ಆ್ಯಪ್ನಗರ

ಭೂ ಸಂತ್ರಸ್ತರಿಂದ ಕೊನೆಯ ಎಚ್ಚರಿಕೆ

ಸ್ಥಳೀಯ ಚಿನ್ನದಗಣಿ ಕಂಪನಿ ವಿಸ್ತರಣೆಗಾಗಿ ಭೂಮಿ ನೀಡಿದ ರೈತರಿಗೆ ಉದ್ಯೋಗ ನೀಡದಿದ್ದರೆ ಜೂ.3ರಂದು ಗಣಿ ಕಂಪನಿಯ ಮ್ಯಾಗ್‌ಜಿನ್‌ ರಸ್ತೆ ಬಂದ್‌ ಮಾಡುವ ಮೂಲಕ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುತ್ತೇವೆಂದು ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ಭೂ ಸಂತ್ರಸ್ತರು ಎಚ್ಚರಿಕೆ ನೀಡಿದ್ದಾರೆ.

Vijaya Karnataka 30 May 2019, 2:53 pm
ಹಟ್ಟಿಚಿನ್ನದಗಣಿ : ಸ್ಥಳೀಯ ಚಿನ್ನದಗಣಿ ಕಂಪನಿ ವಿಸ್ತರಣೆಗಾಗಿ ಭೂಮಿ ನೀಡಿದ ರೈತರಿಗೆ ಉದ್ಯೋಗ ನೀಡದಿದ್ದರೆ ಜೂ.3ರಂದು ಗಣಿ ಕಂಪನಿಯ ಮ್ಯಾಗ್‌ಜಿನ್‌ ರಸ್ತೆ ಬಂದ್‌ ಮಾಡುವ ಮೂಲಕ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುತ್ತೇವೆಂದು ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ಭೂ ಸಂತ್ರಸ್ತರು ಎಚ್ಚರಿಕೆ ನೀಡಿದ್ದಾರೆ.
Vijaya Karnataka Web last warning from land victims
ಭೂ ಸಂತ್ರಸ್ತರಿಂದ ಕೊನೆಯ ಎಚ್ಚರಿಕೆ


ಗಣಿ ಕಂಪನಿಯು ಗಣಿಗಾರಿಕೆ ವಿಸ್ತರಣೆಗಾಗಿ 2013-14ನೇ ಸಾಲಿನಲ್ಲಿ ಕಂಪನಿಯ ಉತ್ತರ ದಿಕ್ಕಿನಲ್ಲಿ 444 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ. ಕೇಂದ್ರ ಸರಕಾರದ 2013-14ನೇ ಭೂಸ್ವಾಧೀನ ಕಾಯಿದೆಯಂತೆ ಪರಿಹಾರ ಹಾಗೂ ಉದ್ಯೋಗ ಪಡೆಯದೇ ಇಂದಿಗೂ ವಂಚಿತರಾಗಿದ್ದಾರೆ. ಕೆಲವು ರೈತರಿಗೆ ಉದ್ಯೋಗ ನೀಡಲಾಗಿದ್ದು, ಇನ್ನುಳಿದ ರೈತರಿಗೆ ಕೋರ್ಟ್‌ ಮೂಲಕ ಡಿಕ್ರಿ ಪಡೆದ ರೈತರಿಗೆ ಉದ್ಯೋಗ ನೀಡದೆ ಗೋಳಾಡಿಸುತ್ತಿದ್ದಾರೆ. ಗಣಿ ಕಂಪನಿ ಆಡಳಿತ ವರ್ಗದ ಅಧಿಕಾರಿಗಳು ರೈತ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಕೋರ್ಟ್‌ ಮೂಲಕ ಡಿಕ್ರಿ ಪಡೆದ ರೈತರಿಗೆ ಉದ್ಯೋಗ ನೀಡಬೇಕೆಂದು ಮನವಿ ಸಲ್ಲಿಸಿದಾಗ, ಗಣಿ ಆಡಳಿತವರ್ಗ 2018ರ ನವೆಂಬರ್‌ 10 ರಂದು ಎರಡು ತಿಂಗಳಲ್ಲಿ ಉದ್ಯೋಗ ನೀಡುವ ಭರವಸೆಯ ಲಿಖಿತ ಪತ್ರ ನೀಡಲಾಗಿತ್ತು. ಈ ಪತ್ರ ನೀಡಿ ಐದಾರು ತಿಂಗಳು ಗತಿಸಿದರೂ ಗಣಿ ಆಡಳಿತವರ್ಗ ಗಮನಹರಿಸುತ್ತಿಲ್ಲ. ಹೀಗಾಗಿ ನಾವುಗಳು ಗಣಿ ಆಡಳಿತವರ್ಗದ ಧೋರಣೆಗೆ ಬೇಸತ್ತು ಜೂ. 3 ರಂದು ಕಂಪನಿಯ ಮ್ಯಾಗ್‌ಜಿನ್‌ ರಸ್ತೆ ಬಂದ್‌ಮಾಡಿ ಹೋರಾಟ ನಡೆಸುವುದರ ಜತೆ ಆತ್ಮಹತ್ಯೆಗೆ ಇಳಿಯಲು ಮುಂದಾಗಿದ್ದೇವೆಂದು ಭೂಸಂತ್ರಸ್ತ ರೈತರ ಪರವಾಗಿ ಕೆ.ಎಸ್‌.ಶಿವಾನಂದ ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ