ಆ್ಯಪ್ನಗರ

ಕಲಬುರಗಿ ವಿಭಾಗೀಯ ಸಮ್ಮೇಳನ: ಅಧಿಕಾರಿಗಳಿಗೆ ಪಾಠ

ಅಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟರೆ ಚುನಾವಣೆಯಲ್ಲಿ ಜನರು ಗೆಲ್ಲಿಸುವುದಿಲ್ಲ, ಮೆಚ್ಚುಗೆಯ ಕೆಲಸ ಮಾಡಿದರೂ ಕಿರೀಟ ತೊಡಿಸುವುದಿಲ್ಲ. ಆದರೆ, ಆತ್ಮಸಾಕ್ಷಿಗೆ ಅನುಗುಣವಾಗಿ ಮಂತ್ರಿಕೆಲಸ ಮಾಡುತ್ತೇನೆ, ಕಾರ್ಯನಿರ್ವಹಣೆಯಲ್ಲಿ ದೇವರಾಗದಿದ್ದರೂ, ದೆವ್ವವಾಗಬೇಡಿ ಎಂದು ಪಶುಸಂಗೋಪನಾ ಮತ್ತು ಮೀನುಗಾರಿಕೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್‌ ನಾಡಗೌಡ ಅಧಿಕಾರಿಗಳಿಗೆ ಹೇಳಿದರು.

Vijaya Karnataka 10 Dec 2018, 4:46 pm
ರಾಯಚೂರು ; ಅಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟರೆ ಚುನಾವಣೆಯಲ್ಲಿ ಜನರು ಗೆಲ್ಲಿಸುವುದಿಲ್ಲ, ಮೆಚ್ಚುಗೆಯ ಕೆಲಸ ಮಾಡಿದರೂ ಕಿರೀಟ ತೊಡಿಸುವುದಿಲ್ಲ. ಆದರೆ, ಆತ್ಮಸಾಕ್ಷಿಗೆ ಅನುಗುಣವಾಗಿ ಮಂತ್ರಿಕೆಲಸ ಮಾಡುತ್ತೇನೆ, ಕಾರ್ಯನಿರ್ವಹಣೆಯಲ್ಲಿ ದೇವರಾಗದಿದ್ದರೂ, ದೆವ್ವವಾಗಬೇಡಿ ಎಂದು ಪಶುಸಂಗೋಪನಾ ಮತ್ತು ಮೀನುಗಾರಿಕೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್‌ ನಾಡಗೌಡ ಅಧಿಕಾರಿಗಳಿಗೆ ಹೇಳಿದರು.
Vijaya Karnataka Web kalaburagi divisional conference a lesson to the officers
ಕಲಬುರಗಿ ವಿಭಾಗೀಯ ಸಮ್ಮೇಳನ: ಅಧಿಕಾರಿಗಳಿಗೆ ಪಾಠ


ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ರಾಜ್ಯ ಸರಕಾರಿ ನೌಕರರ ಸಂಘದಿಂದ ಶನಿವಾರ ಆಯೋಜಿಸಿದ್ದ 'ಕಲಬುರಗಿ ವಿಭಾಗೀಯ ಸಮ್ಮೇಳನ' ಉದ್ಘಾಟಿಸಿ ಸರಕಾರಿ ನೌಕರರ ವಿಷಯ ಮಂಡನೆ ಕುರಿತು ಪ್ರತಿಕ್ರಿಯಿಸಿ ಮಾತನಾಡಿದರು. ಸರಕಾರಿ ನೌಕರರು ತಮ್ಮ ಸಮಸ್ಯೆಗಳ ಬಗ್ಗೆ ಚರ್ಚೆಯ ಜತೆಗೆ, ನಿಮ್ಮಿಂದ ಆಗಬೇಕಾದ ಕೆಲಸದ ಕುರಿತು ಚರ್ಚೆಮಾಡಿಕೊಳ್ಳಬೇಕು. ಇತ್ತೀಚೆಗೆ ಸರಕಾರಿ ನೌಕರರಲ್ಲೇ ಹತ್ತಾರು ಸಂಘಗಳು ಹುಟ್ಟಿಕೊಂಡಿವೆ. ಹೀಗಾಗಿ ಎಲ್ಲ ಸಮಸ್ಯೆಗಳಿಗೆ ಪರಿಹಾರ ಹುಡುಕುವುದು ಕಸ್ಟ ಸಾಧ್ಯ. ಒಗ್ಗಟ್ಟಿನಿಂದ ಸಮಸ್ಯೆಗಳ ವರದಿ ನೀಡಿದರೆ ಬಗೆಹರಿಸಬಹುದು. ಸರಕಾರದ ಆದೇಶ ಪಾಲನೆ ನೌಕರರದ್ದಾಗಿದೆ. ಜನಸಾಮಾನ್ಯರ ಕೆಲಸ ಕಾರ್ಯಗಳನ್ನು ತ್ವರಿತಗತಿಯಲ್ಲಿ ಮಾಡಿಕೊಡಬೇಕು.

ತಂತ್ರಜ್ಞಾನದ ಸದುಪಯೋಗ: ಸರಕಾರದ ಕೆಲಸ ದೇವರ ಕೆಲಸ, ದೇವರ ಕೆಲಸವೇ ಜನರ ಕೆಲಸವಾಗಿದೆ ಎಂಬುದನ್ನು ತಿಳಿದುಕೊಂಡಿರಬೇಕು. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಒಂದು ರಥದ ಎರಡು ಚಕ್ರಗಳಂತೆ ಕೆಲಸ ಮಾಡಬೇಕು. ಶಾಸನ ಅನುಷ್ಠಾನಕ್ಕೆ ಕಾರ್ಯಾಂಗ ರೂಪಿಸಿದ್ದು, ಜನಸಾಮಾನ್ಯರಿಗೆ ಯೋಜನೆ ತಲುಪದಿದ್ದರೆ ಅರ್ಥಹೀನವಾಗುತ್ತದೆ. ಮೇಲಧಿಕಾರಿಗಳು ಅಧೀನ ಸಿಬ್ಬಂದಿ ಮೇಲೆ ಒತ್ತಡ ಹೇರಬಾರದು ಎಂದು ಹೇಳಿದರು. ನಿರ್ದಿಷ್ಟ ಸಮಯದಲ್ಲಿ ವಿಲೇವಾರಿಯಾಗಬೇಕಿದ್ದ ಕಡತಗಳು ಹಾಗೇ ಉಳಿದುಕೊಳ್ಳುತ್ತಿವೆ. ಅಧಿಕಾರಿಗಳು ಇಲಾಖೆ ಪತ್ರ ವ್ಯವಹಾರದ ಬಗ್ಗೆ ಗಮನಹರಿಸತ್ತಿಲ್ಲ. ತಂದೆಯ ಆಸ್ತಿ ಮಗನ ಹೆಸರಿಗೆ ವರ್ಗಾವಣೆಯಾಗಲು ಎರಡರಿಂದ ಮೂರು ವರ್ಷ ಬೇಕಾಗುತ್ತಿದೆ. ತಂತ್ರಜ್ಞಾನ ಮುಂದುವರಿದಿದ್ದು, ಕಾಗದರಹಿತ ವ್ಯವಹಾರಕ್ಕೆ ಅಧಿಕಾರಿಗಳು ಒತ್ತು ನೀಡಬೇಕು. ಕೆಲ ಅಧಿಕಾರಿಗಳು ತಪ್ಪು ಹುಡುಕುವುದೇ ಅವರ ಕೆಲಸವಾಗಿರುತ್ತದೆ. ನೌಕರರ ಎನ್‌ಪಿಎಸ್‌ ರದ್ದತಿ ಸರಕಾರ ಮಟ್ಟದಲ್ಲಿದೆ. ತಿಂಗಳಲ್ಲಿ ಹೊಸ ಯೋಜನೆ ರದ್ದಾಗಲಿದೆ ಎಂದರು.

ಚಿಂತಕ ಡಾ.ಎನ್‌.ಕೆ.ಪದ್ಮನಾಭ ಮಾತನಾಡಿ, ಪಿಂಚಣಿ ಸೌಲಭ್ಯ ಇಲ್ಲವಾಗಿಸುವುದು, ನೇಮಕಾತಿ ಪ್ರಕ್ರಿಯೇಗೆ ಏಜೆನ್ಸಿಗಳಿಗೆ ನೀಡಲಾಗುತ್ತಿದೆ. ಯೋಜನೆ ಅನುಷ್ಠಾನ ವೈಫಲ್ಯಕ್ಕೆ ಕಾರ್ಯಾಂಗ ಹೊಣೆ ಮಾಡುವುದು, ಕೆಲಸದ ಒತ್ತಡ, ಸರಕಾರಿ ಶಾಲೆ ದುರ್ಬಲಗೊಳ್ಳುತ್ತಿರುವುದು ಸೇರಿದಂತೆ ಶೈಕ್ಷ ಣಿಕ ವಲಯ ಸಂದಿಗ್ಧತೆಯ ಸೋಂಕಿಗೆ ಒಳಗಾಗಿರುವುದಕ್ಕೆ ಜನಪ್ರತಿನಿಧಿಗಳು ತಮ್ಮ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ. ಸದನದಲ್ಲಿ ಸರಕಾರಿ ನೌಕರರ ಸಮಸ್ಯೆಗಳಿಗೆ ಧ್ವನಿಯಾಗಬೇಕಿದೆ ಎಂದು ವಿಷಯ ಮಂಡಿಸಿದರು. ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಎಚ್‌.ಕೆ.ರಾಮು ಮಾತನಾಡಿದರು.

ಈ ಸಂದರ್ಭದಲ್ಲಿ ಶಾಸಕ ಬಸನಗೌಡ ದದ್ದಲ್‌, ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದ ರಾಜ್ಯಾಧ್ಯಕ್ಷ ವಿ.ಎಂ.ನಾರಾಯಣಸ್ವಾಮಿ, ಜಿಲ್ಲಾಧಿಕಾರಿ ಶರತ್‌ ಬಿ., ಜಿ.ಪಂ ಸಿಇಒ ನಳಿನ್‌ ಅತುಲ್‌, ಮುಖಂಡರಾದ ತಿಮ್ಮಯ್ಯ ಪುರ್ಲೆ, ಎ.ಪುಟ್ಟಸ್ವಾಮಿ, ಬಸವರಾಜ ಗುರಿಕಾರ, ಸಿ.ಎಸ್‌.ಷಡಕ್ಷ ರಿ, ಆರ್‌.ಶ್ರೀನಿವಾಸ, ಜಿ.ಪಂ ಸದಸ್ಯ ಮಹಾಂತೇಶ ಪಾಟೀಲ್‌, ಜೆಡಿಎಸ್‌ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ ಸೇರಿದಂತೆ ಇತರರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ