ಆ್ಯಪ್ನಗರ

ಪಡಿತರ ಅಕ್ರಮ ಸಾಗಾಣಿಕೆ ಶಂಕೆ: ಭೇಟಿ

ನಗರ ಸೇರಿ ತಾಲೂಕಿನಾದ್ಯಂತ ಅಕ್ರಮ ಪಡಿತರ ಸಾಗಣೆ ಹೆಚ್ಚಿರುವ ದೂರಿನ ಹಿನ್ನೆಲೆಯಲ್ಲಿಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಅರುಣ್‌ಕುಮಾರ ಸಂಗಾವಿ ಶುಕ್ರವಾರ ನ್ಯಾಯಬೆಲೆ ಅಂಗಡಿಗಳಿಗೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Vijaya Karnataka 27 Oct 2019, 5:00 am
ಸಿಂಧನೂರು: ನಗರ ಸೇರಿ ತಾಲೂಕಿನಾದ್ಯಂತ ಅಕ್ರಮ ಪಡಿತರ ಸಾಗಣೆ ಹೆಚ್ಚಿರುವ ದೂರಿನ ಹಿನ್ನೆಲೆಯಲ್ಲಿಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಅರುಣ್‌ಕುಮಾರ ಸಂಗಾವಿ ಶುಕ್ರವಾರ ನ್ಯಾಯಬೆಲೆ ಅಂಗಡಿಗಳಿಗೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Vijaya Karnataka Web illegal trafficking in rations visit
ಪಡಿತರ ಅಕ್ರಮ ಸಾಗಾಣಿಕೆ ಶಂಕೆ: ಭೇಟಿ


ಸಿಂಧನೂರಿನ ಇಂದಿರಾನಗರ, ನಟರಾಜ ಕಾಲೊನಿ, 3ನೇ ಮೈಲ್‌ಕ್ಯಾಂಪ್‌ ಹಾಗೂ ತಾಲೂಕಿನ ತುರುವಿಹಾಳ ಗ್ರಾಮದ ಜಯಲಕ್ಷಿತ್ರ್ಮೕ ನ್ಯಾಯಬೆಲೆ ಅಂಗಡಿ, ವಿಎಸ್‌ಎಸ್‌ಎನ್‌ ತುರುವಿಹಾಳ, 4ನೇ ಮೈಲ್‌ಕ್ಯಾಂಪ್‌, 7ಮೈಲ್‌ಕ್ಯಾಂಪ್‌ ಸೇರಿ ಇತರೆ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಭೇಟಿ ವೇಳೆ ದಾಖಲೆ, ದಾಸ್ತಾನು ಸೇರಿದಂತೆ ಎಲ್ಲವನ್ನು ತಪಾಸಣೆ ಮಾಡಿದರು. ಅಧಿಕಾರಿಗಳ ದಿಢೀರ್‌ ಭೇಟಿ ಸಂಚಾಲಕರುಗಳಲ್ಲಿದಿಗಿಲು ಮೂಡಿಸಿತು.

ಅಕ್ರಮ: ನಗರದ ಪ್ರಮುಖ ಕಡೆಗಳಲ್ಲಿನ್ಯಾಯಬೆಲೆ ಅಂಗಡಿಗಳಲ್ಲಿಫಲಾನುಭವಿಗಳಿಗೆ ವಿತರಣೆಯಾಗುವ ಪಡಿತರ ಮನೆ ಸೇರುತ್ತಿಲ್ಲ. ಕಾಳಸಂತೆಯಲ್ಲಿಮಾರಾಟ ಮಾಡುವ ಜಾಲ ಇಲ್ಲಿದೆ. ಪಡಿತರದಾರರು ಅಕ್ಕಿಯನ್ನು ಮನೆಗೆ ಕೊಂಡೊಯ್ಯದಂತೆ ಸಂಚಾಲಕರೇ ಖರೀದಿಸುತ್ತಾರೆ. ಬಳಿಕ ಅಕ್ರಮವಾಗಿ ಸಾಗಾಣಿಕೆ ಮಾಡುವವರಿಗೆ ಮಾರಾಟ ಮಾಡುತ್ತಿದ್ದಾರೆ. ಎಪಿಎಂಸಿ ಸೇರಿ ಹಲವು ಕಡೆ ಗೋದಾಮು, ಮನೆಗಳಲ್ಲಿಅಕ್ರಮವಾಗಿ ಅಕ್ಕಿ ದಾಸ್ತಾನು ಮಾಡಿ, ರಾತ್ರಿ ವೇಳೆ ರಾಯಚೂರು, ತಾವರಗೆರೆಗೆ ಸಾಗಣೆ ಮಾಡುತ್ತಿರುವ ಆರೋಪ ಹೆಚ್ಚಿದೆ. ತುರುವಿಹಾಳ ಪಟ್ಟಣದ ಪಡಿತರ ಅಕ್ಕಿಯನ್ನು ಕಲಮಂಗಿ ಗ್ರಾಮದ ಗೋದಾಮೊಂದರಲ್ಲಿದಾಸ್ತಾನು ಮಾಡುತ್ತಿರುವ ಆರೋಪವೂ ಕೇಳಿಬಂದಿದೆ. ಅಕ್ರಮದ ಕುರಿತಾದ ಹಲವು ದೂರಿನ ಹಿನ್ನೆಲೆಯಲ್ಲಿಅಧಿಕಾರಿಗಳು ಭೇಟಿ ನೀಡಿದ್ದಾರೆ ಎನ್ನಲಾಗಿದೆ. ಆದರೆ ಪ್ರಭಾವಿಗಳೇ ಪಡಿತರ ಅಕ್ರಮದಲ್ಲಿತೊಡಗಿದ್ದು, ಈ ಬಗ್ಗೆ ಅಧಿಕಾರಿಗಳ ನಿಗಾವಹಿಸಬೇಕು ಎಂಬುದು ಜನರ ಮನವಿಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ