ಆ್ಯಪ್ನಗರ

ಲಂಚ ಸ್ವೀಕಾರ: ಎಸಿಬಿ ಬಲೆಗೆ ಪ್ರಭಾರಿ ಸಿಡಿಪಿಒ

ಅಂಗನವಾಡಿ ಕೇಂದ್ರಗಳಿಗೆ ಮೊಟ್ಟೆ ಪೂರೈಕೆ ಮಾಡಿದ ಬಿಲ್ ಪಾವತಿಗೆ ಲಂಚ ಸ್ವೀಕರಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಭಾರಿ ಅಧಿಕಾರಿ (ಸಿಡಿಪಿಒ) ಶಂಕರಮೂರ್ತಿ, ಮಂಗಳವಾರ ಸಂಜೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಬಲೆಗೆ ಸಿಲುಕಿದ್ದಾರೆ.

Vijaya Karnataka 5 Apr 2018, 7:52 am
ಲಿಂಗಸುಗೂರು (ರಾಯಚೂರು): ಅಂಗನವಾಡಿ ಕೇಂದ್ರಗಳಿಗೆ ಮೊಟ್ಟೆ ಪೂರೈಕೆ ಮಾಡಿದ ಬಿಲ್ ಪಾವತಿಗೆ ಲಂಚ ಸ್ವೀಕರಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಭಾರಿ ಅಧಿಕಾರಿ (ಸಿಡಿಪಿಒ) ಶಂಕರಮೂರ್ತಿ, ಮಂಗಳವಾರ ಸಂಜೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಬಲೆಗೆ ಸಿಲುಕಿದ್ದಾರೆ.
Vijaya Karnataka Web bribe acceptance acb trap primer cdpo
ಲಂಚ ಸ್ವೀಕಾರ: ಎಸಿಬಿ ಬಲೆಗೆ ಪ್ರಭಾರಿ ಸಿಡಿಪಿಒ


ಮಾನ್ವಿ ತಾಲೂಕಿನ 243 ಅಂಗನವಾಡಿ ಕೇಂದ್ರಗಳಿಗೆ ಮೊಟ್ಟೆ ಪೂರೈಸಿದ ಬಿಲ್ ಪಾವತಿಗೆ ಶಂಕರಮೂರ್ತಿ ಅವರು, 2 ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿದ್ದರು. ಈ ಕುರಿತು ನಮಿತಾ ಸ್ವಸಹಾಯ ಸಂಘದ ಅಮರೇಗೌಡ ಗವಿಗಟ್ಟ ಅವರು ಎಸಿಬಿಗೆ ದೂರು ನೀಡಿದ್ದರು. ಈ ದೂರು ಆಧರಿಸಿ, ಎಸಿಬಿ ಅಧಿಕಾರಿಗಳು ದಾಳಿ ನಡೆಸಿದರು. ಲಂಚದ ಮೊದಲ ಕಂತಿನ 1ಲಕ್ಷ ರೂ. ಪಡೆಯುತ್ತಿದ್ದಾಗ ಅಧಿಕಾರಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸಿಬಿ ಡಿವೈಎಸ್‌ಪಿ ಅರುಣಕುಮಾರ ತಿಳಿಸಿದ್ದಾರೆ.

ಈ ತಂಡದಲ್ಲಿ ಸಿಪಿಐಗಳಾದ ಶ್ರೀಧರ, ರವಿನಾಥ, ಮುಖ್ಯಪೇದೆಗಳಾದ ಬಷೀರ್‌ಅಹ್ಮದ್, ಮುರುಳಿ, ಪೇದೆಗಳಾದ ಮನಿಷಾ, ಬಸವರಾಜೇಶ್ವರಿ, ವಿಕ್ರಮರೆಡ್ಡಿ, ಬಸಯ್ಯಸ್ವಾಮಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ