ಆ್ಯಪ್ನಗರ

ಸರಕಾರಿ ಪ್ರಾಥಮಿಕ ಶಾಲಾ ಕೊಠಡಿಗಳು ಉದ್ಘಾಟನೆ

ತಾಲೂಕಿನ ಗೌಡನಬಾವಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎರಡು ನೂತನ ಕೊಠಡಿಗಳನ್ನು ಶಾಸಕ ಪ್ರತಾಪಗೌಡ ಪಾಟೀಲ್‌ ಗುರುವಾರ ಉದ್ಘಾಟಿಸಿದರು.

Vijaya Karnataka 28 Jul 2018, 5:00 am
ಮಸ್ಕಿ : ತಾಲೂಕಿನ ಗೌಡನಬಾವಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎರಡು ನೂತನ ಕೊಠಡಿಗಳನ್ನು ಶಾಸಕ ಪ್ರತಾಪಗೌಡ ಪಾಟೀಲ್‌ ಗುರುವಾರ ಉದ್ಘಾಟಿಸಿದರು.
Vijaya Karnataka Web RAC-RCH27MSK05


ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ, ''2016-17ನೇ ಸಾಲಿನ ಎಚಕೆಆರ್‌ಡಿಬಿ, ಟಿಎಸ್‌ಪಿ ಯೋಜನೆಯಡಿ 13 ಲಕ್ಷ ರೂ. ವೆಚ್ಚದಲ್ಲಿ ಈ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಜನಸಾಮಾನ್ಯರಿಗೆ ಉಪಯುಕ್ತವಾಗುವ ಹಲವು ಯೋಜನೆಗಳನ್ನು ರೂಪಿಸಿದರು. ಜನರ ಮನೆ ಬಾಗಿಲಿಗೇ ಸರಕಾರದ ಯೋಜನೆಗಳನ್ನು ತಲುಪಿಸಿದರು. ರಾಜ್ಯದಲ್ಲಿ ಹಿಂದಿನ ಸರಕಾರದ ಆಡಳಿತದ ಅವಧಿಯನ್ನು ಸುವರ್ಣಯುಗ ಎಂದು ಕರೆದರೆ ತಪ್ಪಾಗಲಾರದು'' ಎಂದ ಅವರು, ''ಈ ಗ್ರಾಮಕ್ಕೆ ಪ್ರೌಢಶಾಲೆ ಮಂಜೂರುಮಾಡುವಂತೆ ಸರಕಾರಕೆಕ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಶಾಲೆಗೆ ಇನ್ನೂ ಮೂರು ಕೊಠಡಿಗಳ ನಿರ್ಮಾಣಕ್ಕೆ ಮುಂಬರುವ ದಿನಗಳಲ್ಲಿ ಅನುದಾನ ನೀಡಲಾಗುವುದು'' ಎಂದು ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ 16.50 ಲಕ್ಷ ರೂ. ವೆಚ್ಚದಲ್ಲಿ ರಾಜೀವ್‌ ಗಾಂಧಿ ಸೇವಾ ಕೆಂದ್ರ ಹಾಗೂ 14.25 ಲಕ್ಷ ರೂ. ವೆಚ್ಚದ ಅಂಗನವಾಡಿ ಕೆಂದ್ರದ ಕಟ್ಟಡ ನಿರ್ಮಾಣ ಕಾಮಗಾರಿಗೆ ಕಟ್ಟೆಬಸವೇಶ್ವರ ಮಠದ ನಾಗಪ್ಪ ತಾತ, ಶಾಸಕ ಪ್ರತಾಪಗೌಡ ಪಾಟೀಲ್‌, ಗ್ರಾ.ಪಂ. ಅಧ್ಯಕ್ಷೆ ಬಸಮ್ಮ ನಾಗರಾಜ, ತಾ.ಪಂ. ಇಒ ಜಿ.ಎಂ.ಬಸಣ್ಣ ಭೂಮಿ ಪೂಜೆ ನೆರವೆರಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ನಾಗರಾಜ, ಅಮರೇಶ ವಕೀಲರು, ಬಸವಂತರಾಯ ಕುರಿ, ಬಸವರಾಜಸ್ವಾಮಿ, ಶೇಖರಪ್ಪ ಮೇಟಿ ಶೇಖರಪ್ಪ ಮೇಟಿ, ಪ್ರಸನ್ನಕುಮಾರ ಪಾಟೀಲ್‌, ಪಿಡಿಒ ಮುದುಕಪ್ಪ, ತಾಂತ್ರಿಕ ಅಭಿಯಂತರ ಮಂಜುನಾಥ ನಾಗಲೀಕರ್‌, ತಾ.ಪಂ. ಮಾಜಿ ಸದಸ್ಯ ಬಸವರಾಜ, ಶಿಕ್ಷ ಣ ಸಂಯೋಜಕ ಹನುಮಂತಪ್ಪ, ಸಿಆರ್‌ಸಿ ಹುಸೇನ್‌ಸಾಬ್‌,ಅಮರೇಶ ಗಾಳಿ ಸೇರಿ ಇತರರಿದ್ದರು. ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಒದಗಿಸುವಂತೆ ಮಹಿಳೆಯರು, ಶಾಸಕರಿಗೆ ಒತ್ತಾಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ