ಆ್ಯಪ್ನಗರ

ಪೊಲೀಸ್‌ಗೆ ಚಳ್ಳೆ ಹಣ್ಣು ತಿನ್ನಿಸಿ ಲೇಡಿ ಪಿಡಿಒ ಪರಾರಿ

ಮಹಿಳಾ ಪಿಡಿಒವೊಬ್ಬರು ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದಾರೆ. ಸತತ ಕಾರ್ಯಾಚರಣೆ ಬಳಿಕ ಅವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Vijaya Karnataka Web 18 Apr 2018, 1:55 pm
ರಾಯಚೂರು: ಮಹಿಳಾ ಪಿಡಿಒವೊಬ್ಬರು ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದಾರೆ. ಸತತ ಕಾರ್ಯಾಚರಣೆ ಬಳಿಕ ಅವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
Vijaya Karnataka Web arrest woman


ಖಾತೆ ನೀಡುವ ಸಂಬಂಧ 25000 ರು. ಲಂಚ ಪಡೆದು ಮಂಗಳವಾರ ಎಸಿಬಿ ಪೋಲಿಸರ ಗೃಹ ಬಂಧನದಲ್ಲಿದ್ದ ಮಸ್ಕಿ ತಾಲೂಕಿನ ಮಲ್ದದಗುಡ್ಡ ಪಿಡಿಒ ವಸಂತ ಗೀತಾ ರಾತ್ರಿ 9 ಗಂಟೆಗೆ ಕಾವಲಿಗಿದ್ದ ಇಬ್ಬರು ಮಹಿಳಾ ಪೋಲಿಸರನ್ನು ತಳ್ಳಿ ಸಿನಿಮೀಯ ರೀತಿಯಲ್ಲಿ ಮನೆಯ ಕಂಪೌಂಡ್ ಹಾರಿ ಪರಾರಿಯಾಗಿದ್ದಾರೆ.

ಪಿಡಿಒ ಪರಾರಿಯಾದ ಸುದ್ದಿ ತಿಳಿಯುತ್ತಲೇ ಜಾಗೃತಗೊಂಡ ಎಸಿಬಿ ಡಿಎಸ್ ಪಿ ಅರುಣಕುಮಾರ ಕೋಳೂರು, ಸರ್ಕಲ್ ಇನ್ ಸ್ಪೆಕ್ಟರ್ ಶ್ರೀಧರ ದೊಡ್ಡಿ ನೇತೃತ್ವದ ತಂಡ ಮಸ್ಕಿ ಸರ್ಕಲ್ ಇನ್ ಸ್ಪೆಕ್ಟರ್ ಚನ್ನಯ್ಯ ಹಿರೇಮಠ‌ ಹಿರೇಮಠ್‌, ಸಬ್ ಇನ್ ಸ್ಪೆಕ್ಟರ್ ಅಮರೇಶ ಹುಬ್ಬಳ್ಳಿ ನೇತೃತ್ವದಲ್ಲಿ ತಂಡ ರಚಿಸಿ ಬೆಳಗಿನ ಜಾವದ ವರೆಗೆ ಶೋಧ ನಡೆಸಿ 6 ಗಂಟೆಗೆ ಮಸ್ಕಿ ತಾಲೂಕಿ‌ನ ಹಾಲಾಪುರ ಗ್ರಾಮದಲ್ಲಿ ಬಂಧಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ