ಆ್ಯಪ್ನಗರ

ಸಿಎಂ ಸಿದ್ದರಾಮಯ್ಯ ದಲಿತ, ಅಹಿಂದ ವರ್ಗದ ಕಟ್ಟಾ ವಿರೋಧಿ: ಎನ್‌.ಮೂರ್ತಿ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ದಲಿತ, ಅಹಿಂದ ವರ್ಗದ ಕಟ್ಟಾ ವಿರೋಧಿ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಎನ್‌.ಮೂರ್ತಿ ಗಂಭೀರವಾಗಿ ಆರೋಪಿಸಿದರು.

Vijaya Karnataka Web 22 Oct 2017, 12:38 pm
ರಾಯಚೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ದಲಿತ, ಅಹಿಂದ ವರ್ಗದ ಕಟ್ಟಾ ವಿರೋಧಿ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಎನ್‌.ಮೂರ್ತಿ ಗಂಭೀರವಾಗಿ ಆರೋಪಿಸಿದರು.
Vijaya Karnataka Web cm siddaramaiah agaist dalit hinda class n murthy
ಸಿಎಂ ಸಿದ್ದರಾಮಯ್ಯ ದಲಿತ, ಅಹಿಂದ ವರ್ಗದ ಕಟ್ಟಾ ವಿರೋಧಿ: ಎನ್‌.ಮೂರ್ತಿ


ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡಲು ಇರುವ ಕಲಂ 17ನ್ನು ಸಿಎಂ ಸಿದ್ದರಾಮಯ್ಯ ದುರ್ಬಳಕೆ ಮಾಡಿಕೊಂಡಿದ್ದಾರೆ. ಅವರಿಗೆ ದಲಿತರು ಹಾಗೂ ಅಹಿಂದ ವರ್ಗದವರ ಬಗ್ಗೆ ಬದ್ದತೆ ಇದ್ದರೆ 11 ಬಜೆಟ್‌ಗಳಲ್ಲಿ ಮೀಸಲಿಟ್ಟ ಹಣ ಬಳಕೆ ಕುರಿತು ಶ್ವೀತ ಪತ್ರ ಹೊರಡಿಸಲಿ ಎಂದು ಸವಾಲ್ ಎಸೆದರು.

ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಲೋಕೋಪಯೋಗಿ ಸಚಿವ ಎಚ್.ಸಿ.ಮಹಾದೇವಪ್ಪ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಮಾನಪ್ಪ, ನರೇಂದ್ರ ಸ್ವಾಮಿ ಸೇರಿದಂತೆ ಮತ್ತಿತರರ ಮಾತಿಗೆ ಮಣಿದು ಸಿಎಂ ದಲಿತರಿಗೆ ಅನ್ಯಾಯ ಮಾಡಿದ್ದಾರೆ. ಈ ನಾಯಕರು ದಲಿತರನ್ನು ಗುತ್ತಿಗೆ ಪಡೆದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಕಾಂಗ್ರೆಸ್ ಸರಕಾರದ ಎಲ್ಲ ವಿರೋಧಿ ದೋರಣೆಗಳನ್ನು ಖಂಡಿಸುವುದರ ಜಜೆಗೆ ಅಕ್ಟೋಬರ್ 24ರಂದು ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯಲಿರುವ ಅಧಿವೇಶನದಲ್ಲಿ ನ್ಯಾ. ಎ. ಜೆ. ಸದಾಶಿವ ಆಯೋಗದ ವರದಿ ಹಾಗೂ ಮೌಡ್ಯ ಪ್ರತಿ ಬಂಧ ಕ ಕಾಯಿದೆ ಮಂಡಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿವೆ. ಈ ಕುರಿತು ನಿರ್ಲಕ್ಷ ವಹಿಸಿದರೇ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಎನ್‌.ಮೂರ್ತಿ ನೇರ ಎಚ್ಚರಿಕೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ