ಆ್ಯಪ್ನಗರ

ಅತ್ಯಚಾರ ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿ

ಬಿಜಾಪೂರು ಜಿಲ್ಲೆಯ ದೇವರಹಿಪ್ಪರಗಿ ಗ್ರಾಮದ ಅಸಂತಪೂರು ಗ್ರಾಮದ ವಿದ್ಯಾರ್ಥಿನಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ದೇವದುರ್ಗದಲ್ಲಿಪ್ರಗತಿ ಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಇಲ್ಲಿನ ತಹಸೀಲ್ದಾರ್‌ ಕೆ.ಮಂಜುನಾಥ ಮುಖಾಂತರ ಗೃಹಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಗುರುವಾರ ರವಾನಿಸಿದರು.

Vijaya Karnataka 28 Sep 2019, 5:00 am
ದೇವದುರ್ಗ: ಬಿಜಾಪೂರು ಜಿಲ್ಲೆಯ ದೇವರಹಿಪ್ಪರಗಿ ಗ್ರಾಮದ ಅಸಂತಪೂರು ಗ್ರಾಮದ ವಿದ್ಯಾರ್ಥಿನಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ದೇವದುರ್ಗದಲ್ಲಿಪ್ರಗತಿ ಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಇಲ್ಲಿನ ತಹಸೀಲ್ದಾರ್‌ ಕೆ.ಮಂಜುನಾಥ ಮುಖಾಂತರ ಗೃಹಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಗುರುವಾರ ರವಾನಿಸಿದರು.
Vijaya Karnataka Web give severe punishment to the highest accused
ಅತ್ಯಚಾರ ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿ


ಮಗಳು ನಾಪತ್ತೆ ಕುರಿತು ಕುಟುಂಬಸ್ಥರು ಕಲಕೇರಿ ಠಾಣೆಗೆ ದೂರು ಕೊಡಲು ಹೋದಾಗ ಪೊಲೀಸರು ದೂರು ದಾಖಲಿಸದೇ ಆರೋಪಿತರ ಪರವಾಗಿ ವಾದಿಸಿ ಮರಳಿ ಕಳಿಸಿದ್ದಾರೆ. ಸಿಪಿಐ, ಪಿಎಸ್‌ಐ ಸೇರಿ ಕೆಲ ಪೊಲೀಸ್‌ ಪೇದೆಗಳು ಆರೋಪಿತರ ರಕ್ಷಣೆ ನಿಂತಿದ್ದಾರೆ. ತಕ್ಷಣ ಇವರನ್ನು ಸೇವೆಯಿಂದ ಅಮಾನತುಗೊಳಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು. ಎಂಆರ್‌ಎಚ್‌ಎಸ್‌ ಜಿಲ್ಲಾಧ್ಯಕ್ಷ ಹನುಮಂತ ಮನ್ನಾಪೂರು, ಮೇಲಪ್ಪ ಭಾವಿಮನಿ, ಹೈದರ್‌ ಅಲಿ, ಮಲ್ಲಯ್ಯ ಕಟ್ಟಿಮನಿ, ಮಲ್ಲಿಕಾರ್ಜುನ ಜೋಂಡೆ, ಭೀಮರಾಯ ಭಂಡಾರಿ, ರಾಜಪ್ಪ ಸಿರವಾರಕರ್‌, ನಾಗರಾಜ ಜಂಬಲದಿನ್ನಿ, ನರಸಪ್ಪ ಎನ್‌.ಗಣೇಕಲ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ