂಗಳಾಂತ್ಯಕ್ಕೆ 1ನೇ ಘಟಕ ಕಾರ್ಯಾರಂಭ

ಬೇಸಿಗೆಯಲ್ಲಿ ವಿದ್ಯುತ್ ಅಭಾವ ಎದುರಿಸಲು ಸಿದ್ಧತೆ ಮಾಡಿಕೊಂಡಿದ್ದು, ಜನವರಿ ಅಂತ್ಯಕ್ಕೆ ವೈಟಿಪಿಎಸ್ ಮೊದಲ ಘಟಕದಲ್ಲಿ ವಾಣಿಜ್ಯಿಕ ಬಳಕೆ ವಿದ್ಯುತ್ ಉತ್ಪಾದಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಕರ್ನಾಟಕ ಪವರ್ ಕಾರ್ಪೋರೇಷನ್ (ಕೆಪಿಸಿ) ಎಂ.ಡಿ ಕುಮಾರ್‌ನಾಯಕ ಹೇಳಿದರು.

ವಿಕ ಸುದ್ದಿಲೋಕ 24 Jan 2017, 8:21 am
ರಾಯಚೂರು; ಬೇಸಿಗೆಯಲ್ಲಿ ವಿದ್ಯುತ್ ಅಭಾವ ಎದುರಿಸಲು ಸಿದ್ಧತೆ ಮಾಡಿಕೊಂಡಿದ್ದು, ಜನವರಿ ಅಂತ್ಯಕ್ಕೆ ವೈಟಿಪಿಎಸ್ ಮೊದಲ ಘಟಕದಲ್ಲಿ ವಾಣಿಜ್ಯಿಕ ಬಳಕೆ ವಿದ್ಯುತ್ ಉತ್ಪಾದಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಕರ್ನಾಟಕ ಪವರ್ ಕಾರ್ಪೋರೇಷನ್ (ಕೆಪಿಸಿ) ಎಂ.ಡಿ ಕುಮಾರ್‌ನಾಯಕ ಹೇಳಿದರು.
Vijaya Karnataka Web  1
ತಿಂಗಳಾಂತ್ಯಕ್ಕೆ 1ನೇ ಘಟಕ ಕಾರ್ಯಾರಂಭ


ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘‘ವೈಟಿಪಿಎಸ್‌ನ ಮೊದಲ ಘಟಕದಲ್ಲಿ ಕಂಡುಬಂದಿದ್ದ ತಾಂತ್ರಿಕ ತೊಡಕು ನಿವಾರಿಸಲಾಗಿದೆ. ವಾಣಿಜ್ಯಿಕ ಉತ್ಪಾದನೆಗೆ ಘಟಕವನ್ನು ಸಜ್ಜುಗೊಳಿಸಲಾಗಿದೆ. ವಿದ್ಯುತ್ ಜಾಲ ಸಾಗುವ ದಾರಿಯಲ್ಲಿ ರೈಲ್ವೆ ಕಾಮಗಾರಿ ನಡೆಯುತ್ತಿರುವುದರಿಂದ ವಿದ್ಯುತ್ ಉತ್ಪಾದನೆ ತಡವಾಗಿದೆ. ರೈಲ್ವೆ ಕಾಮಗಾರಿ ಮುಂದಿನ ಒಂದೆರಡು ದಿನಗಳಲ್ಲಿ ಮುಗಿಯಲಿದ್ದು, ಆನಂತರ ವೈಟಿಪಿಎಸ್ ಮೊದಲ ಘಟಕದಲ್ಲಿ ಉತ್ಪಾದನೆ ಆರಂಭಿಸಲಾಗುತ್ತದೆ. ಅದೇ ರೀತಿ ವೈಟಿಪಿಎಸ್ 2ನೇ ಘಟಕದಲ್ಲಿ ಶೀಘ್ರವೇ ವಾಣಿಜ್ಯಿಕ ಬಳಕೆ ವಿದ್ಯುತ್ ಉತ್ಪಾದಿಸಲು ಸಿದ್ಧತೆ ನಡೆದಿದೆ. 2ನೇ ಘಟಕದ ಗಿಯರ್ ಬಾಕ್ಸ್ ನಲ್ಲಿ ಕಂಡು ಬಂದ ದೋಷದ ದುರಸ್ತಿ ನಂತರ ಆ ಘಟಕವನ್ನೂ ಉತ್ಪಾದನೆಗೆ ತೊಡಗಿಸಲಾಗುತ್ತದೆ’’ ಎಂದು ತಿಳಿಸಿದರು.

ನೀರು ಸಂಗ್ರಹ ತೃಪ್ತಿ: ‘‘ಆರ್‌ಟಿಪಿಎಸ್‌ಗೆ ಬೇಸಿಗೆಯಲ್ಲಿ ನೀರಿನ ಅಭಾವ ಸೃಷ್ಟಿಯಾಗದು. ಮತ್ತೊಂದೆಡೆ ತುಂಗಭದ್ರಾ ನದಿಯಲ್ಲಿ ನೀರಿನ ಅಭಾವ ಇರುವುದರಿಂದ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರ(ಬಿಟಿಪಿಎಸ್)ದ 3ನೇ ಘಟಕಕ್ಕೆ ನೀರಿನ ಕೊರತೆಯಾಗಲಿದೆ. ಆದರೆ ಬಿಟಿಪಿಎಸ್ 1 ಹಾಗೂ 2ನೇ ಘಟಕಗಳಿಗೆ ಬೇಸಿಗೆಯಲ್ಲಿ ಅಗತ್ಯ ನೀರು ಸಂಗ್ರಹಿಸಲಾಗುತ್ತಿದೆ. ಬಿಟಿಪಿಎಸ್ ಆವರಣದಲ್ಲಿ ನೀರಿನ ತೊಟ್ಟಿಯಿದ್ದು, ಬೇಸಿಗೆಯಲ್ಲಿ ವಿದ್ಯುತ್ ಉತ್ಪಾದನೆಗೆ ಬೇಕಾಗುವಷ್ಟು ನೀರು ಸಂಗ್ರಹಿಸುವ ಕಾರ್ಯ ಜಾರಿಯಲ್ಲಿದೆ’’ ಎಂದರು.

ಬರಪೀಡಿತ ಘೋಷಣೆಗೆ ಕ್ರಮ: ‘‘ರಾಯಚೂರು ತಾಲೂಕು ಬರಪೀಡಿತ ಎಂದು ಘೋಷಿಸುವಂತೆ ರಾಜ್ಯ ಸರಕಾರಕ್ಕೆ ಈಗಾಗಲೇ ಜಿಲ್ಲಾಡಳಿತದಿಂದ ಪ್ರಸ್ತಾವನೆ ಕಳಿಸಿರುವ ಬಗ್ಗೆ ಶೀಘ್ರವೇ ಸಂಬಂಧಿಸಿದ ಮೇಲಧಿಕಾರಿಗಳ ಜತೆ ಚರ್ಚಿಸಿದ ನಂತರ ಸರಕಾರದ ಗಮನಕ್ಕೆ ತಂದು ಅಗತ್ಯ ಕ್ರಮಕೈಗೊಳ್ಳಲಾಗುತ್ತದೆ. ಬೇಸಿಗೆಯಲ್ಲಿ ಯಾವುದೇ ರೀತಿಯ ಅಭಾವ ಎದುರಾಗದಂತೆ ಜಿಲ್ಲಾಡಳಿತ ಗಮನಹರಿಸಲಿದೆ’’ ಎಂದು ಕುಮಾರ್‌ನಾಯಕ ತಿಳಿಸಿದರು.

ಈ ಸಂದರ್ಭದಲ್ಲಿ ಡಿಸಿ ಡಾ.ಬಗಾದಿ ಗೌತಮ್, ಜಿಪಂ ಸಿಇಒ ಕೂರ್ಮಾರಾವ್ ಎಂ., ಅಪರ ಡಿಸಿ ಗೋವಿಂದರೆಡ್ಡಿ ಇದ್ದರು.

.................
ಎಸ್ಕಾಂಗಳಿಂದ 15000ಕೋಟಿ ರೂ. ಬಾಕಿ

‘‘ರಾಜ್ಯ ಬೆಸ್ಕಾಂ, ಹೆಸ್ಕಾಂ ಸೇರಿ ನಾನಾ ವಿದ್ಯುತ್ ಕಂಪನಿಗಳಿಂದ ಸುಮಾರು 15,000 ಕೋಟಿ ರೂ. ಬಾಕಿಯಿದೆ. ಈ ಹಿನ್ನೆಲೆಯಲ್ಲಿ ಸರಕಾರಕ್ಕೆ ಬಾಕಿ ಪಾವತಿಗೆ ಮನವಿ ಮಾಡಲಾಗಿತ್ತು. ಸರಕಾರ 350 ಕೋಟಿ ರೂ. ಬಿಡುಗಡೆ ಮಾಡಿದೆ. ಬಾಕಿ ಮೊತ್ತವನ್ನೂ ಶೀಘ್ರ ಪಡೆಯುವ ನಿರೀಕ್ಷೆ ಹೊಂದಲಾಗಿದೆ’’ ಎಂದು (ಕೆಪಿಸಿ) ಎಂ.ಡಿ ಕುಮಾರ್‌ನಾಯಕ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ