ಆ್ಯಪ್ನಗರ

ತುಂಗಭದ್ರಾ-ಕೃಷ್ಣಾ ನದಿ ಜೋಡಣೆಗೆ ರೈತ ಸಂಘ ಆಗ್ರಹ

ರಾಯಚೂರು ಜಿಲ್ಲೆಯಲ್ಲಿ ತುಂಗಭದ್ರಾ ಮತ್ತು ಕೃಷ್ಣಾ ನದಿ ಜೋಡಣೆ ಮಾಡಿ ಈ ಭಾಗದ ನೀರಿನ ಸಮಸ್ಯೆ ನೀಗಿಸುವತ್ತ ಮಹತ್ವದ ಯೋಜನೆ ಜಾರಿಗೊಳಿಸುವಂತೆ ರೈತ ಸಂಘದ ಮುಖಂಡರು ಶನಿವಾರ ವಿರೋಧ ಪಕ್ಷ ದ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.

Vijaya Karnataka 10 Jun 2019, 3:34 pm
ಲಿಂಗಸುಗೂರು : ರಾಯಚೂರು ಜಿಲ್ಲೆಯಲ್ಲಿ ತುಂಗಭದ್ರಾ ಮತ್ತು ಕೃಷ್ಣಾ ನದಿ ಜೋಡಣೆ ಮಾಡಿ ಈ ಭಾಗದ ನೀರಿನ ಸಮಸ್ಯೆ ನೀಗಿಸುವತ್ತ ಮಹತ್ವದ ಯೋಜನೆ ಜಾರಿಗೊಳಿಸುವಂತೆ ರೈತ ಸಂಘದ ಮುಖಂಡರು ಶನಿವಾರ ವಿರೋಧ ಪಕ್ಷ ದ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.
Vijaya Karnataka Web farmers association is demanding the tungabhadra krishna river link
ತುಂಗಭದ್ರಾ-ಕೃಷ್ಣಾ ನದಿ ಜೋಡಣೆಗೆ ರೈತ ಸಂಘ ಆಗ್ರಹ


ಪಟ್ಟಣದ ಪ್ರವಾಸಿಮಂದಿರದಲ್ಲಿ ಮನವಿ ಸಲ್ಲಿಸಿದ ರೈತರು, ಕೃಷ್ಣಾ-ತುಂಗಭದ್ರಾ ನದಿಗಳ ಜೋಡಣೆ ಮಾಡಿ ಜಿಲ್ಲೆಯಲ್ಲಿರುವ ಎಲ್ಲ ಕೆರೆಗಳಿಗೆ ನೀರು ತುಂಬಿಸುವುದರ ಜತೆಗೆ ಕೆರೆಗಳ ಅಭಿವೃದ್ಧಿಪಡಿಸಬೇಕು. ಹಾಗೂ ದೇಶದ ಎಲ್ಲ ನದಿಗಳ ಜೋಡಣೆ ಮಾಡಿ ಮಾಜಿ ಪಿಎಂ ವಾಜಪೇಯಿ ಅವರ ಕನಸನ್ನು ನನಸು ಮಾಡಿ ಬರಗಾಲ ಮುಕ್ತ ದೇಶವನ್ನಾಗಿಸಲು ಕೇಂದ್ರ ಸರಕಾರದ ಮೇಲೆ ಒತ್ತಡ ತರಬೇಕು. ಪ್ರಧಾನಮಂತ್ರಿ ಫಸಲ್‌ ಬಿಮಾಯೋಜನೆಯಡಿ ಜಿಲ್ಲೆಯ ಸಾಲ ಪಡೆದ ಹಾಗೂ ಸಾಲ ಪಡೆಯಲಾರದ ರೈತರು 2014ರಿಂದ ಸತತ ಐದು ವರ್ಷಗಳ ಬೆಳೆ ವಿಮಾ ತುಂಬಿದ್ದು, 2016ರಲ್ಲಿ 42 ಕೋಟಿ ರೂ. ಮಾತ್ರ ಜಿಲ್ಲೆಗೆ ಬಂದಿದೆ. ಇನ್ನುಳಿದ ನಾಲ್ಕು ವರ್ಷಗಳ ಹಣ ಇನ್ನೂ ಬಂದಿಲ್ಲ. ರೈತರಿಗೆ ಆದ ಅನ್ಯಾಯವನ್ನು ಸರಿಪಡಿಸಿ ಐದು ವರ್ಷ ಕಾಲದ ಬೆಳೆ ವಿಮೆ ದೊರಕಿಸಿಕೊಡಲು ಸರಕಾರದ ಮೇಲೆ ಒತ್ತಡ ತರಬೇಕು ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.

ರೈತ ಸಂಘದ ಹಿರಿಯ ಮುಖಂಡ ಅಮರಣ್ಣ ಗುಡಿಹಾಳ, ತಾಲೂಕ ಅಧ್ಯಕ್ಷ ವೀರನಗೌಡ ಹಟ್ಟಿ, ಮಲ್ಲಣ್ಣ ಗೌಡೂರು, ಕುಪ್ಪಣ್ಣ ಗೋನವಾಟ್ಲ್‌, ಬಸನಗೌಡ ಮಟ್ಟೂರು, ಸಿದ್ದೇಶ ಗೌಡೂರು, ಹುಚ್ಚರೆಡ್ಡಿ ಅಮೀನಗಡ, ದುರಗಪ್ಪ ಐದಭಾವಿ, ಅಮರೇಗೌಡ ಗೋನವಾಟ್ಲ್‌ ಹಾಗೂ ಇತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ