ಆ್ಯಪ್ನಗರ

ಆಧಾರ್‌ ಅದಾಲತ್‌ನಲ್ಲಿ ಅವ್ಯವಸ್ಥೆ

ತಾ.ಪಂ. ಕಚೇರಿಯಲ್ಲಿ ಅ.15ರಿಂದ ತಾಲೂಕಾಡಳಿತ ಹಮ್ಮಿಕೊಂಡಿರುವ ಆಧಾರ್‌ ಅದಾಲತ್‌ ಅವ್ಯವಸ್ಥೆಯಿಂದ ಕೂಡಿದ್ದರಿಂದ ಸಾರ್ವಜನಿಕರು ಪರದಾಡುವಂತಾಗಿದೆ.

Vijaya Karnataka 18 Oct 2018, 5:00 am
ಲಿಂಗಸುಗೂರು : ತಾ.ಪಂ. ಕಚೇರಿಯಲ್ಲಿ ಅ.15ರಿಂದ ತಾಲೂಕಾಡಳಿತ ಹಮ್ಮಿಕೊಂಡಿರುವ ಆಧಾರ್‌ ಅದಾಲತ್‌ ಅವ್ಯವಸ್ಥೆಯಿಂದ ಕೂಡಿದ್ದರಿಂದ ಸಾರ್ವಜನಿಕರು ಪರದಾಡುವಂತಾಗಿದೆ.
Vijaya Karnataka Web RAC-RCH17LNG08


ಆಧಾರ್‌ ತಿದ್ದುಪಡಿಗೆ ಜನ ಸಾಗರವೇ ಹರಿದು ಬಂದಿದೆ. ಮೊದಲ ದಿನ 147, ಎರಡನೇ ದಿನ 90 ಜನರ ಆಧಾರ್‌ ತಿದ್ದುಪಡಿ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸುತ್ತಿದ್ದರೂ ಬೆರಳೆಣೆಕೆಯಷ್ಟು ಜನರಿಗೆ ತಿದ್ದುಪಡಿ ಮಾಡಿಸಲಾಗುತ್ತಿದೆ. ಕೆಲವೇ ಕಂಪ್ಯೂಟರ್‌ಗಳನ್ನು ಅಳವಡಿಸಿರುವುದರಿಂದ ಜನದಟ್ಟಣೆಗೆ ಅವಕಾಶ ಮಾಡಿಕೊಟ್ಟಾಂತಾಗಿದೆ.

ಬುಧವಾರ 40 ಜನರಿಗೆ ಟೋಕನ್‌ ನೀಡಲಾಗಿತ್ತು. ತಾ.ಪಂ. ಕಚೇರಿಯಲ್ಲಿ ಸಭೆ ಇದ್ದುದರಿಂದ ಹಾಗೂ ವಿದ್ಯುತ್‌ ಕೈಕೊಟ್ಟಿದ್ದರಿಂದ ಆಧಾರ್‌ ತಿದ್ದುಪಡಿ ಕಾರ್ಯವನ್ನು ಪುರಸಭೆ ಕಚೇರಿಗೆ ಸ್ಥಳಾಂತರಿಸಲಾಗಿದೆ. ಇದರಿಂದ ನಾಗರಿಕರು ಕಚೇರಿಯಿಂದ ಕಚೇರಿಗೆ ಅಲೆದಾಡುವಂತಾಗಿದೆ.

ಗ್ರಾಮೀಣ ಭಾಗದ ಜನರು ಅದಾಲತ್‌ನಲ್ಲಿ ತಿದ್ದುಪಡಿಗೆ ಬಂದರೆ ಟೋಕನ್‌ ಸಿಗದೇ ಸಂಜೆಯವರೆಗೂ ಕಾಯುವಂತಾಗಿದೆ. ಮಕ್ಕಳೊಂದಿಗೆ ಬೆಳಗ್ಗೆಯೇ ಬಂದು ಸರದಿಯಲ್ಲಿ ನಿಲ್ಲುವಂತಾಗಿದೆ. ಈ ಹಿಂದೆ ಖಾಸಗಿ ಕಂಪ್ಯೂಟರ್‌ ಕೇಂದ್ರಗಳಿಗೆ ನೀಡಬೇಕು. ಇಲ್ಲವೇ ಪ್ರತಿ ಗ್ರಾ.ಪಂ.ನಲ್ಲಿ ಆಧಾರ್‌ ಕೇಂದ್ರ ತೆರೆಯಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

ತಾ.ಪಂ. ಸಭಾಂಗಣದಲ್ಲಿ ಸಭೆ ನಿಗದಿಯಾಗಿದ್ದರಿಂದ ಆಧಾರ್‌ ಅದಾಲತ್‌ ಅನ್ನು ಪುರಸಭೆ ಕಚೇರಿಗೆ ಸ್ಥಳಾಂತರಿಸಲಾಗಿದೆ. ಅದಾಲತ್‌ ಅನ್ನು ಅ.18ವರಿಗೆ ವಿಸ್ತರಿಸಲಾಗಿದೆ ಎಂದು ಸಹಾಯಕ ಆಯುಕ್ತ ಎಂ.ಪಿ.ಮಾರುತಿ ತಿಳಿಸಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ