ಆ್ಯಪ್ನಗರ

ಭವಿಷ್ಯ ನಿಧಿ ಕರಡು ಮಂಡನೆಗೆ ಆಗ್ರಹ

ಶೋಷಣೆಗೊಳಗಾದ ಹಮಾಲಿ ಕಾರ್ಮಿಕರು, ಅಸಂಘಟಿತ ಕಾರ್ಮಿಕರಿಗಾಗಿ ರಾಜ್ಯ ಸರಕಾರ ಭವಿಷ್ಯ ನಿಧಿ ಕರಡು ಮಂಡನೆ ಮಾಡುವಂತೆ ಒತ್ತಾಯಿಸಿ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್‌ನ ತಾಲೂಕು ಘಟಕ ನಗರದ ಶಾಸಕರ ಭವನದ ಎದುರು ಬುಧವಾರ ಪ್ರತಿಭಟನೆ ನಡೆಸಿತು.

ವಿಕ ಸುದ್ದಿಲೋಕ 21 Jul 2016, 9:00 am

ಸಿಂಧನೂರು: ಶೋಷಣೆಗೊಳಗಾದ ಹಮಾಲಿ ಕಾರ್ಮಿಕರು, ಅಸಂಘಟಿತ ಕಾರ್ಮಿಕರಿಗಾಗಿ ರಾಜ್ಯ ಸರಕಾರ ಭವಿಷ್ಯ ನಿಧಿ ಕರಡು ಮಂಡನೆ ಮಾಡುವಂತೆ ಒತ್ತಾಯಿಸಿ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್‌ನ ತಾಲೂಕು ಘಟಕ ನಗರದ ಶಾಸಕರ ಭವನದ ಎದುರು ಬುಧವಾರ ಪ್ರತಿಭಟನೆ ನಡೆಸಿತು.

ನಗರದ ಪ್ರವಾಸಿ ಮಂದಿರದಿಂದ ಪ್ರಾರಂಭಗೊಂಡ ಪ್ರತಿಭಟನಾ ಮೆರವಣಿಗೆ, ಶಾಸಕರ ಕಚೇರಿಗೆ ತಲುಪಿತು. ನಂತರ ಧರಣಿ ನಡೆಸಿ, ರಾಜ್ಯದ 155 ಮುಖ್ಯ ಹಾಗೂ 353 ಉಪ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಸುಮಾರು 35 ಸಾವಿರಕ್ಕಿಂತಲೂ ಹೆಚ್ಚು ಲೈಸೆನ್ಸ್‌ ಪಡೆದಿರುವ ಮತ್ತು ಸೀಸನ್‌ನಲ್ಲಿ ಮತ್ತೆ ಅಷ್ಟೇ ಸಂಖ್ಯೆಗೆ ಸಮನಾದ ಕಾರ್ಮಿಕರು ರೈತರು ಬೆಳೆದು ಮಾರುಕಟ್ಟೆಗೆ ತರುವ ಕೃಷಿ ಉತ್ಪನ್ನಗಳನ್ನು ನಂಬಿಯೇ ಬದುಕು ಸಾಗಿಸುತ್ತಿದ್ದಾರೆ. ವರ್ಷದಲ್ಲಿ ಸಿಗುವ 3-4 ತಿಂಗಳ ದುಡಿಮೆಯಿಂದ ಬದುಕು ನಡೆಸಬೇಕಾಗಿದೆ. ಕೇವಲ 300 ರಿಂದ 2,000 ರೂ. ವರೆಗೆ ಕೂಲಿ ದುಡಿದು ಬದುಕು ಕಟ್ಟಿಕೊಳ್ಳಬೇಕಾಗಿದೆ. ಇಂತಹ ಕಾರ್ಮಿಕರಿಗೆ ಜೀವನದ ಭದ್ರತೆ ಮಾಯವಾಗಿದೆ. ಹೀಗಾಗಿ ಪಶ್ಚಿಮ ಬಂಗಾಳ ಸರಕಾರದ ಮಾದರಿಯಲ್ಲಿ ಭವಿಷ್ಯನಿಧಿ ಯೋಜನೆ ಜಾರಿ ಮಾಡಬೇಕು.

Vijaya Karnataka Web demand to implement future fund draft
ಭವಿಷ್ಯ ನಿಧಿ ಕರಡು ಮಂಡನೆಗೆ ಆಗ್ರಹ


ಈ ಯೋಜನೆಯಿಂದ ಒಬ್ಬ ಕಾರ್ಮಿಕ 18ನೇ ವಯಸ್ಸಿಗೆ ಮಾಸಿಕ 50 ರೂಪಾಯಿ ನೀಡಿದರೆ, ಸರಕಾರದಿಂದ 50 ರೂಪಾಯಿ ವಂತಿಗೆ ನೀಡಬೇಕು. ಈ ಹಣವು 60 ವರ್ಷದ ವೇಳೆಗೆ ಬಡ್ಡಿ ಸಮೇತ 4 ಲಕ್ಷ ರೂಪಾಯಿಗೂ ಹೆಚ್ಚಾಗಿರುತ್ತದೆ. ಹೀಗಾಗಿ ಸರಕಾರ ಈ ವಿಚಾರವಾಗಿ ಗಮನಹರಿಸಿ ಕ್ರಮಕ್ಕೆ ಮುಂದಾಗಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು.

ಸಂಘಟನೆಯ ಜಿಲ್ಲಾಧ್ಯಕ್ಷ ಯಂಕಪ್ಪ ಕೆಂಗಲ್‌, ಜಿಲ್ಲಾ ಉಪಾಧ್ಯಕ್ಷ ಶೇಕ್ಷಾಖಾದ್ರಿ, ಮುಖಂಡ ಎಸ್‌.ದೇವೇಂದ್ರಗೌಡ, ಗೇಸುರದಾಜ್‌, ಶೇಖರಪ್ಪ, ಕೆ.ಗರಿಬಾಷಾ, ಹುಸೇನಪ್ಪ ಕೆಂಗಲ್‌, ಮಾರೆಪ್ಪ, ಕರಿಯಪ್ಪ ಸೇರಿ ಹಲವರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ