ಆ್ಯಪ್ನಗರ

ಮೂಲಭೂತ ಸೌಕರ್ಯ

ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಶುದ್ಧ ಕುಡಿವ ನೀರಿನ ಘಟಕ ಸೇರಿ ನಾನಾ ಸೌಕರ್ಯಗಳನ್ನು ಕಲ್ಪಿಸುವಂತೆ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರಿಗೆ ಕಾಲೇಜಿನ ವತಿಯಿಂದ ಗುರುವಾರ ಮನವಿ ಸಲ್ಲಿಸಲಾಯಿತು.

Vijaya Karnataka 31 Aug 2019, 2:56 pm
ಸಿರವಾರ: ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಶುದ್ಧ ಕುಡಿವ ನೀರಿನ ಘಟಕ ಸೇರಿ ನಾನಾ ಸೌಕರ್ಯಗಳನ್ನು ಕಲ್ಪಿಸುವಂತೆ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರಿಗೆ ಕಾಲೇಜಿನ ವತಿಯಿಂದ ಗುರುವಾರ ಮನವಿ ಸಲ್ಲಿಸಲಾಯಿತು.
Vijaya Karnataka Web insist on basic infrastructure
ಮೂಲಭೂತ ಸೌಕರ್ಯ


ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಗ್ರಂಥಾಲಯ ವ್ಯವಸ್ಥೆ, ಕಂಪ್ಯೂಟರ್‌ ಕೊಠಡಿ, ವಿದ್ಯಾರ್ಥಿಗಳಿಗೆ ವಿಶ್ರಾಂತಿ ಕೊಠಡಿ, ಕಾಲೇಜಿನ ಭದ್ರತೆಗಾಗಿ ಎತ್ತರವಾದ ಕಾಂಪೌಂಡ್‌, ಕಾಲೇಜು ಕಾರ್ಯಕ್ರಮಗಳಿಗಾಗಿ ಬಯಲು ರಂಗಮಂದಿರ, ಶುದ್ಧ ಕುಡಿವ ನೀರಿನ ಘಟಕ ಹಾಗೂ ಕಾಲೇಜು ಆವರಣದಲ್ಲಿರುವ ಪ್ರೌಢಶಾಲೆಯ ಹಳೆಯ ಕಟ್ಟಡಗಳನ್ನು ತೆರವುಗೊಳಿಸಿ ವಿದ್ಯಾರ್ಥಿಗಳಿಗೆ ಕ್ರೀಡೆಗೆ ಅನುಕೂಲವಾಗುವಂತೆ ಆಟದ ಮೈದಾನ ವ್ಯವಸ್ಥೆ ಕಲ್ಪಿಸುವಂತೆ ಮನವಿ ಸಲ್ಲಿಸಿದರು.

ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ಶೀಘ್ರ ಕಾಲೇಜಿಗೆ ಕಾಂಪೌಂಡ್‌, ನೀರಿನ ಘಟಕ ಹಾಗೂ ರಂಗಮಂದಿರಗಳಿಗೆ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದರು.

ಪ್ರಾಚಾರ್ಯರಾದ ಡಾ. ಕುಂಟೆಪ್ಪ ಗೌರಿಪುರ, ಉಪನ್ಯಾಸಕರಾದ ಅನಂತ ಪದ್ಮನಾಭ, ಪಂಪಾಪತಿ, ಪದ್ಮರಾಜ್‌ ಭಂಡಾರಿ, ಮಹಮ್ಮದ್‌ ಫರೀದ್‌ ಅಹ್ಮದ್‌, ಲಿಂಗಪ್ಪ, ಸುರೇಖಾ, ರೆಹನಾ ಪರ್ವಿನ್‌, ಇಂದಿರಾಬಾಯಿ, ಜ್ಯೋತಿ, ದಿಲ್ಶಾದ್‌, ತುಕಾರಾಮ್‌ ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ