ಆ್ಯಪ್ನಗರ

ರಾಯಚೂರು: ನೀರು ಕುಡಿಯಲು ಕೃಷ್ಣಾ ನದಿಗೆ ಇಳಿದಿದ್ದ ಯುವಕನನ್ನು ಎಳೆದೊಯ್ದು ತಿಂದು ಹಾಕಿದ ಮೊಸಳೆ!

ಬಾಯಾರಿಕೆಯಾದ ಹಿನ್ನೆಲೆ ಕೃಷ್ಣಾ ನದಿಯಲ್ಲಿ ನೀರು‌ ಕುಡಿಯಲು ಮಲ್ಲಿಕಾರ್ಜುನ ನೀರಿಗೆ ಇಳಿದಿದ್ದಾನೆ. ಈ ವೇಳೆ ಬಕಾ ಪಕ್ಷಿಯಂತೆ ಕಾದು ಕುಳಿತ್ತಿದ್ದ ಮೊಸಳೆ ಅವನ ಮೇಲೆ ದಾಳಿ ನಡೆಸಿದೆ. ಇದನ್ನು ನೋಡುತ್ತಿದ್ದ ಮಲ್ಲಿಕಾರ್ಜುನನ ಸ್ನೇಹಿತರು ವಿಷಯವನ್ನು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಈ ವೇಳೆ ಹುಡುಕಾಟ ನಡೆಸುವಾಗ ಬುಧವಾರ ರಾತ್ರಿ ಯುವಕನ ತಲೆ ಬುರುಡೆ ಮಾತ್ರ ಪತ್ತೆಯಾಗಿದೆ.

Vijaya Karnataka Web 3 Dec 2020, 9:49 am
ರಾಯಚೂರು: ಕೃಷ್ಣಾ ನದಿಗೆ ನೀರು ಕುಡಿಯಲು ಹೋದ ಬಾಲಕನನ್ನು ಮೊಸಳೆ ತಿಂದು ಹಾಕಿರುವ ಹೃದಯ ವಿದ್ರಾವಕ ಘಟನೆ ರಾಯಚೂರಿನ ಡೊಂಗಾರಾಂಪುರ ಗ್ರಾಮದಲ್ಲಿ ನಡೆದಿದೆ. ಮಲ್ಲಿಕಾರ್ಜುನ (12) ಮೊಸಳೆಗೆ ಬಲಿಯಾದ ಬಾಲಕ.ಬುಧವಾರದಂದು ಮಲ್ಲಿಕಾರ್ಜುನ ತನ್ನ ಸ್ನೇಹಿತರೊಂದಿಗೆ ದನ ಮೇಯಿಸಲು ಕೃಷ್ಣ ನದಿ ದಂಡೆಯತ್ತ ಹೋಗಿದ್ದ.
Vijaya Karnataka Web Mallikarjuna


ಮಧ್ಯಾಹ್ನದ ವೇಳೆ ಗೆಳೆಯರು ಎಲ್ಲ ಗೆಳೆಯರು ಸೇರಿಕೊಂಡು ಊಟ ಮಾಡಿದ್ದಾರೆ. ಊಟ ಮಾಡಿದ ಬಳಿಕ ಬಾಯಾರಿಕೆಯಾದ ಹಿನ್ನೆಲೆ ಕೃಷ್ಣಾ ನದಿಯಲ್ಲಿ ನೀರು‌ ಕುಡಿಯಲು ಮಲ್ಲಿಕಾರ್ಜುನ ನೀರಿಗೆ ಇಳಿದಿದ್ದಾನೆ. ಈ ವೇಳೆ ಬಕ ಪಕ್ಷಿಯಂತೆ ಕಾದು ಕುಳಿತ್ತಿದ್ದ ಮೊಸಳೆ ಅವನ ಮೇಲೆ ದಾಳಿ ನಡೆಸಿದೆ. ಇದನ್ನು ನೋಡುತ್ತಿದ್ದ ಮಲ್ಲಿಕಾರ್ಜುನನ ಸ್ನೇಹಿತರು ವಿಷಯವನ್ನು ಗ್ರಾಮಸ್ಥರಿಗೆ ತಿಳಿಸಿದ್ದಾರೆ.

ಬಾಲಕನನ್ನು ಎಳೆದೊಯ್ದ ಮೊಸಳೆ ಬಾಲಕನ ದೇಹವನ್ನ ಸಂಪೂರ್ಣವಾಗಿ ತಿಂದು ತಲೆ ಬುರುಡೆ ಮಾತ್ರ ಬಾಕಿ ಬಿಟ್ಟಿದೆ. ನಿನ್ನೆ ರಾತ್ರಿ ಬಾಲಕನ ತಲೆ ಬುರುಡೆ ಪತ್ತೆಯಾಗಿದೆ. ಸದ್ಯ ಇಡೀ ಡೊಂಗಾರಾಂಪುರ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಇಂತಹ ಹಲವು ಘಟನೆಗಳು ಕೃಷ್ಣಾ ನದಿಯಲ್ಲಿ ನಡೆದಿದೆ.

ಎನ್‌ಆರ್‌ ಸಂತೋಷ್‌ ಆತ್ಮಹತ್ಯೆ ಯತ್ನ ಸಂಬಂಧ ತನಿಖೆ ನಡೆಸುತ್ತೇವೆ - ಬಸವರಾಜ್‌ ಬೊಮ್ಮಾಯಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ