ಆ್ಯಪ್ನಗರ

ಹಡಗಲಿಯಲ್ಲಿ ದುರ್ಗಾದೇವಿ ಜಾತ್ರೆ

ಪಟ್ಟಣ ಸಮೀಪದ ಹಡಗಲಿ ಗ್ರಾಮದ ಶ್ರೀ ದುರ್ಗಾದೇವಿ ಜಾತ್ರೆ ಬುಧವಾರ ಅದ್ಧೂರಿಯಾಗಿ ಜರುಗಿತು. ಜಾತ್ರೆ ನಿಮಿತ್ತ ಮಂಗಳವಾರ ರಾತ್ರಿ ಗ್ರಾಮದ ಹೊರವಲಯದಲ್ಲಿರುವ ಗರ್ಭಗುಡಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

Vijaya Karnataka 26 Apr 2018, 5:00 am
ಮುದಗಲ್‌ : ಪಟ್ಟಣ ಸಮೀಪದ ಹಡಗಲಿ ಗ್ರಾಮದ ಶ್ರೀ ದುರ್ಗಾದೇವಿ ಜಾತ್ರೆ ಬುಧವಾರ ಅದ್ಧೂರಿಯಾಗಿ ಜರುಗಿತು. ಜಾತ್ರೆ ನಿಮಿತ್ತ ಮಂಗಳವಾರ ರಾತ್ರಿ ಗ್ರಾಮದ ಹೊರವಲಯದಲ್ಲಿರುವ ಗರ್ಭಗುಡಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಇದೇ ವೇಳೆ, ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬುಧವಾರ ಬೆಳಗ್ಗೆ ಗ್ರಾಮದಲ್ಲಿರುವ ಗುಡಿಗೆ ಕಳಸಾರೋಹಣ ಮತ್ತು ವಿಶೇಷ ಪೂಜೆ ನಡೆದವು. ಹಡಗಲಿಯ ಸುತ್ತಮುತ್ತಲಿನ ಗ್ರಾಮಗಳಾದ ನಾಗಲಾಪುರ, ದೇಸಾಯಿ ಭೋಗಾಪುರ, ಹಡಗಲಿ ತಾಂಡಾ, ಕನ್ನಾಳ, ತಿಮ್ಮಾಪೂರ, ತಲೇಖಾನ್‌, ಯರದೊಡ್ಡಿ, ವೇಣ್ಯಪ್ಪನ ತಾಂಡಾ, ರಾಮಪ್ಪನ ತಾಂಡಾ, ಲಿಂಬೆಪ್ಪನ ತಾಂಡಾ, ಮುದಗಲ್ಲ ಪಟ್ಟಣ, ಆಂಧ್ರಪ್ರದೇಶದ ಭಕ್ತರು ಆಗಮಿಸಿ ದೇವಿಗೆ ಕಾಯಿ-ಕರ್ಪೂರ, ಹೂ-ಹಣ್ಣು, ಮುಡಿಪು ಅರ್ಪಿಸಿದರು. ಉರುಳು ಸೇವೆ, ಕುಂಭ ಮೆರವಣಿಗೆ ಮಾಡಿ ದೇವಿ ಕೃಪೆಗೆ ಪಾತ್ರರಾದರು.
Vijaya Karnataka Web durga devi fair in the hadagali
ಹಡಗಲಿಯಲ್ಲಿ ದುರ್ಗಾದೇವಿ ಜಾತ್ರೆ


ಹಡಗಲಿ ತಾ.ಪಂ.ಸದಸ್ಯೆ ಶಾರದಾ ದೇವಪ್ಪ ರಾಠೋಡ, ಪಿಕಾರ್ಡ್‌ ಬ್ಯಾಂಕ್‌ ಮಾಜಿ ನಿರ್ದೇಶಕ ಶಂಭುಲಿಂಗಪ್ಪ ವಿಟ್ಲಾಪುರ, ಚೇತನ ಪಾಟೀಲ್‌ ಮಸ್ಕಿ, ಗ್ರಾ.ಪಂ. ಸದಸ್ಯರಾದ ವೆಂಕನಗೌಡ ಪೊಲೀಸ್‌ ಪಾಟೀಲ್‌, ಪಿಕೆಪ್ಪ ನಾಯ್ಕ, ಮಾನಮ್ಮ ಬಾಲಚಂದ್ರ, ಶಂಕ್ರಮ್ಮ ಮಾನಪ್ಪ, ಮಾಜಿ ಸದಸ್ಯರಾದ ದುರುಗಪ್ಪ ಕಟ್ಟಮನಿ, ಶಂಕ್ರಪ್ಪ ದೇಸಾಯಿ ಭೋಗಾಪೂರ, ಹೇಮಣ್ಣ ತಳವಾರ, ಅಮರೇಶ ವಿಟ್ಲಾಪುರ, ತಿಮ್ಮನಗೌಡ ದಳಪತಿ ಸೇರಿ ಬಂಜಾರ ಸಮುದಾಯದ ಮುಖಂಡರು ಇದ್ದರು.

ಪೂಜೆ: ಪಟ್ಟಣ ಸಮೀಪದ ವೇಣ್ಯಪ್ಪನ ತಾಂಡಾದ ಶ್ರೀ ಗೋಪಾಲಮಹಾರಾಜರ ಜಾತ್ರಾ ಮಹೋತ್ಸವ ನಡೆಯಿತು. ಪಾಂಡುರಂಗ ಪಮ್ಮಾರ ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳಿಂದ ತಾಂಡಾದ ಎಲ್ಲರೂ ಒಗ್ಗಟ್ಟಿನಿಂದ ಸಹಬಾಳ್ವೆ ನಡೆಸಲು ಸಹಕಾರಿಯಾಗುತ್ತಿದೆ ಎಂದರು. ಅಮರೇಶ ಮಸ್ಕಿ, ಎಲ್ಲೋಜಿ ಕೋರೆಕರ್‌, ಶಿವಪ್ಪ ಹುಬ್ಬಳ್ಳಿ, ಪಂಪಣ್ಣ ಪರಡ್ಡಿ, ದಳಪತಿ ಮೆದಿಕಿನಾಳ, ಯಲ್ಲಪ್ಪ ಮೆದಿಕಿನಾಳ, ಚೆನ್ನಪ್ಪ ಪುಣೆ, ರಾಮಣ್ಣ ಮಾಸ್ತರ್‌ ಸೇರಿದಂತೆ ಅನೇಕರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ