ಆ್ಯಪ್ನಗರ

ಒಣ ಕಡಲೆ ಖರೀದಿ ಕೇಂದ್ರ ಪ್ರಾರಂಭ

ಭಾರತ ಸರಕಾರವು ದ್ವಿದಳ ಧಾನ್ಯಗಳನ್ನು ಮಾರುಕಟ್ಟೆ ದರದಲ್ಲಿ ನೇರವಾಗಿ ರೈತರಿಂದ ಖರೀದಿಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಒಣಕಡಲೆ ಖರೀದಿ ಕೇಂದ್ರವನ್ನು ಪ್ರಾರಂಭಿಸಲಾಗಿದೆ ಎಂದು ಭಾರತ ಆಹಾರ ನಿಗಮ ತಿಳಿಸಿದೆ.

ವಿಕ ಸುದ್ದಿಲೋಕ 22 Mar 2016, 6:45 am
ರಾಯಚೂರು; ಭಾರತ ಸರಕಾರವು ದ್ವಿದಳ ಧಾನ್ಯಗಳನ್ನು ಮಾರುಕಟ್ಟೆ ದರದಲ್ಲಿ ನೇರವಾಗಿ ರೈತರಿಂದ ಖರೀದಿಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಒಣಕಡಲೆ ಖರೀದಿ ಕೇಂದ್ರವನ್ನು ಪ್ರಾರಂಭಿಸಲಾಗಿದೆ ಎಂದು ಭಾರತ ಆಹಾರ ನಿಗಮ ತಿಳಿಸಿದೆ.
Vijaya Karnataka Web buy the beginning of the dry chickpea
ಒಣ ಕಡಲೆ ಖರೀದಿ ಕೇಂದ್ರ ಪ್ರಾರಂಭ


ಕೇಂದ್ರ ಸರಕಾರದ ಆದೇಶದಂತೆ ಭಾರತ ಆಹಾರ ನಿಗಮವು ಒಣ ಕಡಲೆಯನ್ನು ಮಾರುಕಟ್ಟೆ ದರದಲ್ಲಿ ಖರೀದಿಸಲು ಖರೀದಿ ಕೇಂದ್ರವನ್ನು ಇಲ್ಲಿನ ರಾಜೇಂದ್ರ ಗಂಜ್ ನಲ್ಲಿ ತೆರೆದಿದ್ದು ರೈತರು ಇದರ ಸದುಪಯೋಗವನ್ನು ಪಡೆಯಲು ಕೋರಿದೆ. ರೈತರು ಖರೀದಿ ಕೇಂದ್ರಕ್ಕೆ ತರುವ ಒಣ ಕಡೆಲೆಯನ್ನು ಸ್ವೀಕರಿಸಿದ ನಂತರ 48 ಗಂಟೆಯೊಳಗೆ ಧಾನ್ಯದ ಒಟ್ಟು ಮೊತ್ತವನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿಗೆ ನಿಗಮದ ವ್ಯವಸ್ಥಾಪಕ ರವೀಂದ್ರ ಅವರ ಮೊ : 9449311766 ಕ್ಕೆ ಸಂಪರ್ಕಿಸಲು ಕೋರಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ