ಆ್ಯಪ್ನಗರ

ಶಿಕ್ಷ ಕ, ವಿದ್ಯಾರ್ಥಿಗಳಿಗೂ ನರೇಗಾ ಕೂಲಿ ಜಮಾ!

ತಾಲೂಕಿನ ಮೆದಕಿನಾಳ ಗ್ರಾ.ಪಂ. ವ್ಯಾಪ್ತಿಯ ಶಾಲೆ, ಕಾಲೇಜುಗಳಲ್ಲಿ ವ್ಯಾಂಸಗ ಮಾಡುವ ಕೆಲವು ವಿದ್ಯಾರ್ಥಿಗಳು ಹಾಗೂ ಬೋಧಿಸುವ ಶಿಕ್ಷಕರ ಬ್ಯಾಂಕ್‌ ಖಾತೆಗಳಿಗೂ ನರೇಗಾ ಕೂಲಿ ಹಣ ಜಮೆಯಾಗಿರುವುದು ಬೆಳಕಿಗೆ ಬಂದಿದೆ.

Vijaya Karnataka 20 Oct 2018, 5:00 am
ಮಸ್ಕಿ : ತಾಲೂಕಿನ ಮೆದಕಿನಾಳ ಗ್ರಾ.ಪಂ. ವ್ಯಾಪ್ತಿಯ ಶಾಲೆ, ಕಾಲೇಜುಗಳಲ್ಲಿ ವ್ಯಾಂಸಗ ಮಾಡುವ ಕೆಲವು ವಿದ್ಯಾರ್ಥಿಗಳು ಹಾಗೂ ಬೋಧಿಸುವ ಶಿಕ್ಷಕರ ಬ್ಯಾಂಕ್‌ ಖಾತೆಗಳಿಗೂ ನರೇಗಾ ಕೂಲಿ ಹಣ ಜಮೆಯಾಗಿರುವುದು ಬೆಳಕಿಗೆ ಬಂದಿದೆ.
Vijaya Karnataka Web county education student credit narega wages
ಶಿಕ್ಷ ಕ, ವಿದ್ಯಾರ್ಥಿಗಳಿಗೂ ನರೇಗಾ ಕೂಲಿ ಜಮಾ!


ಗ್ರಾ.ಪಂ. ವ್ಯಾಪ್ತಿಯ ನಾಗರಬೆಂಚಿ ಗ್ರಾಮದಲ್ಲಿ 2018-19ನೇ ಸಾಲಿನ ಉದ್ಯೋಗ ಖಾತ್ರಿ ಯೋಜನೆಯಡಿ ವಡ್ಡರ ಕೆರೆಯಲ್ಲಿ ಹೂಳೆತ್ತುವ ಕಾಮಗಾರಿ ನಿರ್ವಹಿಸಲಾಗಿದೆ. ಕೆರೆಯ ಹೂಳೆತ್ತುವ ಕೆಲಸಕ್ಕೆ ಒಟ್ಟು 47 ಕೂಲಿಕಾರರನ್ನು ನಿಯೋಜಿಸಲಾಗಿದೆ. ಇವರಲ್ಲಿ ಕೆಲವು ಕೂಲಿಕಾರ್ಮಿಕರು, ದುಡಿತ ಅರಸಿ ಬೆಂಗಳೂರಿಗೆ ಗುಳೆ ಹೋಗಿದ್ದಾರೆ. ಇನ್ನೂ ಕೆಲವರು ಶಾಲೆ, ಕಾಲೇಜು ವಿದ್ಯಾರ್ಥಿಗಳು ಹಾಗೂ ಶಿಕ್ಷಕರಾಗಿರುವುದು ಅಚ್ಚರಿ ಮೂಡಿಸಿದೆ.

ಇವರೇ ಫಲಾನುಭವಿಗಳು: ಜೀವನಜ್ಯೋತಿ ಮರಿಸ್ವಾಮಿ (ಜಾಬ್‌ ಕಾರ್ಡ್‌ ನಂ: ಕೆಎನ್‌-23-00-002-031-006/710), ಮಸ್ಕಿಯ ಪ್ರೌಢಶಾಲೆಯೊಂದರಲ್ಲಿ ಅಭ್ಯಾಸ ಮಾಡುತ್ತಿದ್ದಾಳೆ. ಈರಣ್ಣ ಬಾಳಪ್ಪ (ಜಾಬ್‌ ಕಾರ್ಡ್‌ ನಂ: ಕೆಎನ್‌-23-00-002-031-006/791), ರತ್ನಪ್ರಭಾ ಈರಣ್ಣ (ಜಾಬ್‌ ಕಾರ್ಡ್‌ ನಂ: ಕೆಎನ್‌-23-00-002-031-006/810) ದಂಪತಿ, ಮಸ್ಕಿಯ ಸೇಂಟ್‌ ಜಾನ್ಸ್‌ ಶಾಲೆಯಲ್ಲಿ ಶಿಕ್ಷ ಕರಾಗಿ ಕಾರ್ಯನಿರ್ವಾಹಿಸುತ್ತಿದ್ದಾರೆ. ಶಿವರಾಜ ಕರಿಯಪ್ಪ (ಜಾಬ್‌ ಕಾರ್ಡ್‌ ನಂ: ಕೆಎನ್‌-23-00-002-031-006/360) ಬಳ್ಳಾರಿ ಕಾಲೇಜೊಂದರಲ್ಲಿ ಅಭ್ಯಾಸ ಮಾಡುತ್ತಿದ್ದಾನೆ. ಮರಿಯಮ್ಮ (ಜಾಬ್‌ ಕಾರ್ಡ್‌ ನಂ. ಕೆಎನ್‌-23-00-002-031-006/116) ಅವರದು ಹೆರಿಗೆಯಾಗಿದೆ. ಬಾಣಂತಿಯಾಗಿದ್ದರೂ ಅವರು 14 ದಿನ ಕೆಲಸ ಮಾಡಿದ್ದಾರೆ ಎಂದು ಎನ್‌ಎಂಆರ್‌ನಲ್ಲಿ ಹೆಸರು ನೋಂದಾಯಿಸಲಾಗಿದೆ.

ಪ್ರತಿಯೊಬ್ಬರ ಬ್ಯಾಂಕ್‌ ಖಾತೆಗೆ 14 ದಿನ ಕೆಲಸ ಮಾಡಿದ್ದಾರೆಂದು ತಲಾ 3290 ರೂ.ಗಳನ್ನು ಅವರ ಬ್ಯಾಂಕ್‌ ಖಾತೆಗೆ 2018, ಅ.4ರಂದು ಜಮಾ ಮಾಡಲಾಗಿದೆ. ನಾಗರಬೆಂಚಿ ಗ್ರಾಮದ ವಡ್ಡರ ಕೆರೆಯಲ್ಲಿ ಹೂಳೆತ್ತುವ ಕೆಲಸದ ಮೇಲುಸ್ತುವಾರಿ (ಮೇಟಿ) ರಮೇಶ ಅವರು, ತಮ್ಮ ಕುಟುಂಬದ ಸದಸ್ಯರು ಹಾಗೂ ತಮ್ಮ ಆಪ್ತರ ಖಾತೆಗಳಿಗೆ ಮಾತ್ರ ಹಣ ಜಮಾಮಾಡಿದ್ದು, ಅನುಮಾನ ಮೂಡಿದೆ.

............

ಈ ಕುರಿತು ಪರಿಶೀಲಿಸಿ, ಕ್ರಮಕೈಗೊಳ್ಳಲಾಗುವುದು. ಒಬ್ಬರ ಜಾಬ್‌ಕಾರ್ಡ್‌ ಬಳಸಿ, ಮತ್ತೊಬ್ಬರು ದುರ್ಬಳಕೆಮಾಡಿಕೊಂಡು ಹಣ ಪಡೆದಿದ್ದರೆ, ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುತ್ತದೆ.

-ನಳಿನ್‌ ಅತುಲ್‌, ಸಿಇಒ, ಜಿ.ಪಂ., ರಾಯಚೂರು

............

ಕೆಲಸದ ಮೇಲುಸ್ತುವಾರಿ ರಮೇಶ ಅವರು, ನಿಮ್‌ ಜಾಬ್‌ ಕಾರ್ಡ್‌ ಬಳಸಿ, ಬೇರೆಯವರು ಕೆಲಸ ಮಾಡುತ್ತಾರೆ ಎಂದು ಹೇಳಿದ್ದಕ್ಕೆ ನಾವು ಒಪ್ಪುಕೊಂಡೀವಿ. ನಾನು, ನನ್ನ ಪತ್ನಿ ಖಾಸಗಿ ಶಾಲೆಯಲ್ಲಿ ಶಿಕ್ಷ ಕರಾಗಿ ಕೆಲಸ ಮಾಡುತ್ತೀದ್ದೇವೆ. ನಾವು ಒಂದು ದಿನವೂ ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡಿಲ್ಲ. ಅಕೌಂಟ್‌ಗೆ ಜಮೆಯಾಗಿರುವ ಹಣವನ್ನು ನಾವು ತೆಗೆದುಕೊಳ್ಳುವುದಿಲ್ಲ. ಕೆಲಸ ಮಾಡಿದವರಿಗೆ ಡ್ರಾ ಮಾಡಿಕೋಡ್ತೀವಿ.

-ಈರಣ್ಣ, ರತ್ನಪ್ರಭಾ, ಖಾಸಗಿ ಶಾಲೆಯ ಶಿಕ್ಷಕರು, ಮಸ್ಕಿ

...........

ಒಟ್ಟು 47 ಕೂಲಿಕಾರರು ಕೆಲಸ ಮಾಡಿದ್ದಕ್ಕೆ ಹಾಜರಿ ಹಾಕಲಾಗಿದೆ. ನರೇಗಾ ಯೋಜನೆಯಡಿ ಪ್ರತಿಯೊಬ್ಬ ಫಲಾನುಭವಿ ಅಕೌಂಟ್‌ಗೆ ಹಣ ಜಮಾಮಾಡಲಾಗಿದೆ.

-ರಮೇಶ, ನರೇಗಾ ಉಸ್ತುವಾರಿ, ನಾಗರಬೆಂಚಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ