ಆ್ಯಪ್ನಗರ

2.50ಕೋಟಿ ಬಾಕಿ ವೇತನ ಪಾವತಿಗೆ ಅಧಿಕಾರಿಗಳು ನಕಾರ

ನಗರಸಭೆ ಸಫಾಯಿ ಕರ್ಮಚಾರಿಗಳ 5 ತಿಂಗಳ ಬಾಕಿ ವೇತನ ಪಾವತಿಸುವಂತೆ ಸಫಾಯಿ ಕರ್ಮಚಾರಿಗಳ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಶರತ್‌ ಬಿ., ಅವರಿಗೆ ಬುಧವಾರ ಒತ್ತಾಯಿಸಿದರು.

Vijaya Karnataka 16 May 2019, 5:00 am
ರಾಯಚೂರು ; ನಗರಸಭೆ ಸಫಾಯಿ ಕರ್ಮಚಾರಿಗಳ 5 ತಿಂಗಳ ಬಾಕಿ ವೇತನ ಪಾವತಿಸುವಂತೆ ಸಫಾಯಿ ಕರ್ಮಚಾರಿಗಳ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಶರತ್‌ ಬಿ., ಅವರಿಗೆ ಬುಧವಾರ ಒತ್ತಾಯಿಸಿದರು.
Vijaya Karnataka Web 2 50 crore paid salary payments
2.50ಕೋಟಿ ಬಾಕಿ ವೇತನ ಪಾವತಿಗೆ ಅಧಿಕಾರಿಗಳು ನಕಾರ


ನಗರದ ಡಿಸಿ ಕಚೇರಿ ಎದುರು ಜಮಾಯಿಸಿದ ಪದಾಧಿಕಾರಿಗಳು, ನಗರಸಭೆ ಅಧಿಕಾರಿಗಳು ಕಳೆದ ಐದು ತಿಂಗಳಿಂದ ಸಫಾಯಿ ಕರ್ಮಚಾರಿಗಳ ಬಾಕಿ ವೇತನ ನೀಡುತ್ತಿಲ್ಲ. ನಗರಸಭೆಯಲ್ಲಿ ಅನುದಾನ ಲಭ್ಯವಿದ್ದರೂ, ಉದ್ಧೇಶ ಪೂರ್ವಕವಾಗಿ ವೇತನ ತಡೆಹಿಡಿಯಲಾಗುತ್ತಿದೆ. ನಗರಸಭೆಯಲ್ಲಿ 280 ಸಫಾಯಿ ಕರ್ಮಚಾರಿಗಳು ಹಾಗೂ 22 ಚಾಲಕರು ಕೆಲಸ ಮಾಡುತ್ತಿದಾರೆ. 302 ನೌಕರರ ಸುಮಾರು 2.50ಕೋಟಿ ರೂ. ಬಾಕಿ ವೇತನ ಪಾವತಿ ಮಾಡದೇ ಬೇಜವಾಬ್ದಾರಿತನ ಪ್ರದರ್ಶಿಸಲಾಗುತ್ತಿದೆ.

ಶ್ರಮವಹಿಸಿ ದುಡಿದವರಿಗೆ ವೇತನ ನೀಡದ ಕುರಿತು ನಗರ ಶಾಸಕ ಡಾ.ಶಿವರಾಜ್‌ ಪಾಟೀಲ್‌ ಅವರ ಗಮನಕ್ಕೆ ತಂದರೂ ಕಿವಿ ಮೇಲೆ ಹಾಕಿಕೊಳ್ಳುತ್ತಿಲ್ಲ. ಶಾಸಕರ ಬೇಜವಾಬ್ದಾರಿಯಿಂದ ಸಫಾಯಿ ಕರ್ಮಚಾರಿಗಳಿಗೆ ಇಂತಹ ದುಸ್ಥಿತಿ ಬಂದಿದೆ. ಜಿಲ್ಲಾಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಕ್ರಮವಹಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಫಾಯಿ ಕರ್ಮಚಾರಿಗಳನ್ನು ಕಾಡಿಸಲೆಂದೇ ವೇತನ ತಡೆಹಿಡಿದಿದೆ. ವೇತನವಿಲ್ಲದ ಕಾರಣ ಸಫಾಯಿ ಕರ್ಮಚಾರಿಗಳ ಮನೆಯಲ್ಲಿ ಆರ್ಥಿಕ ಸಂಕಷ್ಟ ತಲೆದೋರಿದೆ. ಮಕ್ಕಳ ಶಾಲೆ ಶುಲ್ಕ, ಆರೋಗ್ಯ ಸೇರಿ ದೈನಂದಿನ ಖರ್ಚಿಗೆ ಪರದಾಡುವಂತಾಗಿದೆ. ಈಗಲಾದರೂ ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ವೇತನ ಪಾವತಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮವಹಿಸಬೇಕು. ಸಫಾಯಿ ಕರ್ಮಚಾರಿಗಳಿಗೆ ಶೀಘ್ರ ಬಾಕಿ ವೇತನ ಪಾವತಿಸಿ ಅನುಕೂಲ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಎಸ್‌.ಮಾರೆಪ್ಪ, ಉರುಕುಂದಪ್ಪ, ಮುತ್ತಣ್ಣ, ಯಲ್ಲಮ್ಮ, ಜಮಲಮ್ಮ, ಶಂಶಾಲಪ್ಪ, ನಾಗಪ್ಪ, ನಾಗರಾಜ್‌ ಇತರರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ