ಆ್ಯಪ್ನಗರ

ಗ್ರಾ.ಪಂ. ಮೇಲ್ದರ್ಜೆಗೆ ಪಿಡಿಒ ನಕಾರ: ಆಕ್ರೋಶ

ಜಾಲಹಳ್ಳಿ ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯತಿಗೆ ಮೇಲ್ದೆರ್ಜೆಗೇರಿಸಲು ಜಾಲಹಳ್ಳಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ, ತನ್ನ ಸಭೆಯಲ್ಲಿ ಠರಾವ್‌ ಪಾಸ್‌ ಮಾಡಿದ್ದರೂ ಅನುಮೊದನೆಗೆ ಕಳಿಸಲು ಅಭಿವೃದ್ಧಿ ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಕರವೇ ಆಕ್ರೋಶ ವ್ಯಕ್ತಪಡಿಸಿದೆ.

Vijaya Karnataka 27 Sep 2018, 5:00 am
ದೇವದುರ್ಗ : ಜಾಲಹಳ್ಳಿ ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯತಿಗೆ ಮೇಲ್ದೆರ್ಜೆಗೇರಿಸಲು ಜಾಲಹಳ್ಳಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ, ತನ್ನ ಸಭೆಯಲ್ಲಿ ಠರಾವ್‌ ಪಾಸ್‌ ಮಾಡಿದ್ದರೂ ಅನುಮೊದನೆಗೆ ಕಳಿಸಲು ಅಭಿವೃದ್ಧಿ ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಕರವೇ ಆಕ್ರೋಶ ವ್ಯಕ್ತಪಡಿಸಿದೆ.
Vijaya Karnataka Web gram panchayat superior pdo nausea outrage
ಗ್ರಾ.ಪಂ. ಮೇಲ್ದರ್ಜೆಗೆ ಪಿಡಿಒ ನಕಾರ: ಆಕ್ರೋಶ


2017, ಸೆ.25ರಂದೇ ಜಾಲಹಳ್ಳಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಗೆ ಮೇಲ್ದರ್ಜೆಗೇರಿಸಲು ಒಪ್ಪಿಗೆ ನೀಡಿದೆ. 10 ತಿಂಗಳಾದರೂ ಸಭೆಯ ನಡಾವಳಿ, ತಾಲೂಕು ಆಡಳಿತಕ್ಕೆ ಕಳಿಸಿಕೊಡುವಲ್ಲಿ ಪಿಡಿಒ ಹಿಂದೇಟು ಹಾಕುತ್ತಿದ್ದಾರೆ. ಅಭಿವೃದ್ಧಿಗೆ ತೊಡಕಾಗುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಸಂಘಟನೆಯ ಮುಖಂಡರು ದೂರಿದ್ದಾರೆ.

ನ.30ರೊಳಗೆ ಸಭೆ ನಡಾವಳಿಯನ್ನು ಕಳಿಸಿಕೊಡದಿದ್ದರೆ ಪಂಚಾಯಿತಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಬೇಕಾಗುತ್ತದೆ ಎಂದು ಜಾಲಹಳ್ಳಿ ಗ್ರಾ.ಪಂ. ಆಡಳಿತ ಮಂಡಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಸಂಘಟನೆಯ ಮುಖಂಡರಾದ ಬಸವರಾಜ ಗೋಪಾಳಪೂರು, ಎಂ.ಎಂ.ವೆಂಕಟೇಶ ಮಲ್ಲೇದೇವರಗುಡ್ಡ, ಅಮರೇಶ ವಂದಲಿ, ನರಸಣ್ಣ ಯಮನೂರು, ಯಲ್ಲಪ್ಪ ಬೀಸಲ್‌, ಬಸವರಾಜ ಲಿಂಗದಹಳ್ಳಿ ಎಚ್ಚರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ