ಆ್ಯಪ್ನಗರ

ಆರು ಸಾವಿರದಂತೆ ಆರು ವರ್ಷ ಕಟ್ಟಿದರೆ 1.20 ಲಕ್ಷ ಕೊಡುತ್ತೇವೆಂದು ಟೋಪಿ ಹಾಕಿದ 'ಗರಿಮಾ'!

ಆರು ಸಾವಿರದಂತೆ ಆರು ವರ್ಷ ಕಟ್ಟಿದರೆ 1.20 ಲಕ್ಷ ಕೊಡುತ್ತೇವೆಂದು ಜನರಿಗೆ ಗರಿಮಾ ಹೋಮ್ಸ್‌ ಆಂಡ್‌ ಫಾರ್ಮಾ ಹೌಸ್‌ ಎಲ್‌ಟಿಡಿ ವಿಮೆ ಕಂಪನಿ ಮೋಸ ಮಾಡಿದೆ. ಜಿಲ್ಲೆಯ ಗೋಪಾಳಪೂರು ಗ್ರಾಮದ 30ಕ್ಕೂ ಹೆಚ್ಚು ವಿಧವೆಯರು, ವಿಕಲಚೇತನರು ಹಾಗೂ ನಿರ್ಗತಿಕರು ವಂಚನೆಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ.

Vijaya Karnataka Web 29 May 2020, 9:49 am
ದೇವದುರ್ಗ: ಆರು ವರ್ಷಗಳಲ್ಲಿ ಮೂರು ಪಟ್ಟು ಹಣ ನೀಡುವುದಾಗಿ ಗರಿಮಾ ಹೋಮ್ಸ್‌ ಆ್ಯಂಡ್‌ ಫಾರ್ಮಾ ಹೌಸ್‌ ಎಲ್‌ಟಿಡಿ ವಿಮೆ ಕಂಪನಿ ಹೇಳಿದ್ದ ಮಾತನ್ನೇ ನಂಬಿ ಹಣತೊಡಗಿಸಿದ್ದ ತಾಲೂಕಿನ ಗೋಪಾಳಪೂರು ಗ್ರಾಮದ 30ಕ್ಕೂ ಹೆಚ್ಚು ವಿಧವೆಯರು, ವಿಕಲಚೇತನರು ಹಾಗೂ ನಿರ್ಗತಿಕರು ವಂಚನೆಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ.
Vijaya Karnataka Web ಸಾಂದರ್ಭಿಕ ಚಿತ್ರ


ಅದೇ ಗ್ರಾಮದ ದೇವರಡ್ಡಿ, ತಾನು ಈ ಕಂಪನಿಯ ಏಜೆಂಟ್‌ನೆಂದು ಜನರನ್ನು ನಂಬಿಸಿ, ಲಕ್ಷಾಂತರ ರೂ. ಪಡೆದಿದ್ದಾರೆ. ವಂಚನೆಗೆ ಒಳಗಾದ ಅಸಹಾಯಕರು ನೆರವಿಗಾಗಿ ಸದ್ಯ ಪೊಲೀಸರ ಮೊರೆ ಹೋಗಿದ್ದಾರೆ. ವಾರ್ಷಿಕ ಆರು ಸಾವಿರ ರೂ.ಗಳಂತೆ ಆರು ವರ್ಷ ಹಣ ಪಾವತಿಸಿದರೆ ಆರು ವರ್ಷಗಳ ನಂತರ 1.20 ಲಕ್ಷ ರೂ. ದೊರೆಯಲಿದೆ ಎಂದು ದೇವರಡ್ಡಿ ಭರವಸೆ ನೀಡಿದ್ದರು. ಆರು ವರ್ಷಗಳ ಅವಧಿ ಮುಗಿದು ವರ್ಷ ಕಳೆದರೂ, ಭರವಸೆಯಂತೆ ಕಂಪನಿಯಿಂದ ಹಣ ಕೊಡಿಸುವಂತೆ ಕೇಳಿದರೆ ಇಲ್ಲದ ಸಬೂಬು ಹೇಳುತ್ತಿದ್ದಾರೆ ಎಂದು ವಂಚನೆಗೊಳಗಾದ ಯಂಕಮ್ಮ ಅಗಸರ, ದೌಲ್‌ಬೀ, ಸಿದ್ದಪ್ಪ ಹಾಗೂ ಇತರರು ಆರೋಪಿಸಿದ್ದಾರೆ.

''ಗರಿಮಾ ಹೋಮ್ಸ್‌ ಆಂಡ್‌ ಫಾರ್ಮಾ ಹೌಸ್‌ ಎಲ್‌ಟಿಡಿ ವಿಮೆ ಕಂಪನಿ, 2018ರಲ್ಲೇ ಬಂದ್‌ ಆಗಿದೆ. ಕಂಪನಿ ಮ್ಯಾನೇಜರ್‌ ಜತೆ ಮಾತನಾಡಿದ್ದು, ಹಣ ವಾಪಸ್‌ ಕೊಡಿಸುವೆ'' ಎಂದು ಸ್ಥಳೀಯ ಏಜೆಂಟ್‌ ದೇವರಡ್ಡಿ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ