ಆ್ಯಪ್ನಗರ

ಬಡವರು ಬಯಸುವುದು ಮದ್ಯ ನಿಷೇಧವನ್ನು, ನೋಟು ಬ್ಯಾನ್‌ ಅಲ್ಲ: ಮೇಧಾ ಪಾಟ್ಕರ್‌

ರಾಯಚೂರಿನಲ್ಲಿ ಮೇಧಾ ಪಾಟ್ಕರ್‌ ಮದ್ಯ ನಿಷೇಧ ಹೋರಾಟಕ್ಕೆ ಚಾಲನೆ ನೀಡಿದರು

Vijaya Karnataka Web 29 Oct 2017, 7:18 pm
ರಾಯಚೂರು: ದೇಶದ ದಲಿತರು, ಬಡವರು ಬಯಸುವುದು ಮದ್ಯ ನಿಷೇಧವನ್ನು ವಿನಃ ನೋಟು ಅಮಾನ್ಯದಂಥ ಕ್ರಮವಲ್ಲ. ಬಡವರ ಶೋಷಣೆ ಮೂಲಕ ಗಳಿಸುವ ಆದಾಯದಿಂದ ದೇಶದ ಅಭಿವೃದ್ಧಿ ಮಾಡುವುದು ಬೇಕಿಲ್ಲ ಎಂದು ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ತಿಳಿಸಿದ್ದಾರೆ.
Vijaya Karnataka Web ban liquor not notes medha patkar
ಬಡವರು ಬಯಸುವುದು ಮದ್ಯ ನಿಷೇಧವನ್ನು, ನೋಟು ಬ್ಯಾನ್‌ ಅಲ್ಲ: ಮೇಧಾ ಪಾಟ್ಕರ್‌


ರಾಯಚೂರಿನಲ್ಲಿ ಮದ್ಯ ನಿಷೇಧಕ್ಕೆ ಆಗ್ರಹಿಸಿ ಎಪಿಎಂಸಿ ಆವರಣದಲ್ಲಿಆಯೋಜಿಸಿರುವ ರಾಜ್ಯಮಟ್ಟದ ಸಮಾವೇಶಕ್ಕೆ ನಶಾಮುಕ್ತ ಭಾರತ ಸಂಘಟನೆಯ ಹೋರಾಟಗಾರ್ತಿ ಮೇಧಾ ಪಾಟ್ಕರ್‌ ಮದ್ಯದ ಬಾಟಲಿ ಒಡೆದು ಚಾಲನೆ ನೀಡಿದರು.

ರಾಜಕಾರಣ, ಕಾನೂನು ತಯಾರಿಸುವವರು, ಅಧಿಕಾರಿಗಳು ಮದ್ಯ ಮಾರಾಟದ ಆದಾಯದಿಂದಲೇ ಸರಕಾರ ನಡೆಸುವ ಆಲೋಚನೆ ಉಳ್ಳವರಾಗಿರುವುದು ಆತಂಕಕಾರಿ. ದೇಶದ ಇಡೀ ವ್ಯವಸ್ಥೆ ಉದ್ಯಮಿಗಳ ಪರ ನಿಯಮ ರೂಪಿಸುವ ನಿಲುವು ತಳೆದಿರುವುದು ಅಪಾಯಕಾರಿ ಬೆಳವಣಿಗೆ ಎಂದು ಹೇಳಿದರು.

ಬಿಹಾರದಲ್ಲಿ ಅಲ್ಲಿನ ಸಿಎಂ ಜಾರಿಗೆ ತಂದ ಮದ್ಯ ನಿಷೇಧ ಕಾನೂನು ಉತ್ತಮವಾಗಿದೆ. ಅದು ಎಲ್ಲೆಡೆ ಜಾರಿಯಾಗಬೇಕು. ಆದರೆ ಆ ಕಾನೂನು ಜಾರಿಗೆ ತಂದ ನಿತೀಶಕುಮಾರ್ ಅವರೇ ತಮ್ಮ ನಿಲುವು ಬದಲಿಸಿದ್ದು ದುರದೃಷ್ಟಕರ. ದೇಶದ ಕೆಲವೇ ರಾಜ್ಯ ಮದ್ಯ ನಿಷೇಧ ಜಾರಿಗೆ ತಂದರೆ ಸಾಲದು. ಆ ರಾಜ್ಯಗಳ ನೆರೆಯ ರಾಜ್ಯಗಳೂ ಮದ್ಯ ನಿಷೇಧಿಸಿದರೆ ಮಾತ್ರ ಉದ್ದೇಶ ಈಡೇರುತ್ತದೆ ಎಂದು ಮೇಧಾ ತಿಳಿಸಿದರು

ಪ್ರಧಾನಿ ಮೋದಿ ಅವರ ಗುಜರಾತ್ ನಲ್ಲಿ ನರ್ಮದಾ ನದಿಯ ಬೋಟ್ ಗಳಲ್ಲೇ ಮದ್ಯ ಸಾಗಣೆ ಮಾಡಲಾಗುತ್ತಿದೆ. ಮತ್ತೊಂದೆಡೆ ಪ್ರಧಾನಿ ಎಲ್ಲರ ಪ್ರಗತಿ ಮಾತನಾಡುತ್ತಿದ್ದಾರೆ. ರಾಜ್ಯದಲ್ಲಿ ಮದ್ಯ ನಿಷೇಧ ಮಾಡಲು ಕಾಂಗ್ರೆಸ್‌ಗೆ ಒತ್ತಾಯಿಸುತ್ತಿದೆ ಎಂದು ಎಚ್ಚರಿಸಿದರು.

Ban Liquor not Notes: Medha Patkar

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ