ಆ್ಯಪ್ನಗರ

ಪದವಿ ಪರೀಕ್ಷೆಯಲ್ಲಿ ನಕಲು: 19 ವಿದ್ಯಾರ್ಥಿಗಳು ಡಿಬಾರ್

ಗುಲ್ಬರ್ಗ ವಿಶ್ವ ವಿದ್ಯಾಲಯ ಅಧೀನದ ಸ್ಥಳೀಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ನಡೆದ ಪದವಿ ವಿಭಾಗದ ನಾನಾ ಪರೀಕ್ಷೆಗಳಲ್ಲಿ ನಕಲು ಮಾಡುತ್ತಿದ್ದ 19 ವಿದ್ಯಾರ್ಥಿಗಳನ್ನು ಪರೀಕ್ಷಾ ಸಂಚಾರಿ ಜಾಗೃತ ದಳ ಡಿಬಾರ್ ಮಾಡಿದೆ.

ವಿಕ ಸುದ್ದಿಲೋಕ 28 May 2016, 8:19 am
ಮುದಗಲ್ (ರಾಯಚೂರು); ಗುಲ್ಬರ್ಗ ವಿಶ್ವ ವಿದ್ಯಾಲಯ ಅಧೀನದ ಸ್ಥಳೀಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ನಡೆದ ಪದವಿ ವಿಭಾಗದ ನಾನಾ ಪರೀಕ್ಷೆಗಳಲ್ಲಿ ನಕಲು ಮಾಡುತ್ತಿದ್ದ 19 ವಿದ್ಯಾರ್ಥಿಗಳನ್ನು ಪರೀಕ್ಷಾ ಸಂಚಾರಿ ಜಾಗೃತ ದಳ ಡಿಬಾರ್ ಮಾಡಿದೆ.
Vijaya Karnataka Web  19
ಪದವಿ ಪರೀಕ್ಷೆಯಲ್ಲಿ ನಕಲು: 19 ವಿದ್ಯಾರ್ಥಿಗಳು ಡಿಬಾರ್


ವೈ.ಬಿ.ನಾಡಿಗೇರ್ ನೇತೃತ್ವದ ಪರೀಕ್ಷಾ ಸಂಚಾರಿ ಜಾಗೃತ ದಳ, ಕಾಲೇಜಿಗೆ ಭೇಟಿನೀಡಿದ ಸಂದರ್ಭದಲ್ಲಿ ನಾನಾ ವಿಭಾಗಗಳ 19 ವಿದ್ಯಾರ್ಥಿಗಳು ನಕಲು ಮಾಡುತ್ತಿದ್ದುದು ಪತ್ತೆಯಾಯಿತು. ಬಿ.ಎಸ್ಸಿ 4ನೇ ಸೆಮ್ ಭೌತಶಾಸ್ತ್ರ ಪರೀಕ್ಷೆಯಲ್ಲಿ 9 ವಿದ್ಯಾರ್ಥಿಗಳು, ಬಿ.ಎ. 4ನೇ ಸೆಮ್ ಇತಿಹಾಸ ಪರೀಕ್ಷೆ ಬರೆಯುತ್ತಿದ್ದ 9 ಹಾಗೂ ಬಿ.ಕಾಂ ವಿಭಾಗದ ಒಬ್ಬ ವಿದ್ಯಾರ್ಥಿ ಡಿಬಾರ್ ಆಗಿದ್ದಾರೆ. ಈ ಜಾಗೃತ ದಳದಲ್ಲಿ ಭೀಮಾಶಂಕರ ಹಾಗೂ ಎಂ.ಎಸ್.ರಾಜಶ್ರೀ ಇದ್ದರು. ಈ ಸಂದರ್ಭದಲ್ಲಿ ಪ್ರಾಚಾರ್ಯ ನೂರ್‌ಬಾಷಾ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ