ಆ್ಯಪ್ನಗರ

ಆಸ್ಪತ್ರೆಯ ಲಿಫ್ಟ್‌ನಲ್ಲಿ ಎರಡು ಗಂಟೆ ಸಿಕ್ಕಿ ಹಾಕಿಕೊಂಡ ನವಜಾತ ಶಿಶು

ರಿಮ್ಸ್ ಆಸ್ಪತ್ರೆಯ ಲಿಫ್ಟ್ ನಲ್ಲಿ ನವಜಾತ ಶಿಶುವೊಂದು ಎರಡು ಗಂಟೆ ಸಿಕ್ಕಿಹಾಕಿಕೊಂಡು ಆತಂಕ ಸೃಷ್ಟಿಯಾಗಿತ್ತು.

ವಿಕ ಸುದ್ದಿಲೋಕ 14 Jun 2017, 1:17 pm
ರಾಯಚೂರು: ಇಲ್ಲಿನ ರಿಮ್ಸ್ ಆಸ್ಪತ್ರೆಯ ಲಿಫ್ಟ್ ನಲ್ಲಿ ನವಜಾತ ಶಿಶುವೊಂದು ಎರಡು ಗಂಟೆ ಸಿಕ್ಕಿಹಾಕಿಕೊಂಡು ಆತಂಕ ಸೃಷ್ಟಿಯಾಗಿತ್ತು. ತಡರಾತ್ರಿ ಘಟನೆ ನಡೆದಿದೆ.
Vijaya Karnataka Web baby stuck in lift at rims hospital
ಆಸ್ಪತ್ರೆಯ ಲಿಫ್ಟ್‌ನಲ್ಲಿ ಎರಡು ಗಂಟೆ ಸಿಕ್ಕಿ ಹಾಕಿಕೊಂಡ ನವಜಾತ ಶಿಶು


ಮಾನವಿ ತಾಲೂಕಿನ ಕುರ್ಡಿ ಗ್ರಾಮದ ನರಸಪ್ಪ ಮತ್ತು ನರಸಮ್ಮ ದಂಪತಿ ಅವರ ಗಂಡು ಮಗುವನ್ನು ಐಸಿಯುನಲ್ಲಿ ಇರಿಸಲು ಸಿಬ್ಬಂದಿ ಜತೆ ಕೊಂಡೊಯ್ಯುವಾಗ ಲಿಫ್ಟ್‌ ಸ್ಥಗಿತಗೊಂಡಿದೆ. ಆಸ್ಪತ್ರೆಯ ತಾಂತ್ರಿಕ ಸಿಬ್ಬಂದಿ ಲಿಫ್ಟ್ ದುರಸ್ತಿ ಮಗುವನ್ನು ರಕ್ಷಿಸಿದ್ದಾರೆ.

ರೋಗಿ ಮೇಲೆ ಹಲ್ಲೆ

ಆಸ್ಪತ್ರೆಯಲ್ಲಿ ಸಾಲಿನಲ್ಲಿ ನಿಲ್ಲದಿದ್ದಕ್ಕೆ ಹೋಂಗಾರ್ಡ್‌ವೊಬ್ಬರು ರೋಗಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಹೋಂಗಾರ್ಡ್‌ ಸಿಬ್ಬಂದಿ ರಾಜಶೇಖರ ಎಂಬವರು ಅವಾಚ್ಯ ಶಬ್ದಗಳಿಂದ ನಿಂದಿಸಿ ನಜೀರ್‌ ಅಹಮ್ಮದ್ ಎನ್ನುವವರ ಮೇಲೆ ಹಲ್ಲೆ ನಡೆಸಿದ್ದಾರೆ. ಆಸ್ಪತ್ರೆಯ ಡೀನ್ ಡಾ. ಬಸವರಾಜ್ ಪೀರಾಪೂರ್ ಆರೋಪಿಯನ್ನು ಕೆಲಸದಿಂದ ಬಿಡುಗಡೆಗೊಳಿಸುವಂತೆ ಸೂಚಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ