ಆ್ಯಪ್ನಗರ

ಪೇಜಾವರ ಶ್ರೀಗಳಿಂದ ಇಫ್ತಾರ್‌ ಕೂಟ ತಪ್ಪಲ್ಲ

ಪೇಜಾವರ ಶ್ರೀ ಇಫ್ತಾರ್‌ ಕೂಟ ಆಯೋಜಿಸಿರುವುದು ತಪ್ಪಲ್ಲ. ಸಾಮರಸ್ಯ ಕಾಪಾಡುವ ಉದ್ದೇಶದಿಂದ ಮುಸ್ಲಿಂ ಬಾಂಧವರಿಗೆ ಕೂಟ ಆಯೋಜಿಸಿದ್ದಾರೆ ಎಂದು ಪರ್ಯಾಯ ಪೀಠಾರೋಹಣ ಮಾಡಲಿರುವ ಶ್ರೀ ವಿದ್ಯಾ ಧೀಶ ತೀರ್ಥರು ಹೇಳಿದ್ದಾರೆ.

ವಿಕ ಸುದ್ದಿಲೋಕ 27 Jun 2017, 11:35 am
ರಾಯಚೂರು: ಪೇಜಾವರ ಶ್ರೀ ಇಫ್ತಾರ್ ಕೂಟ ಆಯೋಜಿಸಿರುವುದು ತಪ್ಪಲ್ಲ. ಹಿರಿಯರು ಯೋಚಿಸಿಯೇ ನಿರ್ಧಾರ ಕೈಗೊಂಡಿದ್ದಾರೆ. ಸಾಮರಸ್ಯ ಕಾಪಾಡುವ ಉದ್ದೇಶದಿಂದ ಮುಸ್ಲಿಂ ಬಾಂಧವರಿಗೆ ಕೂಟ ಆಯೋಜಿಸಿದ್ದಾರೆ ಎಂದು ಪರ್ಯಾಯ ಪೀಠಾರೋಹಣ ಮಾಡಲಿರುವ ಶ್ರೀ ವಿದ್ಯಾ ಧೀಶ ತೀರ್ಥರು ಹೇಳಿದ್ದಾರೆ.
Vijaya Karnataka Web iftar party in udupi not wrong
ಪೇಜಾವರ ಶ್ರೀಗಳಿಂದ ಇಫ್ತಾರ್‌ ಕೂಟ ತಪ್ಪಲ್ಲ


ಉಡುಪಿಯಲ್ಲಿ ಪೇಜಾವರಶ್ರೀ ಇಫ್ತಾರ್‌ ಕೂಟ ಆಯೋಜಿಸಿರುವುದನ್ನು ವಿರೋಧಿಸಿರುವ ಶ್ರೀರಾಮಸೇನೆಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಅವರ ಹಿಂದೂಪರ ಕಾಳಜಿ ಮೆಚ್ಚುವಂಥದ್ದು. ಹಾಗೆಂದ ಮಾತ್ರಕ್ಕೆ ಪೇಜಾವರ ಶ್ರೀ ವಿರುದ್ಧ ಹೋರಾಟ ಮಾಡುವುದು ಸರಿಯಲ್ಲ.ಮುಂದೆ ತಮ್ಮ ಪರ್ಯಾಯ ಅವಧಿಯಲ್ಲಿ ಇಂಥ ಯಾವುದೇ ಕಾರ್ಯಕ್ರಮ ಆಯೋಜಿಸುವ ಉದ್ದೇಶವಿಲ್ಲ ಎಂದು ಹೇಳಿದರು.

ಪರ್ಯಾಯ ಕಾರ್ಯಕ್ರಮದಲ್ಲಿ ಎಲ್ಲ ಜಾತಿ ಜನಾಂಗದವರು ಪಾಲ್ಗೊಳ್ಳುತ್ತಾರೆ. ಅಂತೆಯೇ ಪೇಜಾವರ ಶ್ರೀ ರಮ್ಜಾನ್ ಸಂದರ್ಭ ಇಫ್ತಾರ್‌ ಕೂಟ ಆಯೋಜಿಸಿರುವ ಸಾಧ್ಯತೆಯಿದೆ ಎಂದರು. ಸಾಹಿತಿ ಭಗವಾನ್ ಮತ್ತಿತರರು ಮೈಸೂರಿನಲ್ಲಿ ಗೋಮಾಂಸ ಸೇವಿಸಿರುವುದು ಮುಸ್ಲಿಂ ಸಮಾಜದವರ ಮೇಲಿನ ಪ್ರೀತಿಯಿಂದಲ್ಲ. ಬದಲಿಗೆ ಹಿಂದೂಗಳ ಮೇಲಿನ ದ್ವೇಷಕ್ಕೆ ಎಂಬುದನ್ನು ಅರ್ಥೈಸಿಕೊಳ್ಳಬೇಕಿದೆ. ಕೇಂದ್ರದ ಗೋಹತ್ಯೆ ನಿಷೇಧ ನಿರ್ಧಾರಕ್ಕೆ ಬೆಂಬಲ ನೀಡುವುದಾಗಿ ಶ್ರೀ ವಿದ್ಯಾ ಧೀಶ ತೀರ್ಥರು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ