ಆ್ಯಪ್ನಗರ

12.39ಲಕ್ಷ ರೂ. ಹಳೆ ನೋಟು ಪತ್ತೆ

ಹಳೆಯ 500 ಹಾಗೂ 1ಸಾವಿರ ರೂ. ಮುಖಬೆಲೆಯ ನೋಟುಗಳ ರದ್ದತಿ, ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಹುಂಡಿಯ ಸಂಗ್ರಹದ ಮೇಲೆ ಪ್ರತಿಕೂಲ ಪರಿಣಾಮ ಬೀರಿಲ್ಲ. ಮಂಗಳವಾರ ಹುಂಡಿಯ ಎಣಿಕೆ ಶುರುವಾಗಿದ್ದು, ಮೊದಲ ದಿನ 12.39ಲಕ್ಷ ರೂ. ಮೊತ್ತದ ಹಳೆಯ ನೋಟು ಪತ್ತೆಯಾಗಿವೆ.

ವಿಕ ಸುದ್ದಿಲೋಕ 29 Dec 2016, 8:27 am
ರಾಯಚೂರು: ಹಳೆಯ 500 ಹಾಗೂ 1ಸಾವಿರ ರೂ. ಮುಖಬೆಲೆಯ ನೋಟುಗಳ ರದ್ದತಿ, ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಹುಂಡಿಯ ಸಂಗ್ರಹದ ಮೇಲೆ ಪ್ರತಿಕೂಲ ಪರಿಣಾಮ ಬೀರಿಲ್ಲ. ಮಂಗಳವಾರ ಹುಂಡಿಯ ಎಣಿಕೆ ಶುರುವಾಗಿದ್ದು, ಮೊದಲ ದಿನ 12.39ಲಕ್ಷ ರೂ. ಮೊತ್ತದ ಹಳೆಯ ನೋಟು ಪತ್ತೆಯಾಗಿವೆ.
Vijaya Karnataka Web 12 39
12.39ಲಕ್ಷ ರೂ. ಹಳೆ ನೋಟು ಪತ್ತೆ


ಹಣದ ಎಣಿಕೆ ಬುಧವಾರವೂ ಮುಂದುವರಿಯಿತು. ಮಂಗಳವಾರ ಬೆಳಗ್ಗೆ 11,84,500 ರೂ. ಹಳೆಯ ನೋಟುಗಳು ದೊರೆತಿದ್ದು, ಅದರಲ್ಲಿ 1ಸಾವಿರ ರೂ. ಮುಖಬೆಲೆಯ 579 ಹಾಗೂ 500 ರೂ. ಮುಖಬೆಲೆಯ 1211ಹಳೆಯ ನೋಟುಗಳನ್ನು ಭಕ್ತರು ಹಾಕಿರುವುದು ಬಯಲಾಗಿದೆ. ಅದೇ ದಿನ ಸಂಜೆ ನಡೆದ ಎಣಿಕೆ ವೇಳೆ ಒಟ್ಟು 55,500ರೂ. ಪೈಕಿ 1 ಸಾವಿರ ರೂ. ಮುಖಬೆಲೆಯ 15 ಹಾಗೂ 500ರೂ. ಮುಖಬೆಲೆಯ 81 ರದ್ದಾದ ನೋಟುಗಳು ಪತ್ತೆಯಾದವು. ಹಳೆಯ ರದ್ದಾದ ನೋಟುಗಳು ಸೇರಿ ಒಟ್ಟು 90.83ಲಕ್ಷ ರೂ.ಗಳನ್ನು ಭಕ್ತರು ಹುಂಡಿಗೆ ಕಾಣಿಕೆಯ ರೂಪದಲ್ಲಿ ಹಾಕಿರುವುದು ಮಂಗಳವಾರ ಸಂಜೆಯವರೆಗೆ ನಡೆದ ಎಣಿಕೆಯಲ್ಲಿ ಕಂಡುಬಂದಿದೆ.

ಸಂಗ್ರಹ ಅಬಾಧಿತ: ಸಾಮಾನ್ಯವಾಗಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಶ್ರೀಮಠಕ್ಕೆ ಭೇಟಿ ನೀಡಿದರೆ ಮಾತ್ರ ಹುಂಡಿಯ ಹಣದ ಸಂಗ್ರಹ 1.20ಕೋಟಿ ರೂ. ವರೆಗೆ ತಲುಪುತ್ತದೆ. ರಾಯರ ಆರಾಧನೆ ಸೇರಿ ವಿವಿಧ ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಮಂತ್ರಾಲಯಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸುತ್ತಾರೆ. ಆಗ ಹುಂಡಿಗೆ ಹೆಚ್ಚಿನ ಹಣ ಹರಿದು ಬರುತ್ತದೆ. ನೋಟು ರದ್ದತಿ ಹಿನ್ನೆಲೆಯಲ್ಲಿ ಮಂತ್ರಾಲಯಕ್ಕೆ ಆಗಮಿಸುವ ಭಕ್ತರ ಪ್ರಮಾಣ ಮೊದಲ ತಿಂಗಳಿನಲ್ಲಿ ತಗ್ಗಿತ್ತು.

ಆದರೆ, ಚಿಲ್ಲರೆ ಹಣದ ಹರಿವು ಹೆಚ್ಚಳ ಕಂಡಂತೆ ಭಕ್ತರು ಮಂತ್ರಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುವುದು ಕಂಡುಬಂದಿದೆ. ಈಚೆಗೆ ಮಂತ್ರಾಲಯ ಮಠದಿಂದ ಆಯೋಜಿಸಿದ್ದ ಶ್ರೀಮನ್ನ್ಯಾಯಸುಧಾ ಮಂಗಳ ಮಹೋತ್ಸವ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿನೀಡಿದ್ದು, ಹುಂಡಿಯಲ್ಲಿ ಹಣದ ಸಂಗ್ರಹ ಹೆಚ್ಚಳಕ್ಕೆ ಕಾರಣ ಎಂದು ಶ್ರೀಮಠದ ಮೂಲಗಳು ತಿಳಿಸಿವೆ.

..............
ಹಳೆಯ ನೋಟುಗಳ ರದ್ದತಿಯಿಂದ ಮಂತ್ರಾಲಯ ಮಠದ ಹುಂಡಿಯ ಸಂಗ್ರಹದ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರಿಲ್ಲ. ಹುಂಡಿಯ ಹಣ ಸಂಗ್ರಹ ಪ್ರಮಾಣದಲ್ಲಿ ಏರಿಳಿತ ಸಹಜ.

-ಐ..ಪಿ.ನರಸಿಂಹಮೂರ್ತಿ, ಸಹಾಯಕ ವ್ಯವಸ್ಥಾಪಕ, ಮಂತ್ರಾಲಯ ಮಠ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ