ಆ್ಯಪ್ನಗರ

ಒಬ್ಬನ ಮೇಲೆ ಹಲ್ಲೆ

ಅಂತರ್ ಧರ್ಮೀಯ ಮದುವೆಯಾಗಿದ್ದ ಗಹಿಣಿಯ ಅನುಮಾನಾಸ್ಪಾದ ಸಾವಿನ ಹಿನ್ನೆಲೆಯಲ್ಲಿ ಗೃಹಿಣಿಯ ಸಂಬಂಧಿಕರು, ಬಸ್ ನಿಲ್ದಾಣ ಬಳಿಯ ಬಟ್ಟೆ ಅಂಗಡಿಯ ವ್ಯಕ್ತಿಯೊಬ್ಬರ ಮೇಲೆ ಸೋಮವಾರ ಹಲ್ಲೆ ಮಾಡಿದ್ದು, ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Vijaya Karnataka 26 Jun 2019, 12:00 am
ಹಟ್ಟಿಚಿನ್ನದಗಣಿ (ರಾಯಚೂರು): ಅಂತರ್ ಧರ್ಮೀಯ ಮದುವೆಯಾಗಿದ್ದ ಗಹಿಣಿಯ ಅನುಮಾನಾಸ್ಪಾದ ಸಾವಿನ ಹಿನ್ನೆಲೆಯಲ್ಲಿ ಗೃಹಿಣಿಯ ಸಂಬಂಧಿಕರು, ಬಸ್ ನಿಲ್ದಾಣ ಬಳಿಯ ಬಟ್ಟೆ ಅಂಗಡಿಯ ವ್ಯಕ್ತಿಯೊಬ್ಬರ ಮೇಲೆ ಸೋಮವಾರ ಹಲ್ಲೆ ಮಾಡಿದ್ದು, ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Vijaya Karnataka Web assault on one
ಒಬ್ಬನ ಮೇಲೆ ಹಲ್ಲೆ


ಗೃಹಿಣಿ ಪದ್ಮಾವತಿ ಅವರು, ಮೊದಲ ಪತಿ ಹಾಗೂ ಮಕ್ಕಳಿಬ್ಬರನ್ನು ತೊರೆದು, ಇಬ್ರಾಹಿಂ ಬಾಬು ಅವರ ಜತೆ ಒಂದು ತಿಂಗಳ ಹಿಂದೆ ಮದುವೆಯಾಗಿದ್ದರು. ಕಳೆದ ಶುಕ್ರವಾರ, ಕಾಕನಗರದ ಬಾಡಿಗೆ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಇದುವೇ ಸೋಮವಾರದ ಘರ್ಷಣೆಗೆ ಕಾರಣ ಎನ್ನಲಾಗಿದೆ. ಗಾಯಗೊಂಡ ಮಹಿಬೂಬ್ ಅಲಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಕಳುಹಿಸಲಾಗಿದೆ.

‘‘ಬಟ್ಟೆ ವ್ಯಾಪಾರಿ ಮಹಿಬೂಬ್ ಅಲಿ ಅವರ ಮೇಲೆ ಪದ್ಮಾವತಿ ಅವರ ಮೊದಲ ಪತಿ ಯಂಕೋಬ್ ಹಾಗೂ ಸಂಬಂಧಿಕರಾದ ಪರಶುರಾಮ್, ಅಮರೇಶ, ವರದರಾಜ ಅವರು ಹಲ್ಲೆ ಮಾಡಿದ್ದಾರೆ’’ ಎಂದು ಮಹಿಬೂಬ್ ಅಲಿ ಅವರ ಸಂಬಂಧಿ ಫಾರೂಕ್ ಸಲ್ಲಿಸಿದ ದೂರು ಆಧರಿಸಿ, ಪ್ರಕರಣ ದಾಖಲಾಗಿದೆ.

ರಕ್ಷಣೆ ಕೋರಿ ಮನವಿ:ಪಟ್ಟಣದಲ್ಲಿ ಹಲ್ಲೆ ಘಟನೆ ನಡೆಯುತ್ತಿದ್ದಂತೆ ಮುಸ್ಲಿಂ ಸಮುದಾಯದವರು, ಸಂಜೆ ವೇಳೆ ಈದ್ಗಾ ಮೈದಾನದಲ್ಲಿ ಸಭೆ ಸೇರಿದರು. ಅಲ್ಲಿಂದ ನೂರಾರು ಜನರು ಪೊಲೀಸ್ ಠಾಣೆಯವರೆಗೆ ಪಾದಯಾತ್ರೆ ನಡೆಸಿದರು. ‘‘ಯಾರೋ ಮಾಡಿದ ತಪ್ಪಿಗೆ ಎಲ್ಲ ಮುಸ್ಲಿಂರನ್ನು ಹೊಣೆಮಾಡುವುದು ಸರಿಯಲ್ಲ. ಸಿಕ್ಕ ಸಿಕ್ಕವರ ವಿರುದ್ಧ ವಿನಾಕಾರಣ ಹಲ್ಲೆನಡೆಸಲಾಗುತ್ತಿದೆ. ತಮಗೆ ಸೂಕ್ತ ರಕ್ಷಣೆ ನೀಡಬೇಕು’’ ಎಂದು ಪಿಎಸ್‌ಐ ಗಂಗಪ್ಪ ಬುರ್ಲಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಮನವಿಗೆ ಪ್ರತಿಕ್ರಿಯಿಸಿದ ಪಿಎಸ್‌ಐ, ‘‘ಕಾನೂನು ರೀತಿಯಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುವುದು. ಯಾರೂ ಪ್ರಚೋದನೆಗೆ ಒಳಗಾಗಬಾರದು. ಶಾಂತಿ ಕಾಪಾಡಬೇಕು’’ ಎಂದರು.

ಈ ಸಂದರ್ಭದಲ್ಲಿ ಅಂಜುಮನ್ ಕಮಿಟಿಯ ಕೌಸರ್ ಸಿದ್ದಿಕಿ, ಮೊಹಿನುದ್ದೀನ್, ಸಿರಾಜುದ್ದೀನ್, ಅಮ್ಜದ್ ಸೇಠ್, ಅನ್ವರ್ ಪಾಷಾ, ರಶೀದ್ ಜಮಾದಾರ, ಜೆ.ಸುಭಾನ್, ಸೈಯದ್ ಟೈಲರ್, ಬಂದೇನವಾಜ್, ಶೌಕತ್ ಅಲಿ, ಮುನ್ನಾಭಾಯಿ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ