ಆ್ಯಪ್ನಗರ

ನರೇಗಾದಲ್ಲಿ ಅಂಗವಿಕಲರಿಗೆ ಕೆಲಸ ನೀಡಿ

ನರೇಗಾದಡಿ ಅಂಗವಿಕಲರಿಗೆ ಉದ್ಯೋಗ ಚೀಟಿ ನೀಡುವ ಜತೆಗೆ ಶೇ.5ರಷ್ಟು ಅನುದಾನ ಬಳಕೆ ಮಾಡಲು ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಸೂಚನೆ ನೀಡುವಂತೆ ಆಗ್ರಹಿಸಿ, ಗುರುವಾರ ಹೈದರಾಬಾದ್‌ ಕರ್ನಾಟಕ ವಿಕಲಚೇತನರ ಹೋರಾಟ ಸಮಿತಿಯಿಂದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.

Vijaya Karnataka 7 Jun 2019, 2:47 pm
ಲಿಂಗಸುಗೂರು : ನರೇಗಾದಡಿ ಅಂಗವಿಕಲರಿಗೆ ಉದ್ಯೋಗ ಚೀಟಿ ನೀಡುವ ಜತೆಗೆ ಶೇ.5ರಷ್ಟು ಅನುದಾನ ಬಳಕೆ ಮಾಡಲು ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಸೂಚನೆ ನೀಡುವಂತೆ ಆಗ್ರಹಿಸಿ, ಗುರುವಾರ ಹೈದರಾಬಾದ್‌ ಕರ್ನಾಟಕ ವಿಕಲಚೇತನರ ಹೋರಾಟ ಸಮಿತಿಯಿಂದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.
Vijaya Karnataka Web give to work for disabled people in narega
ನರೇಗಾದಲ್ಲಿ ಅಂಗವಿಕಲರಿಗೆ ಕೆಲಸ ನೀಡಿ


ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಮಾರ್ಗ ಸೂಚಿಯಂತೆ ಹಾಗೂ ವಿಕಲಚೇತನರ 2016ರ ಕಾಯಿದೆ ಪ್ರಕಾರ ಗ್ರಾಮ ಪಂಚಾಯಿತಿ ಅನುದಾನದಲ್ಲಿ ವಿಕಲಚೇತನರಿಗೆ ನಾನಾ ಸೌಲಭ್ಯ ಒದಗಿಸಬೇಕು ಮತ್ತು ಉದ್ಯೋಗ ಖಾತರಿ ಯೋಜನೆಯಡಿ 100 ದಿನಗಳ ಉದ್ಯೋಗ ನೀಡಬೇಕೆಂದು ಆಗ್ರಹಿಸಿದರು.

ಅಧ್ಯಕ್ಷ ನಿಂಗನಗೌಡ ಮಾಚನೂರು, ಕಾರ್ಯದರ್ಶಿ ಸುರೇಶ ಭಂಡಾರಿ, ಖಜಾಂಚಿ ಹುಸೇನ್‌ಬಾಷಾ, ಉಪಾಧ್ಯಕ್ಷ ದುರುಗಮ್ಮ ನಾಗರಾಳ, ನಾಗರಾಜ ಅಸ್ಕಿಹಾಳ, ಪವಾಡೆಮ್ಮ ಗುರಿಕಾರ, ಅಬ್ದುಲ್‌ ಮುದಗಲ್‌, ವೀರಭದ್ರಪ್ಪ ಗೆಜ್ಜಲಗಟ್ಟಾ, ಬಾಲಪ್ಪ ಕಡದರಾಳ, ವೀರಸಂಗಯ್ಯ ಹಿರೇಮಠ, ರಹಿಮಾನದುಲ್ಲಾ ಸೇರಿ ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ