ಆ್ಯಪ್ನಗರ

ಸುಟ್ಟ ಸ್ಥಿತಿಯಲ್ಲಿ ಹಳೆಯ 500, 1000 ರೂ. ನೋಟು ಪತ್ತೆ

ನಗರದ ಎಪಿಎಂಸಿ ಆವರಣದಲ್ಲಿನ ಕಸದ ರಾಶಿಯಲ್ಲಿ ನಿಷೇಧಿತ 1000 ರೂ., 500 ರೂ. ಮುಖಬೆಲೆಯ ನೋಟುಗಳು ಅರೆಬರೆ ಸುಟ್ಟ ಸ್ಥಿತಿಯಲ್ಲಿ ಮಂಗಳವಾರ ಪತ್ತೆಯಾಗಿವೆ.

Vijaya Karnataka Web 18 Sep 2018, 6:12 pm
ರಾಯಚೂರು: ನಗರದ ಎಪಿಎಂಸಿ ಆವರಣದಲ್ಲಿನ ಕಸದ ರಾಶಿಯಲ್ಲಿ ನಿಷೇಧಿತ 1000 ರೂ., 500 ರೂ. ಮುಖಬೆಲೆಯ ನೋಟುಗಳು ಅರೆಬರೆ ಸುಟ್ಟ ಸ್ಥಿತಿಯಲ್ಲಿ ಮಂಗಳವಾರ ಪತ್ತೆಯಾಗಿವೆ.
Vijaya Karnataka Web Banned Notes.


ಎಪಿಎಂಸಿ ಆವರಣಕ್ಕೆ ಹೊಂದಿಕೊಂಡಂತಿರುವ ಮದ್ಯ ಮಾರಾಟ ಮಳಿಗೆಯವರು ಮದ್ಯದ ಬಾಟಲು ಮತ್ತಿತರೆ ಕಸಕ್ಕೆ ಬೆಂಕಿ ಹಚ್ಚಿದ್ದು ಈ ವೇಳೆ ಅರೆಬರೆ ಸುಟ್ಟ ನೋಟುಗಳು ಸುಟ್ಟ ಸ್ಥಿತಿಯಲ್ಲಿ ಪೊಲೀಸರಿಗೆ ಸಿಕ್ಕಿವೆ.

ಪೊಲೀಸರು 1000 ರೂ. ಮುಖಬೆಲೆ ಹಾಗೂ 500 ರೂ. ಮುಖಬೆಲೆಯ ನಿಷೇಧಿತ ಹಳೆಯ ತಲಾ ನಾಲ್ಕು ನೋಟು ಹಾಗೂ ಸದ್ಯ ಚಾಲ್ತಿಯಲ್ಲಿರುವ 100 ರೂ. ಮತ್ತು10 ರೂ. ಗಳ ತಲಾ ಎರಡು ನೋಟು ವಶಕ್ಕೆ ಪಡೆದಿದ್ದಾರೆ. ಮಾರ್ಕೆಟ್ ಯಾರ್ಡ್‌ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ