ಆ್ಯಪ್ನಗರ

ಎಂಟು ತಿಂಗಳ ಬಾಕಿ ವೇನಕ್ಕೆ ಆಗ್ರಹ

ಬಾಕಿ ಎಂಟು ತಿಂಗಳ ವೇತನಕ್ಕೆ ಆಗ್ರಹಿಸಿ ಸಮಾಜ ಕಲ್ಯಾಣ ಇಲಾಖೆ ದಿನಗೂಲಿ ನೌಕರರು ಸಿಪಿಐಎಂಎಲ್‌ ನೇತೃತ್ವದಲ್ಲಿಗ್ರೇಡ್‌ 2 ತಹಸೀಲ್ದಾರ್‌ ಶ್ರೀನಿವಾಸ ಚಾಪಲ್‌ಗೆ ಶನಿವಾರ ಮನವಿ ಸಲ್ಲಿಸಿದರು.

Vijaya Karnataka 17 Nov 2019, 5:00 am
ದೇವದುರ್ಗ: ಬಾಕಿ ಎಂಟು ತಿಂಗಳ ವೇತನಕ್ಕೆ ಆಗ್ರಹಿಸಿ ಸಮಾಜ ಕಲ್ಯಾಣ ಇಲಾಖೆ ದಿನಗೂಲಿ ನೌಕರರು ಸಿಪಿಐಎಂಎಲ್‌ ನೇತೃತ್ವದಲ್ಲಿಗ್ರೇಡ್‌ 2 ತಹಸೀಲ್ದಾರ್‌ ಶ್ರೀನಿವಾಸ ಚಾಪಲ್‌ಗೆ ಶನಿವಾರ ಮನವಿ ಸಲ್ಲಿಸಿದರು. ಕಳೆದ 8 ತಿಂಗಳಿಂದ ವೇತನಕ್ಕಾಗಿ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡುತ್ತಾ ಬಂದರೂ ಪ್ರಯೋಜನೆ ಆಗಿಲ್ಲ. ಯಾವುದಕ್ಕೂ ಅವರು ಕಿವಿಗೂಡುತ್ತಿಲ್ಲ. ಸಂಬಳ ನಂಬಿಕೊಂಡು ಹಲವಾರು ಕಡೆ ಕೈ ಸಾಲ ಮಾಡಿಕೊಂಡಿದ್ದೇವೆ. ಮಕ್ಕಳ ಶಾಲಾ ಫೀಸ್‌ ಸೇರಿ ಕಿರಾಣಿ ಅಂಗಡಿಗಳ ತಿಂಗಳ ಹಣ ಪಾವತಿಸಬೇಕಿದೆ. ಬಹುದಿನಗಳಿಂದ ತಿಂಗಳ ಹಣ ಪಾವತಿಸದ ಕಾರಣ ನಮ್ಮಗೆ ಉದ್ರಿ ಕೊಡುವುದನ್ನು ನಿಲ್ಲಿಸಿದ್ದಾರೆ. ಇದರಿಂದ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ದಿನ ಕಳೆದಂತೆ ಸಮಸ್ಯೆ ಗಂಭೀರವಾಗತೊಡಗಿದೆ. ಹೀಗೆ ಅಧಿಕಾರಿ ನಿರ್ಲಕ್ಷತ್ರ್ಯತನ ಮುಂದುವರಿದರೆ ಇನ್ನೂ ಕೆಲವೇ ದಿನಗಳಲ್ಲಿಇಡೀ ಕುಟುಂಬಗಳು ತುತ್ತು ಅನ್ನಕ್ಕಾಗಿ ಪರದಾಡುವಂತ ಸನ್ನಿವೇಶ ಎದುರಾಗಲಿದೆ. ತಕ್ಷಣ 8 ತಿಂಗಳ ಬಾಕಿ ವೇತನ ಪಾವತಿಸುವಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಬೇಕು ಹಾಗೂ ವಿನಾ ಕಾರಣ ವಿಳಂಬ ನೀತಿ ಅನುಸರಿಸುತ್ತಿರುವ ಅಧಿಕಾರಿಗಳ ಮೇಲೆ ಸೂಕ್ತಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿಆಗ್ರಹಿಸಿದರು. ಮಲ್ಲಯ್ಯ ಕಟ್ಟಿಮನಿ, ವೆಂಕೋಬ ವೆಂಗಳಪೂರು, ಚಂದಮ್ಮ, ತಾಯಮ್ಮ, ಮಲ್ಲಮ್ಮ, ರಾಮಲಿಂಗಮ್ಮ, ಗುಂಡಮ್ಮ, ಫಾತಿಮಾ, ರಂಗಮ್ಮ, ಚನ್ನಮ್ಮ, ರೇಣುಕಾ, ದೇವಮ್ಮ, ಲಕ್ಷಿತ್ರ್ಮೕ ಇದ್ದರು.
Vijaya Karnataka Web demand for eight months arrears
ಎಂಟು ತಿಂಗಳ ಬಾಕಿ ವೇನಕ್ಕೆ ಆಗ್ರಹ



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ