ಆ್ಯಪ್ನಗರ

ಬೇಡಿಕೆ ಈಡೇರಿಸಲು ಆಟೊ ಚಾಲಕರ ಆಗ್ರಹ

ಕೇಂದ್ರ ಸರಕಾರದ ಮೋಟರ್‌ ವಾಹನ ತಿದ್ದುಪಡಿ ಮಸೂದೆ-2017ರ ಜಾರಿಯನ್ನು ಕೈ ಬಿಡುವಂತೆ ಒತ್ತಾಯಿಸಿ ಭಗತ್‌ಸಿಂಗ್‌ ಆಟೊ ಚಾಲಕರ ಸಂಘದಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.

Vijaya Karnataka 18 Jul 2019, 5:00 am
ಸಿಂಧನೂರು : ಕೇಂದ್ರ ಸರಕಾರದ ಮೋಟರ್‌ ವಾಹನ ತಿದ್ದುಪಡಿ ಮಸೂದೆ-2017ರ ಜಾರಿಯನ್ನು ಕೈ ಬಿಡುವಂತೆ ಒತ್ತಾಯಿಸಿ ಭಗತ್‌ಸಿಂಗ್‌ ಆಟೊ ಚಾಲಕರ ಸಂಘದಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
Vijaya Karnataka Web RAC-RCH17SND4


ನಗರದ ಎಪಿಎಂಸಿಯಿಂದ ಆರಂಭಗೊಂಡ ಪ್ರತಿಭಟನೆಯು ತಹಸಿಲ್‌ ಕಚೇರಿ ತಲುಪಿತು. ನಂತರ ತಹಸೀಲ್ದಾರರ್‌ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ರವಾನಿಸಿ, ಆಟೋ ಓಡಿಸಿ ದಿನಗೂಲಿ 100 ರಿಂದ 200 ರೂಪಾಯಿ ದುಡಿಯುವ ಚಾಲಕರ ಸಣ್ಣ ತಪ್ಪಿಗೆ ದಿನವೂ ಸಾವಿರಾರು ರೂಪಾಯಿ ದಂಡ ವಿಧಿಸಲಾಗುತ್ತಿದೆ. ಇದರಿಂದ ದುಡಿಯುವ ವರ್ಗದ ಮೇಲೆ ದಂಡ ಹೇರಿ ಮತ್ತಷ್ಟು ಸಮಸ್ಯೆಯುಂಟು ಮಾಡಲಾಗುತ್ತಿದೆ. ಹೀಗಾಗಿ ಕೇಂದ್ರ ಮೋಟರ್‌ ವಾಹನ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಂಡಿಸಿರುವುದನ್ನು ವಾಪಸ್‌ ಪಡೆಯಬೇಕು. ನಿಯಮ ಉಲ್ಲಂಘನೆ ನೆಪದಲ್ಲಿ ಆಟೊ ಚಾಲಕರಿಗೆ, ಮಾಲೀಕರಿಗೆ ಮನಬಂದಂತೆ ದಂಡ ಹಾಕುವುದನ್ನು ಬಿಡಬೇಕು ಎಂದು ಆಗ್ರಹಿಸಿದರು.

ಸೌಕರ್ಯ ಕೊಡಿ: ಪೊಲೀಸ್‌ ಇಲಾಖೆಯಿಂದ ಆಟೋ ಚಾಲಕರು ಮತ್ತು ಮಾಲೀಕರು ಕಿರುಕುಳ ಎದುರಿಸುತ್ತಿದ್ದು, ಇದನ್ನು ತಡೆಯಬೇಕು. ಸಿಂಧನೂರು ನಗರದಲ್ಲಿ ಆಟೊಗಳನ್ನು ನಿಲ್ಲಿಸಲು ಕಾಯಂ ಸ್ಥಳ ಗುರುತಿಸಿ, ನಾಮಫಲಕ ಸೇರಿದಂತೆ ಅಗತ್ಯ ಸೌಕರ್ಯ ಒದಗಿಸಬೇಕು. ವಸತಿ ಮತ್ತು ನಿವೇಶನ ಹೊಂದಿರದ ಆಟೋ ಚಾಲಕರು ಮತ್ತು ಮಾಲೀಕರಿಗೆ ಸೌಕರ್ಯ ನೀಡಬೇಕು. ಕಾರ್ಮಿಕರ ಅಪಘಾತ ವಿಮೆ ಜಾರಿಗೊಳಿಸಬೇಕು. ಡೀಸೆಲ್‌, ಪೆಟ್ರೋಲ್‌ ಮತ್ತು ಗ್ಯಾಸ್‌ ದರ ಕಡಿಮೆ ಮಾಡಬೇಕು ಎಂದು ಒತ್ತಾಯಿಸಲಾಯಿತು.

ರೈತ ಸಂಘ ರಾಜ್ಯಾಧ್ಯಕ್ಷ ಡಿ.ಎಚ್‌.ಪೂಜಾರ್‌, ಆರ್‌ವೈಎಫ್‌ಐ ರಾಜ್ಯ ಸಂಚಾಲಕ ನಾಗರಾಜ ಪೂಜಾರ್‌, ಟಿಯುಸಿಐ ಜಿಲ್ಲಾ ಉಪಾಧ್ಯಕ್ಷ ಬಿ.ಎನ್‌.ಯರದಿಹಾಳ, ಆಟೋ ಚಾಲಕರ ಸಂಘದ ಅಧ್ಯಕ್ಷ ಬಸವರಾಜ ಕೊಂಡೆ, ಕಾರ್ಯದರ್ಶಿ ಅಬ್ದುಲ್‌ ಕರೀಂಸಾಬ್‌, ನಾಗಪ್ಪ ಬಂಗಿ, ಗೋವಿಂದ ಉಪ್ಪಾರ, ಶಿವರಾಜ, ಹನುಮಂತ ಬಾಲಿ ಸೇರಿ ಇತರರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ