ಆ್ಯಪ್ನಗರ

ಸಮ್ಮೇಳನ ಸ್ಥಳದ ಬಿಸಿ ಬಿಸಿ ಚರ್ಚೆ

ಜಿಲ್ಲಾಮಟ್ಟದ ಸಾಹಿತ್ಯ ಸಮ್ಮೇಳನ ಅ.22.23ರಂದು ಸಿಂಧನೂರು ತಾಲೂಕಿನ ಕಮ್ಮವಾರಿ ಕಲ್ಯಾಣ ಮಂಟಪದಲ್ಲಿನಡೆಯುತ್ತಿದ್ದು ಸ್ಥಳಾವಕಾಶದ ಕುರಿತು ತಾಲೂಕಿನ ಕೆಲ ಗ್ರಾಮೀಣ ಭಾಗದ ಕನ್ನಡ ಪ್ರೇಮಿಗಳು ಫೇಸ್‌ಬುಕ್‌ನಲ್ಲಿಬಿಸಿಬಿಸಿ ಚರ್ಚೆ ನಡೆಸಿದ್ದಾರೆ.

Vijaya Karnataka 21 Oct 2019, 3:34 pm
ಜಾಲಿಹಾಳ: ಜಿಲ್ಲಾಮಟ್ಟದ ಸಾಹಿತ್ಯ ಸಮ್ಮೇಳನ ಅ.22.23ರಂದು ಸಿಂಧನೂರು ತಾಲೂಕಿನ ಕಮ್ಮವಾರಿ ಕಲ್ಯಾಣ ಮಂಟಪದಲ್ಲಿನಡೆಯುತ್ತಿದ್ದು ಸ್ಥಳಾವಕಾಶದ ಕುರಿತು ತಾಲೂಕಿನ ಕೆಲ ಗ್ರಾಮೀಣ ಭಾಗದ ಕನ್ನಡ ಪ್ರೇಮಿಗಳು ಫೇಸ್‌ಬುಕ್‌ನಲ್ಲಿಬಿಸಿಬಿಸಿ ಚರ್ಚೆ ನಡೆಸಿದ್ದಾರೆ. ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕನ್ನಡೇತರ ಸ್ಥಳವೇ ಬೇಕಾಗಿತ್ತಾ? ಇದು ಕನ್ನಡಿಗರ ಸ್ವಾಭಿಮಾನದ ವಿಚಾರ, ಈ ಕುರಿತು ತಾಲೂಕಿನಲ್ಲಿರುವ ಕನ್ನಡಪರ ಸಂಘಟನೆಗಳ ಒಕ್ಕೂಟದ ಯಾವೊಬ್ಬ ಅಧ್ಯಕ್ಷರು, ಸದಸ್ಯರೂ ಚರ್ಚಿಸಿಲ್ಲ. ಇದು ರಾಜಕೀಯ ಪ್ರೇರಿತವಾಗಿದೆಯಾ ಎಂದು ಪ್ರಸ್ತಾಪಿಸಿದ್ದಾರೆ. ಕೆಲವರು, ಇದು ತೆಲುಗು ಸಾಹಿತ್ಯ ಸಮ್ಮೇಳನವಲ್ಲ, ಕನ್ನಡ ಸಾಹಿತ್ಯ ಸಮ್ಮೇಳನ. ತಾಲೂಕಿನಲ್ಲಿಕನ್ನಡಿಗರ ಭವನಗಳು ಹಾಗೂ ಸ್ಥಳಗಳು ದೊಡ್ಡವಿದ್ದು ಅವರೊಂದಿಗೆ ಚರ್ಚಿಸಬಹುದಿತ್ತು ಎಂದು ಸಲಹೆ ನೀಡಿದ್ದಾರೆ. ಇದಕ್ಕೆ ಜಿಲ್ಲಾಸಾಹಿತ್ಯ ಸಮ್ಮೇಳನದ ಸಮಿತಿಯೇ ಉತ್ತರಿಸಬೇಕು ಎಂದು ಕಮೆಂಟ್‌ ಮಾಡಿದ್ದಾರೆ. ಇನ್ನು ಕೆಲವರು ಇಷ್ಟುದಿನ ಧರ್ಮ, ಜಾತಿಗಳಿಗೆ ಸೀಮಿತವಾಗಿದ್ದ ರಾಜಕೀಯ, ಈಗ ಭಾಷೆಯಲ್ಲೂಶುರುವಾಗಿದೆಯಾ ಎಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿನ ಈ ಚರ್ಚೆ ಕೆಲ ಆಂಧ್ರ ನಿವಾಸಿಗರಿಗೆ ಇರುಸುಮುರಿಸಿಗೆ ಕಾರಣವಾಗಿದೆ.
Vijaya Karnataka Web a discussion of a conference venue
ಸಮ್ಮೇಳನ ಸ್ಥಳದ ಬಿಸಿ ಬಿಸಿ ಚರ್ಚೆ



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ