ಆ್ಯಪ್ನಗರ

ಗುರುವಂದನಾ ಸಾರ್ಥಕ ಸಮಾವೇಶ

ಇಲ್ಲಿನ ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಶರಭಯ್ಯಸ್ವಾಮಿ ಕಲಾಮಂಟಪದಲ್ಲಿ 1992-93ನೇ ಸಾಲಿನ ಪ್ರಾಥಮಿಕ ಹಾಗೂ 1995-96ನೇ ಸಾಲಿನ ಎಸ್ಸ್ಸೆಸ್ಸೆಲ್ಸಿ ಕಲಿತ ಹಳೆಯ ವಿದ್ಯಾರ್ಥಿ ಬಳಗದಿಂದ ಆಯೋಜಿಸಿದ್ದ ಗುರುವಂದನಾ ಸಮಾವೇಶ ಭಾನುವಾರ ನಡೆಯಿತು.

Vijaya Karnataka 22 May 2018, 12:00 am
ಲಿಂಗಸುಗೂರು: ಇಲ್ಲಿನ ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಶರಭಯ್ಯಸ್ವಾಮಿ ಕಲಾಮಂಟಪದಲ್ಲಿ 1992-93ನೇ ಸಾಲಿನ ಪ್ರಾಥಮಿಕ ಹಾಗೂ 1995-96ನೇ ಸಾಲಿನ ಎಸ್ಸ್ಸೆಸ್ಸೆಲ್ಸಿ ಕಲಿತ ಹಳೆಯ ವಿದ್ಯಾರ್ಥಿ ಬಳಗದಿಂದ ಆಯೋಜಿಸಿದ್ದ ಗುರುವಂದನಾ ಸಮಾವೇಶ ಭಾನುವಾರ ನಡೆಯಿತು.
Vijaya Karnataka Web RAC-RCH21LNG01


ಡಿವೈಎಸ್ಪಿ ಶರಣಬಸಪ್ಪ ಸುಬೇದಾರ ಮಾತನಾಡಿ, ಬಾಲ್ಯದ ಕಲಿಕೆ ಮನುಷ್ಯನನ್ನು ಎತ್ತರಕ್ಕೇರಿಸುತ್ತದೆ. ಪ್ರಾಥಮಿಕ ಹಂತದ ಗುರುಗಳು ನೀಡಿದ ವಿದ್ಯಾ ಭಿಕ್ಷೆಯೇ ನಮ್ಮನ್ನು ಇಂದು ಸಮಾಜದಲ್ಲಿ ಗೌರವವಾಗಿ ಬದುಕಲು ಸಹಕಾರಿಯಾಗಿದೆ. ಇದೊಂದು ಐತಿಹಾಸಿಕ ಕಾರ್ಯಕ್ರಮ. ಹಳೆಯದನ್ನು ಮರೆತು ಜಗತ್ತಿನ ನಾಗಾಲೋಟಕ್ಕೆ ಒಗ್ಗಿಕೊಂಡಿರುವ ಸಮಾಜದಲ್ಲಿ ಇಂಥದ್ದೊಂದು ಅವಿಸ್ಮರಣೀಯ ಕಾರ್ಯಕ್ರಮ ಶ್ಲಾಘನೀಯ ಎಂದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಶಾಸನ ಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ಅಮರೇಶ ಯತಗಲ್ ಮಾತನಾಡಿ, ಗುರುಶಿಷ್ಯರ ಸಂಬಂಧ ಕುರಿತು ವಿಶೇಷ ಉಪನ್ಯಾಸ ನೀಡಿದರು.

ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ಭಂಡಾರಿ ಮಾತನಾಡಿದರು.

ಪ್ರಾಥಮಿಕ ಮತ್ತು ಪ್ರೌಢಶಾಲೆಯ ಗುರುಗಳಿಗೆ ಗೌರವ ಸಲ್ಲಿಸಲಾಯಿತು.

ಶರಣಬಸವ, ಮಲ್ಲಿಕಾರ್ಜುನ, ಗೌತಮ್, ರಾಜೇಶ, ಬಸವರಾಜ, ಶಿವರಾಜ, ನಾಗರಾಜ, ಖಾಜಾಹುಸೇನ್, ಅಮೀನುದ್ದೀನ್ ಗ್ಯಾರಂಟಿ, ನವೀನ್, ಶಿವಾನಂದ, ಮಾಣಿಕ್‌ಶೆಟ್ಟಿ, ಮಹೇಶ ಹೊನಕೇರಿ, ಶ್ರೀಕಾಂತ ಗೋಲಶೆಟ್ಟಿ, ಮಂಜುನಾಥ, ಜಿಲಾನಿಪಾಷಾ, ಗ್ಯಾನಪ್ಪ ಕಟ್ಟಿಮನಿ, ಕೇದಾರನಾಥ, ಡಾ.ಅಮರೇಶ ಪಾಟೀಲ್, ನಿತೇಶ, ಶಶಿಧರ, ಮೊಹಸೀನ್ ಸೇರಿ ಅನೇಕ ಹಳೆಯ ವಿದ್ಯಾರ್ಥಿಗಳನ್ನು ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ