ಆ್ಯಪ್ನಗರ

ಬರ ನಿರ್ವಹಣೆ ಚುರುಕು: ಯಾದವ್‌

ಹೈ.ಕ. ಭಾಗದಲ್ಲಿ ಈ ಬಾರಿ ಬಹುತೇಕ ಭೀಕರ ಬರಗಾಲವಿದೆ. ಬರ ನಿರ್ವಹಣೆ ಕಾರ್ಯವನ್ನು ಚುರುಕಿನಿಂದ ಮಾಡಲಾಗುತ್ತಿದೆ ಎಂದು ಕಲುಬುರಗಿ ಪ್ರಾದೇಶಿಕ ಆಯುಕ್ತ ಸುಬೋಧ್‌ ಯಾದವ್‌ ಹೇಳಿದರು.

Vijaya Karnataka 7 Dec 2018, 4:23 pm
ಲಿಂಗಸುಗೂರು : ಹೈ.ಕ. ಭಾಗದಲ್ಲಿ ಈ ಬಾರಿ ಬಹುತೇಕ ಭೀಕರ ಬರಗಾಲವಿದೆ. ಬರ ನಿರ್ವಹಣೆ ಕಾರ್ಯವನ್ನು ಚುರುಕಿನಿಂದ ಮಾಡಲಾಗುತ್ತಿದೆ ಎಂದು ಕಲುಬುರಗಿ ಪ್ರಾದೇಶಿಕ ಆಯುಕ್ತ ಸುಬೋಧ್‌ ಯಾದವ್‌ ಹೇಳಿದರು.
Vijaya Karnataka Web drought management yadav
ಬರ ನಿರ್ವಹಣೆ ಚುರುಕು: ಯಾದವ್‌


ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರಗಾಲ ನಿರ್ವಹಣೆಗೆ ಬಳ್ಳಾರಿ, ರಾಯಚೂರು ಹಾಗೂ ಯಾದಗಿರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಪರಿಶೀಲನೆ ನಡೆಸಲಾಗುವುದು. ಇದರೊಂದಿಗೆ ಎಚ್‌ಕೆಡಿಆರ್‌ಬಿ ಅಡಿ ಮಂಜೂರಾಗಿರುವ ಕಾಮಗಾರಿಗಳನ್ನು ಸಕಾಲದಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಎಚ್‌ಕೆಡಿಆರ್‌ಬಿಗೆ ಪ್ರಸಕ್ತ ಸಾಲಿನಲ್ಲಿ ಒಂದು ಸಾವಿರ ಕೋಟಿ ರೂ. ಬಿಡುಗಡೆಯಾಗಿದೆ. ಈ ಅನುದಾನವನ್ನು ತಾಲೂಕುವಾರು ಹಂಚಿಕೆ ಮಾಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಎಂ.ಪಿ.ಮಾರುತಿ, ತಹಸೀಲ್ದಾರ್‌ ಚಾಮರಾಜ್‌ ಪಾಟೀಲ್‌, ಕಂದಾಯ ನಿರೀಕ್ಷ ಕ ರಾಮಕೃಷ್ಣ ಹಾಗೂ ಇತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ