ಆ್ಯಪ್ನಗರ

ಮುಂದುವರಿದ ಕೃಷ್ಣಾ ಪ್ರವಾಹ

ಮಹಾರಾಷ್ಟ್ರದಲ್ಲಿ ಸುರಿದ ಮಳೆಯಿಂದ ಕೃಷ್ಣಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಜಿಲ್ಲೆಯ ನದಿ ತೀರದಲ್ಲಿ ಎರಡನೇ ದಿನವಾದ ಮಂಗಳವಾರವೂ ಆತಂಕ ಮುಂದುವರಿಯಿತು.

Vijaya Karnataka Web 31 Jul 2019, 12:00 am
ರಾಯಚೂರು: ಮಹಾರಾಷ್ಟ್ರದಲ್ಲಿ ಸುರಿದ ಮಳೆಯಿಂದ ಕೃಷ್ಣಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಜಿಲ್ಲೆಯ ನದಿ ತೀರದಲ್ಲಿ ಎರಡನೇ ದಿನವಾದ ಮಂಗಳವಾರವೂ ಆತಂಕ ಮುಂದುವರಿಯಿತು.
Vijaya Karnataka Web continued krishna flood
ಮುಂದುವರಿದ ಕೃಷ್ಣಾ ಪ್ರವಾಹ


ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಾರಾಯಣಪುರ ಜಲಾಶಯದಿಂದ 1.63ಲಕ್ಷ ಕ್ಯೂಸೆಕ್ ನೀರು ಹೊರಹರಿಸಲಾಗುತ್ತಿದೆ. ಜಿಲ್ಲೆಯ ಲಿಂಗಸುಗೂರು, ದೇವದುರ್ಗ ಮತ್ತು ರಾಯಚೂರು ತಾಲೂಕುಗಳಲ್ಲಿ ನದಿ ತೀರದ ಗ್ರಾಮಸ್ಥರು ಪ್ರವಾಹದ ಆತಂಕದಲ್ಲಿ ದಿನದೂಡುವಂತಾಯಿತು. ಲಿಂಗಸುಗೂರು ತಾಲೂಕಿನ ಶೀಲಹಳ್ಳಿ ಸೇತುವೆ ನೀರಿನಲ್ಲಿ ಮುಳುಗಿದ್ದರಿಂದ ಶೀಲಹಳ್ಳಿ, ಯರಗೋಡಿ, ಕಡದರಗಡ್ಡಿ ಗ್ರಾಮದ ನಿವಾಸಿಗಳು ಆತಂಕಕ್ಕೆ ಸಿಲುಕಿದ್ದಾರೆ.

ದೇವದುರ್ಗ ತಾಲೂಕಿನ ನದಿ ತೀರದಲ್ಲಿ ಪ್ರವಾಹದಿಂದ ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ. ದೇವದುರ್ಗ-ಕಲಬುರಗಿ ಮಧ್ಯೆ ಸಂಪರ್ಕ ಕಲ್ಪಿಸುವ ಹೂನಿನಹೆಡಗಿ ಸೇತುವೆ ಮುಳುಗಡೆ ಭೀತಿಯಿದೆ. ಸೇತುವೆ ಮೇಲೆ ಆತಂಕದಲ್ಲಿಯೇ ವಾಹನ ಸವಾರರು ಸಂಚರಿಸುವಂತಾಯಿತು.

ಅದೇ ತಾಲೂಕಿನ ಕೊಪ್ಪರ ಗ್ರಾಮದ ಪ್ರಸಿದ್ಧ ಧಾರ್ಮಿಕ ಕೇಂದ್ರ ಶ್ರೀನರಸಿಂಹ ದೇವರ ದೇವಸ್ಥಾನದ ನದಿಯ ಕಡೆಗಿನ ಮೆಟ್ಟಿಲುವರೆಗೆ ನದಿಯ ನೀರು ತಲುಪಿದೆ. ದೇವರ ದರ್ಶನಕ್ಕೆ ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ. ರಾಯಚೂರು ತಾಲೂಕಿನ ಕಾಡ್ಲೂರು, ಆತ್ಕೂರು, ಬುರ್ದಿಪಾಡ ಗ್ರಾಮದ ನದಿ ತೀರದಲ್ಲಿ ಆತಂಕ ಮುಂದುವರಿದಿದೆ. ನದಿ ತೀರದ ಕೃಷಿ ಜಮೀನಿನಿಂದ ನೀರೆತ್ತುವ ಮೋಟಾರ್ ಗಳನ್ನು ತೆರವುಗೊಳಿಸುವ ಕಾರ್ಯ ಮಂಗಳವಾರವೂ ಮುಂದುವರಿಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ