ಆ್ಯಪ್ನಗರ

‘ನ್ಯಾಯದ ಬೇರುಗಳು ನೀತಿಯೊಳಗಿರಲಿ’

ಸದ್ಯದ ಪರಿಸ್ಥಿತಿಯಲ್ಲಿ ಮುಗ್ಧತೆಯಿಂದ ಪ್ರಜ್ಞಾಪೂರ್ವಕ ಮುಗ್ಧತೆಯೆಡೆಗೆ ಸಾಗಬೇಕಿದೆ. ನ್ಯಾಯದ ಬೇರುಗಳು ನೀತಿಯೊಳಗಿರಬೇಕು ಎಂದು ಸಂಸ್ಕೃತಿ ಚಿಂತಕ ರಂಜಾನ್‌ ದರ್ಗಾ ಹೇಳಿದರು.

Vijaya Karnataka 23 Aug 2018, 5:00 am
ರಾಯಚೂರು : ಸದ್ಯದ ಪರಿಸ್ಥಿತಿಯಲ್ಲಿ ಮುಗ್ಧತೆಯಿಂದ ಪ್ರಜ್ಞಾಪೂರ್ವಕ ಮುಗ್ಧತೆಯೆಡೆಗೆ ಸಾಗಬೇಕಿದೆ. ನ್ಯಾಯದ ಬೇರುಗಳು ನೀತಿಯೊಳಗಿರಬೇಕು ಎಂದು ಸಂಸ್ಕೃತಿ ಚಿಂತಕ ರಂಜಾನ್‌ ದರ್ಗಾ ಹೇಳಿದರು.
Vijaya Karnataka Web RAC-RCH22HD03


ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಸರ್ವಜ್ಞ ಹಾಗೂ ಜಸ್ಟಿಸ್‌ ಶಿವರಾಜ ಪಾಟೀಲ್‌ ಕಾಲೇಜು ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ನ್ಯಾ.ಶಿವರಾಜ ವಿ.ಪಾಟೀಲ್‌ ಪ್ರತಿಷ್ಠಾನ ಉದ್ಘಾಟನೆ, ಪುಸ್ತಕ ಬಿಡುಗಡೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ''ಮೆದುಳಿನ ಎಡಭಾಗಕ್ಕೆ ನಾವು ಹೆಚ್ಚಿನ ಕೆಲಸ ಕೊಡುತ್ತಿದ್ದೇವೆ. ಆದರೆ, ಮನುಷ್ಯತ್ವ, ಮಾನವೀಯತೆ, ಮಾನವ ಘನತೆ ಬಗ್ಗೆ ಎಚ್ಚರಿಸುವ ಮೆದುಳಿನ ಬಲಭಾಗಕ್ಕೆ ಕೆಲಸ ಕೊಡುತ್ತಿಲ್ಲ'' ಎಂದರು.

''ಇಂದು ನಾವೆಲ್ಲರೂ ನಿಸರ್ಗ ಕಳೆದುಕೊಂಡು ಅನಾಹುತಗಳಿಗೆ ಸಾಕ್ಷಿಯಾಗುತ್ತಿದ್ದೇವೆ. ದೇಶ ಬಹಳ ಕೆಟ್ಟ ಪರಿಸ್ಥಿತಿಯಲ್ಲಿದೆ. ಈ ನಿಟ್ಟಿನಲ್ಲಿ ನ್ಯಾ.ಶಿವರಾಜ ಪಾಟೀಲ್‌ ಪ್ರತಿಷ್ಠಾನ, ದೇಶದ ಪರಿಸ್ಥಿತಿ ಸುಧಾರಿಸಬೇಕಿದೆ. ಅಪಾಯದ ಅಂಚಿನಲ್ಲಿರುವ ದೇಶವನ್ನು ಇಂತಹ ಸಂಸ್ಥೆಗಳೇ ಕೈಹಿಡಿದು ನಡೆಸುವಂತಾಗಬೇಕು'' ಎಂದು ಹೇಳಿದರು.

ನ್ಯಾ.ಶಿವರಾಜ ವಿ.ಪಾಟೀಲ್‌ ಅವರು ಬರೆದ 'ಗುಡ್‌ಮಾರ್ನಿಂಗ್‌-365' ಪುಸ್ತಕ ಬಿಡುಗಡೆಮಾಡಿದ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು ಮಾತನಾಡಿ, ''ಕುರ್ಚಿ ಮೇಲೆ ಕುಳಿತುಕೊಳ್ಳುವುದು ಅಧಿಕಾರಕ್ಕಲ್ಲ, ಸೇವೆಗಾಗಿ. ನಿಸರ್ಗವನ್ನು ಪ್ರೀತಿಸಿದಾಗ ನಮ್ಮ ಬದುಕು ಸುಂದರವಾಗಲಿದೆ'' ಎಂದರು.

ಪ್ರತಿಭಾ ಪುರಸ್ಕಾರ ನೆರವೇರಿಸಿದ ಹಂಪಿ ಕನ್ನಡ ವಿಶ್ವವಿದ್ಯಾಲಯ ಕುಲಪತಿ ಮಲ್ಲಿಕಾ ಎಸ್‌.ಘಂಟಿ ಮಾತನಾಡಿ, ''ಸಮಾಜದಲ್ಲಿ ಸಾಮರಸ್ಯ ಮರೀಚಿಕೆಯಾಗಿದೆ. ಕೊಲ್ಲುವ ಶಕ್ತಿಗಳನ್ನು ಮೆಟ್ಟಿನಿಲ್ಲುವುದನ್ನು ಕಲಿಸಿಕೊಡಬೇಕಿದೆ. ಕಷ್ಟದಲ್ಲಿದ್ದವರು ಮಾತ್ರ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಬಲ್ಲರು. ಅವರೇ ದೇವರು. ಪ್ರತಿ ಯಶಸ್ವೀ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎನ್ನಲಾಗುತ್ತದೆ. ಬರೀ ಹಿಂದೆ ಇರುವುದಲ್ಲ, ಅವಳು ಇಂದು ಮುನ್ನೆಲೆಗೆ ಬರುತ್ತಿರುವುದು ಸಂತಸದ ವಿಷಯ'' ಎಂದು ಹೇಳಿದರು.

ಗದಗ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕರಿಸಲಾಯಿತು. ಧಾರವಾಡ ಜಿಲ್ಲಾ ನಿವೃತ್ತ ನ್ಯಾಯಾಧೀಶ ಶೇಖರಗೌಡ ಪಾಟೀಲ್‌, ಕಾಲೇಜು ಸಂಸ್ಥಾಪಕ ಚನ್ನಾರೆಡ್ಡಿ ಪಾಟೀಲ್‌ ಸೇರಿ ನ್ಯಾಯವಾದಿಗಳು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಪಾಲಕರು ಭಾಗವಹಿಸಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ