ಆ್ಯಪ್ನಗರ

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ

ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ, ಕರ್ನಾಟಕ ಫುಡ್ ಆ್ಯಂಡ್ ಸಿವಿಲ್ ಸಪ್ಲೈ ಕಾರ್ಪೊರೇಷನ್ ಲೋಡಿಂಗ್ ಆ್ಯಂಡ್ ಅನ್‌ಲೋಡಿಂಗ್ ಲೇಬರ್ಸ್‌ ಯೂನಿಯನ್ ತಾಲೂಕು ಘಟಕದ ನೇತೃತ್ವದಲ್ಲಿ ಕಾರ್ಮಿಕರು ಸೋಮವಾರ ಕೆಎಫ್‌ಸಿಎಸ್‌ಸಿ ಗೋದಾಮು ಬಳಿ ಧರಣಿ ನಡೆಸಿದರು.

ವಿಕ ಸುದ್ದಿಲೋಕ 24 May 2016, 6:36 am
ಮಾನ್ವಿ ; ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ, ಕರ್ನಾಟಕ ಫುಡ್ ಆ್ಯಂಡ್ ಸಿವಿಲ್ ಸಪ್ಲೈ ಕಾರ್ಪೊರೇಷನ್ ಲೋಡಿಂಗ್ ಆ್ಯಂಡ್ ಅನ್‌ಲೋಡಿಂಗ್ ಲೇಬರ್ಸ್‌ ಯೂನಿಯನ್ ತಾಲೂಕು ಘಟಕದ ನೇತೃತ್ವದಲ್ಲಿ ಕಾರ್ಮಿಕರು ಸೋಮವಾರ ಕೆಎಫ್‌ಸಿಎಸ್‌ಸಿ ಗೋದಾಮು ಬಳಿ ಧರಣಿ ನಡೆಸಿದರು.
Vijaya Karnataka Web demand sit in demanding to achieve
ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ


ಭಾರತ ಆಹಾರ ನಿಗಮದಲ್ಲಿ ನೀಡುತ್ತಿರುವ ಪ್ರಕಾರ ವೇತನ ಸವಲತ್ತು, ರಜೆ, ಉದ್ಯೋಗ ಪತ್ರ, ಗುರುತಿನ ಚೀಟಿ ನೀಡಬೇಕು.

ಕಾರ್ಮಿಕರಿಗೆ ವೇತನ ಚೀಟಿ, ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ವೇತನ, ಭವಿಷ್ಯ ನಿಧಿ ಒದಗಿಸಬೇಕು ಎಂದು ಆಗ್ರಹಿಸಿದರು.

ಕೆಎಫ್‌ಸಿಎಸ್‌ಸಿಯ ಗೋದಾಮುಗಳಲ್ಲಿ ಹಲವು ವರ್ಷಗಳಿಂದ ನಿರಂತರವಾಗಿ ಕೆಲಸ ನಿರ್ವಹಿಸುತ್ತಿದ್ದು, ಇಲ್ಲಿವರೆಗೆ ಸರಕಾರವಾಗಲಿ, ಆಹಾರ ನಿಗಮವಾಗಲಿ ಸವಲತ್ತು ಕೊಡಿಸುವಲ್ಲಿ ಸಂಪೂರ್ಣ ವಿಫಲವಾಗಿವೆ. ಬೇಡಿಕೆ ಈಡೇರುವವರೆಗೂ ಅನಿರ್ದಿಷ್ಟಾವಧಿ ನಿರಶನ ನಡೆಸಲಾಗುವುದು ಎಂದು ಪ್ರತಿಭಟನಾನಿರತರು ತಿಳಿಸಿದರು.

ಯೂನಿಯನ್ ತಾಲೂಕು ಅಧ್ಯಕ್ಷ ಬಿ.ರಾಮಣ್ಣ ನಾಯಕ, ಗೌರವ ಸಲಹೆಗಾರ ಶ್ರೀಕಾಂತ ಗೂಳಿ ಪಾಟೀಲ್, ಹನುಮಂತಪ್ಪ ನಾಯಕ, ಚನ್ನಪ್ಪ, ಮಂಜುನಾಥ ನಾಯಕ, ಸಬ್ಜಲಿ ಸಾಬ್, ದೇವೇಂದ್ರ, ಬಂದೇನವಾಜ್, ದೇವರಾಜ ಇನ್ನಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ