ಆ್ಯಪ್ನಗರ

ನೌಕರರ ಮತ ಖರೀದಿಗೆ ದುಂಬಾಲು

ನಗರದ ತಹಸಿಲ್‌ ಕಚೇರಿಯಲ್ಲಿ ಸೋಮವಾರ ಸರಕಾರಿ ನೌಕರರ ಅಂಚೆ ಮತ ಖರೀದಿಗೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕಾರ್ಯಕರ್ತರು ಮುಂದಾಗಿರುವುದು ಕಂಡುಬಂತು.

Vijaya Karnataka 15 May 2018, 5:00 am
ಸಿಂಧನೂರು : ನಗರದ ತಹಸಿಲ್‌ ಕಚೇರಿಯಲ್ಲಿ ಸೋಮವಾರ ಸರಕಾರಿ ನೌಕರರ ಅಂಚೆ ಮತ ಖರೀದಿಗೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕಾರ್ಯಕರ್ತರು ಮುಂದಾಗಿರುವುದು ಕಂಡುಬಂತು.
Vijaya Karnataka Web RAC-RCH14SND2


ಅಂಚೆ ಮತದಾನಕ್ಕೆ ಸೋಮವಾರ ಕೊನೆ ದಿನವಾಗಿದ್ದರಿಂದ ಬೆಳಗ್ಗೆಯಿಂದಲೇ ಮತ ಹಾಕದ ನೌಕರರನ್ನು ಸಂಪರ್ಕಿಸಿರುವ ಆಯಾ ಪಕ್ಷ ಗಳ ಕಾರ್ಯಕರ್ತರು, ಮತ ಹಾಕುವವರೆಗೂ ಅವರ ಬೆನ್ನು ಬಿದ್ದಿದ್ದರು. ಪ್ರತಿ ಮತಕ್ಕೆ 1500 ರೂಪಾಯಿಂದ 2000 ರೂಪಾಯಿ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ ಮತ ಎಣಿಕೆ ಕಾರಣಕ್ಕೆ ಅಧಿಕಾರಿಗಳೆಲ್ಲರೂ ರಾಯಚೂರಿಗೆ ತೆರಳಿದ್ದರು. ಹೀಗಾಗಿ ಕಚೇರಿ ಸಭಾಂಗಣದಲ್ಲಿ ಮತದಾನ ಪ್ರಕ್ರಿಯೆ ಯಾವುದೇ ಬಿಗಿ ಭದ್ರತೆ ಇಲ್ಲದೆ ನಿರುಮ್ಮಳವಾಗಿ ನಡೆದಿತ್ತು. ಹೀಗಾಗಿ ಯಾರು ಬಂದು ಮತ ಹಾಕಿ ಹೋದರೂ ಕೇಳುವವರೇ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು. ಬೆಳಗ್ಗೆಯಿಂದ ಸಂಜೆವರೆಗೂ ಮತದಾರರಿಗಾಗಿ ಕಾಯ್ದ ಕಾರ್ಯಕರ್ತರು, ಸಮಯವಾದ ಬಳಿಕವೇ ಮನೆ ಕಡೆ ಹೊರಟರು. ಈ ಬಾರಿಯ ಚುನಾವಣೆ ಭಾರಿ ಜಿದ್ದಿನಿಂದ ಕೂಡಿರುವುದರಿಂದ ಪ್ರತಿ ಮತಕ್ಕೂ ಬೆಲೆ ಬಂದಿದೆ. ಹೀಗಾಗಿ ಎಷ್ಟೇ ಖರ್ಚಾದರೂ ಸರಿ, ಮತವನ್ನು ನಮ್ಮ ಅಭ್ಯರ್ಥಿಗೆ ಹಾಕಿಸಲೇ ಬೇಕು ಎಂದುಕೊಂಡು ಗೆಲುವು ಪಡೆಯಬೇಕು ಎಂಬ ಇಚ್ಛೆ ಕಾರ್ಯಕರ್ತರದ್ದಾಗಿದೆ. ಇದಲ್ಲದೇ ಕೆಲ ನೌಕರರು ಯಾರ ಆಮಿಷಕ್ಕೂ ಒಳಗಾಗದೇ ನೇರವಾಗಿ ಮತ ಚಲಾವಣೆಗೆ ಮುಂದಾಗಿರುವುದು ಕಂಡುಬಂತು.

ಸಮಸ್ಯೆ:
ಕೆಲ ನೌಕರರಿಗೆ ಮತ ಹಾಕಲು ಅಂಚೆಪತ್ರಗಳ ಮೂಲಕ ದಾಖಲೆ ಕಳುಹಿಸಿದ್ದರೂ ಇದುವರೆಗೆ ತಲುಪಿಲ್ಲ. ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಉಪನ್ಯಾಸಕರು ಇಂತಹ ಸಮಸ್ಯೆ ಹೇಳಿಕೊಂಡು ತಹಸಿಲ್‌ ಕಚೇರಿಗೆ ಬಂದಿದ್ದರು. ನಿಮಗೆ ಮತ ಹಾಕಲು ಅವಕಾಶ ದೊರೆಯಲೆಂದೇ ಅಂಚೆ ಮೂಲಕ ಪತ್ರ ಕಳುಹಿಸಲಾಗಿದೆ. ಆದರೆ ಭಾನುವಾರ ರಜೆ ಇರುವುದರಿಂದ ತಲುಪಿರುವುದಿಲ್ಲ. ಸಂಜೆಯೊಳಗೆ ಬರಬಹುದು ಎಂದು ಸಿಬ್ಬಂದಿ ತಿಳಿಸಿದ್ದಾರೆ. ಆದರೆ ನೌಕರರು ಮಾತ್ರ ಮತದಾನದಿಂದ ವಂಚಿತರಾಗಿದ್ದಕ್ಕೆ ಬೇಸರಗೊಂಡರು. ಗಂಟೆಗಟ್ಟಲೆ ಕಚೇರಿಯಲ್ಲಿಯೇ ಕಾಯ್ದು ಕುಳಿತರೂ ಸಮಸ್ಯೆ ಬಗೆಹರಿಯಲಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ