ರಾಯಚೂರು; ಕಂಡೆನ್ಸರ್ ಟ್ಯೂಬ್ ಸೋರಿಕೆ ಹಿನ್ನೆಲೆಯಲ್ಲಿ ಕಳೆದೆರಡು ದಿನಗಳಿಂದ ಸ್ಥಗಿತಗೊಂಡಿದ್ದ, ಶಕ್ತಿನಗರದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರ(ಆರ್ಟಿಪಿಎಸ್)ದ 6ನೇ ಘಟಕ, ಮಂಗಳವಾರದಿಂದ ವಿದ್ಯುತ್ ಉತ್ಪಾದನೆ ಪುನಾರಂಭಿಸಿದೆ.
ಸದ್ಯ ವಿದ್ಯುತ್ ಕೇಂದ್ರದ 5ನೇ ಘಟಕವು ಬಾಯ್ಲರ್ ಟ್ಯೂಬ್ ಸೋರಿಕೆಯಿಂದ ದುರಸ್ತಿಯಲ್ಲಿದೆ. 3 ಮತ್ತು 8ನೇ ಘಟಕಗಳು ವಾರ್ಷಿಕ ನಿರ್ವಹಣೆಯಲ್ಲಿವೆ. ಉಳಿದ ಐದು ಘಟಕಗಳಿಂದ ಒಟ್ಟು 850 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಲಾಯಿತು ಎಂದು ಆರ್ಟಿಪಿಎಸ್ ಮೂಲಗಳು ತಿಳಿಸಿವೆ.