ಆ್ಯಪ್ನಗರ

‘ಕೊಲೆ ಆರೋಪಿಗಳನ್ನು ಉಗ್ರವಾಗಿ ಶಿಕ್ಷಿಸಿ’

ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಸರಕಾರಗಳ ನಿರ್ಲಕ್ಷ ್ಯದಿಂದಾಗಿ ದಿನೇದಿನೆ ಪೈಶಾಚಿಕ ಕೃತ್ಯಗಳು ಅಧಿಕಗೊಳ್ಳುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂದು ಜಮೀಅತ್‌ ಉಲಮಾ-ಎ-ಹಿಂದ್‌ನ ಅಧ್ಯಕ್ಷ ಮೌಲಾನಾ ಸಮೀರ್‌ ಹೇಳಿದರು.

Vijaya Karnataka Web 21 Apr 2018, 5:00 am
ಮಸ್ಕಿ : ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಸರಕಾರಗಳ ನಿರ್ಲಕ್ಷ ್ಯದಿಂದಾಗಿ ದಿನೇದಿನೆ ಪೈಶಾಚಿಕ ಕೃತ್ಯಗಳು ಅಧಿಕಗೊಳ್ಳುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂದು ಜಮೀಅತ್‌ ಉಲಮಾ-ಎ-ಹಿಂದ್‌ನ ಅಧ್ಯಕ್ಷ ಮೌಲಾನಾ ಸಮೀರ್‌ ಹೇಳಿದರು.
Vijaya Karnataka Web assassinate murderers
‘ಕೊಲೆ ಆರೋಪಿಗಳನ್ನು ಉಗ್ರವಾಗಿ ಶಿಕ್ಷಿಸಿ’


ಕಥುವಾದ ಅಪ್ರಾಪ್ತ ಬಾಲಕಿ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಒತ್ತಾಯಿಸಿ ಮುಸ್ಲಿಂ ಸಮುದಾಯದಿಂದ ಹಮ್ಮಿಕೊಳ್ಳಲಾಗಿದ್ದ ಬೃಹತ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಶೋಷಿತರ, ದಲಿತರ ಹಾಗೂ ಅಲ್ಪಸಂಖ್ಯಾತರ ಮೇಲೆ ಇತ್ತೀಚೆಗೆ ಹೇಯ ಕೃತ್ಯಗಳು ನಡೆಯುತ್ತಿವೆ. ಜಮ್ಮು ಮತ್ತು ಕಾಶ್ಮೀರ ರಾಜ್ಯದ ಕಥುವಾ ಗ್ರಾಮದ ದೇವಸ್ಥಾನವೊಂದರಲ್ಲಿ ಅಪ್ರಾಪ್ತ ಹೆಣ್ಣು ಮಗಳ ಮೇಲೆ ಕಾಮುಕರು ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆಗೈದಿದ್ದು ಇಡೀ ದೇಶವೇ ತಲೆತಗ್ಗಿಸುವಂತೆ ಮಾಡಿದೆ. ಇವುಗಳನ್ನು ತಡೆಯುವ ನಿಟ್ಟಿನಲ್ಲಿ ಕಠಿಣ ಶಿಕ್ಷೆಯನ್ನು ವಿಧಿಸುವ ಕಾನೂನು ರೂಪಿಸಬೇಕೆಂದರು. ಹೋರಾಟಗಾರ ನೀಲಕಂಠಪ್ಪ ಭಜಂತ್ರಿ ಮಾತನಾಡಿ, ಅತ್ಯಾಚಾರ ಹಾಗೂ ಕೊಲೆಗಳಂತಹ ಭೀಕರ ಕೃತ್ಯ ನಡೆಸುತ್ತಿರುವವರ ರುಂಡ ಕತ್ತರಿಸುವ ಶಿಕ್ಷೆ ನೀಡಬೇಕೆಂದರು. ಮುಖಂಡ ಅಬ್ದುಲ್‌ ಗನಿಸಾಬ್‌ ಮಾತನಾಡಿ, ಮುಂದಿನ ದಿನಗಳಲ್ಲಿ ಮಹಿಳೆಯರು ಹಾಗೂ ಶೋಷಿತರಿಗೆ ಜೀವ ಭಯ ಕಾಡುತ್ತಿದ್ದು, ಮುಂದಿನ ದಿನಗಳಲ್ಲಿ ಮಹಿಳೆಯರ ರಕ್ಷ ಣೆಗೆ ಮುಂದಾಗಬೇಕು. ಮುಂಬರವ ದಿನಗಳಲ್ಲಿ ಇಂತಹ ಪ್ರಕರಣಗಳು ಮರುಕಳಿಸದಂತೆ ಕ್ರಮಕೈಗೊಳ್ಳಬೇಕೆಂದರು. ಮುಖಂಡ ಪ್ರಸನ್ನ ಪಾಟೀಲ್‌,

ಮಸೂದಪಾಷಾ ಮಾತನಾಡಿದರು. ನಂತರ ರಾಷ್ಟ್ರಪತಿಗೆ ಮನವಿ ಪತ್ರವನ್ನು ಸ್ಥಳಕ್ಕಾಗಮಿದ್ದ ಉಪ ತಹಸೀಲ್ದಾರ್‌ ಪ್ರಕಾಶ ಬುಳ್ಳಾ ಅವರಿಗೆ ಸಲ್ಲಿಸಿದರು.

ಪ್ರತಿಭಟನಾ ಮೆರವಣಿಗೆ: ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಖಂಡಿಸಿ ನಡೆದ ಪ್ರತಿಭಟನಾ ಮೆರವಣಿಗೆಯು ಪಟ್ಟಣದ ಕನಕ ವೃತ್ತದ ಹತ್ತಿರವಿರುವ ಬಿಲಾಲ್‌ ಮಸೀದಿಯಿಂದ ಪ್ರಾರಂಭೊಂಡು ತೇರ್‌ ಬಜಾರ್‌, ದೈವದಕಟ್ಟೆ, ಮೇನ್‌ ಬಜಾರ್‌, ಖಲೀಲ್‌ ಅಹ್ಮದ್‌ ವೃತ್ತ, ಅಗಸಿ, ಅಶೋಕ ವೃತ್ತದ ಮೂಲಕ ಹಳೆ ಬಸ್‌ ನಿಲ್ದಾಣದ ಹತ್ತಿರದ ಅಂಬೇಡ್ಕರ್‌ ಪ್ರತಿಮೆವರೆಗೆ ಸಾಗಿತು. ನಂತರಎರಡು ನಿಮಿಷ ಮೌನಾಚರಣೆ ಮಾಡಲಾಯಿತು.

ಮುಖಂಡರಾದ ಅಬ್ದುಲ್‌ ಅಜೀಜ್‌, ಇಕ್ಬಾಲ್‌ಸಾಬ್‌, ಅಬ್ದುಲ್‌ ರಜಾಕ್‌, ಮೊಹ್ಮದ್‌ಹುಸೇನ್‌ ಶೇಡ್ಮಿ, ಶಬ್ಬಿರ್‌ ಚೌದ್ರಿ, ಮಸೂದ್‌ ಪಾಷ, ಗೌಸ್‌ ಪಾಷ, ಅಜ್ಮಿರ್‌, ಹುಸೇನ್‌ ಪಟೇಲ್‌, ನಜೀರ್‌, ಫಕೀರಸಾಬ್‌, ಮುಸ್ತಫಾ ನಿಶಾನಿ, ವಸೀಮ್‌ ಮಿಟ್ಟಿಮನಿ, ಖಾದರ್‌ ಬಾಷ, ನಬೀಸಾಬ್‌ ಮೆಕ್ಯಾನಿಕ್‌ ಸೇರಿ ನೂರಾರು ಜನ ಕಾರ್ಯಕರ್ತರು ಪಾಲ್ಗೊಂಡಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ