ಆ್ಯಪ್ನಗರ

ಹೆಚ್ಚಿನ ಶುಲ್ಕ ವಸೂಲಿ: ಕ್ರಮಕ್ಕೆ ಒತ್ತಾಯ

ಪಟ್ಟಣದಲ್ಲಿ ಮೂಲಭೂತ ಸೌಕರ್ಯ ಇಲ್ಲದ ಹಾಗೂ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಪರವಾನಗಿ ರದ್ದುಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ ಬಣ) ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಗುಡಿಹಾಳಗೆ ಮನವಿ ಸಲ್ಲಿಸಿದರು.

Vijaya Karnataka 12 Jun 2018, 12:00 am
ಮಾನ್ವಿ: ಪಟ್ಟಣದಲ್ಲಿ ಮೂಲಭೂತ ಸೌಕರ್ಯ ಇಲ್ಲದ ಹಾಗೂ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಪರವಾನಗಿ ರದ್ದುಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ ಬಣ) ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಗುಡಿಹಾಳಗೆ ಮನವಿ ಸಲ್ಲಿಸಿದರು.
Vijaya Karnataka Web RAC-RCH11MNV4


ಪಟ್ಟಣದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣ ಇಲಾಖೆಯ ಮಾರ್ಗಸೂಚಿಯ ಪ್ರಕಾರ ಸುಸಜ್ಜಿತ ಶಾಲಾ ಮೈದಾನ, ಮೂಲಭೂತ ಸೌಕರ್ಯಗಳಾದ ಕುಡಿವ ನೀರು, ಆಟದ ಮೈದಾನ, ವಿದ್ಯುತ್, ಸುಸಜ್ಜಿತ ಶಾಲಾ ಕಟ್ಟಡಗಳು, ಉತ್ತಮ ಪರಿಸರ, ವಿದ್ಯಾರ್ಹತೆ ಹೊಂದಿರುವ ಶಿಕ್ಷಕರು, ಶಾಲೆಗಳಲ್ಲಿ ಕಂಪ್ಯೂಟರ್ ಶಿಕ್ಷಣ, ಸಿ.ಸಿ ಕ್ಯಾಮೆರಾ, ಪ್ರತ್ಯೇಕ ವಿಷಯವಾರು ಅನುಭವಿ ಶಿಕ್ಷಕರು ಇಲ್ಲದೇ ಇದ್ದರೂ ಸಹ ಪ್ರವೇಶ ಪಡೆಯುವ ಮಕ್ಕಳಿಗೆ ಹೆಚ್ಚಿನ ಹಣ ಪಡೆಯಲಾಗುತ್ತಿದೆ. ಅಷ್ಟೆ ಅಲ್ಲದೇ ಪಟ್ಟಣದ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ಯಾವೊಬ್ಬ ಅಧಿಕಾರಿಗಳ ಭಯ ಇಲ್ಲದಂತಾಗಿದ್ದು, ಶಾಲೆಗೆ ಸೇರ ಬಯಸುವ ಮಕ್ಕಳಿಗೆ 20,000 ರಿಂದ 30,000 ವರೆಗೆ ಹಣ ವಸೂಲಿ ಮಾಡಲಾಗುತ್ತಿದೆ.

ಆರ್‌ಟಿಇ ಕಾಯ್ದೆಯಡಿ ಆಯ್ಕೆಯಾದ ಮಕ್ಕಳಿಗೆ ಸರಕಾರ ಉಚಿತವಾಗಿ ಪಠ್ಯ ಪುಸ್ತಕ ಸೇರಿ ಇತರೆ ಸೌಕರ್ಯ ಒದಗಿಸುವಂತ ಯೋಜನೆಗಳು ಜಾರಿಗೆ ತಂದರೂ ಸಹ ಅಧಿಕಾರಿಗಳು ಅಂತಹ ಯೋಜನೆಗಳನ್ನು ಸಂಪೂರ್ಣವಾಗಿ ನಿಷ್ಕ್ರೀಯಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೂಡಲೇ ಅಧಿಕಾರಿಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ವಸೂಲಿ ಹಾವಳಿಗೆ ಕಡಿವಾಣ ಹಾಕುವಂತೆ ಮನವಿಯಲ್ಲಿ ಒತ್ತಾಯಿಸಿದರು.

ಕರವೇ ತಾಲೂಕಾಧ್ಯಕ್ಷ ಸುಭಾನ್ ಬೇಗ್, ಜಿಲ್ಲಾ ಉಪಾಧ್ಯಕ್ಷ ಎಜಾಸ್ ಖಾದ್ರಿ, ಮಹಮದ್ ಸಲಿಂ, ಅರವಿಂದ್ ಭಾಸುತ್ಕರ್, ಜೆ.ಉಮಾಪತಿ, ಸೌಂದರ್ಯ ಪ್ರಸಾದ್, ಯೂಸುಫ್, ಗಿರೀಶ್ ಜೋಶಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ