ಆ್ಯಪ್ನಗರ

ಪ್ರತ್ಯೇಕ ರಾಜ್ಯ ಬೇಡಿಕೆ ವೈಯಕ್ತಿಕ ಅಭಿಪ್ರಾಯ : ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿಕೆ

ಶಾಸಕ ಉಮೇಶ ಕತ್ತಿ ಅವರ ಪ್ರತ್ಯೇಕ ರಾಜ್ಯದ ಬೇಡಿಕೆ ವೈಯಕ್ತಿಕ ಅಭಿಪ್ರಾಯ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಖಂಡ ಕರ್ನಾಟಕ ಒಡೆಯುವುದು ಬೇಡ. ಕಲ್ಯಾಣ ಕರ್ನಾಟಕ ಅಭಿವೃದ್ಧಿಯಾಗಬೇಕು ಎಂದು ಹೇಳಿದರು.

Vijaya Karnataka Web 8 Mar 2020, 5:36 pm
ರಾಯಚೂರು: ಶಾಸಕ ಉಮೇಶ ಕತ್ತಿ ಅವರ ಪ್ರತ್ಯೇಕ ರಾಜ್ಯದ ಬೇಡಿಕೆ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.
Vijaya Karnataka Web MP Raja Amareshwara Naik

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಖಂಡ ಕರ್ನಾಟಕ ಒಡೆಯುವುದು ಬೇಡ. ಕಲ್ಯಾಣ ಕರ್ನಾಟಕ ಅಭಿವೃದ್ಧಿಯಾ ಗಬೇಕಿದೆ. ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ಈಗಾಗಲೇ ಹಲವಾರು ಯೋಜನೆಗಳನ್ನು ಘೋಷಿಸಿದ್ದಾರೆ. ಕೈಗಾರಿಕೆ ಅಭಿವೃದ್ಧಿಗೆ ಕ್ರಮಕೈಗೊಳ್ಳುವ ಜತೆಗೆ ರಾಯಚೂರು ವಿಮಾನ ನಿಲ್ದಾಣ, ಮೆಡಿಕಲ್‌ ಕಾಲೇಜು ಆರಂಭಕ್ಕೆ ಒತ್ತಾಯಿಸಲಾಗಿದೆ. ಬಜೆಟ್‌ ನಂತರವೂ ಚರ್ಚೆಯಲ್ಲಿಈ ಬಗ್ಗೆ ಗಮನ ಸೆಳೆಯಲಾಗುವುದು’’ ಎಂದರು.

ಈ ಸಂದರ್ಭದಲ್ಲಿ ಅವರು ಲಿಂಗೈಕ್ಯರಾದ ಮಾತಾ ಮಾಣಿಕೇಶ್ವರಿ ಅವರಿಗೆ ಸಂತಾಪ ಸೂಚಿಸಿದರು.
‘‘ಹೈ-ಕ ಭಾಗದ ಪ್ರಮುಖ ಧಾರ್ಮಿಕ ಕೇಂದ್ರವಾದ ಮಾಣಿಕ್ಯಗಿರಿ ಅಭಿವೃದ್ಧಿಪಡಿಸಿದ ಮಹಾಮಾತೆ. ಅಹಿಂಸೆ ಹಾಗೂ ಪ್ರಾಣಿಬಲಿ ನೀಡದಂತೆ ಉಪದೇಶಿಸಿದ್ದ ಮಾತಾ ಮಾಣಿಕೇಶ್ವರಿ ಅವರು ಲಿಂಗೈಕ್ಯರಾಗಿರುವುದು ಈ ಭಾಗದವರಿಗೆ ತುಂಬಲಾರದ ನಷ್ಟವಾಗಿದೆ’’ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಸಂತಾಪ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ