ಆ್ಯಪ್ನಗರ

ರಾಯಚೂರಲ್ಲಿ ಸಿಡಿಲು ಬಡಿದು 30 ಮೇಕೆ, ಹಸು ಸಾವು

ಗುರುವಾರ ರಾತ್ರಿ ಸಿಡಿಲು ಬಡಿದು ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ವಂದಲಿ ಹಾಗೂ ಬಗಡಿ ತಾಂಡಾದಲ್ಲಿ ಜಾನುವಾರು ಹಾಗೂ ಮೇಕೆಗಳು ಸಾವನ್ನಪ್ಪಿವೆ. ಗುರುವಾರ ರಾತ್ರಿ ಸುರಿದ ಭಾರೀ ಮಳೆಯಿಂದ ಅಪಾರ ನಷ್ಟ ಸಂಭವಿಸಿದೆ.

Vijaya Karnataka Web 11 Oct 2019, 11:27 am
ರಾಯಚೂರು: ಗುರುವಾರ ರಾತ್ರಿ ಸಿಡಿಲು ಬಡಿದು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ವಂದಲಿ ಹಾಗೂ ಬಗಡಿ ತಾಂಡಾದಲ್ಲಿ ಜಾನುವಾರು ಹಾಗೂ ಮೇಕೆಗಳು ಸಾವನ್ನಪ್ಪಿವೆ. ಬಾರಿ ಮಳೆ ಮತ್ತು ಸಿಡಿಲಿಗೆ ಒಂದು ಹಸು,ಒಂದು ಎಮ್ಮೆ ಹಾಗೂ 30 ಮೇಕೆಗಳು ಸಾವಿಗೀಡಾಗಿವೆ.
Vijaya Karnataka Web lightning



ಉಪ್ಪಾರ ನಂದಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಗಡಿ ತಾಂಡಾದಲ್ಲಿ ಗುರುವಾರ ರಾತ್ರಿ ಸಿಡಿಲು ಬಡಿದು ಈರಣ್ಣ, ನಾರಾಯಣ ಪೂಜಾರಿ ಎಂಬುವವರ ಒಂದು ಹಸು,ಒಂದು ಎಮ್ಮೆ ಸಾವಿಗೀಡಾಗಿವೆ.

ಹೂನೂರು ಗ್ರಾಪಂ. ವ್ಯಾಪ್ತಿಯ ವಂದಲಿ ಗ್ರಾಮದ ನಿವಾಸಿ ಯಮನಪ್ಪ ಛತ್ರಪ್ಪ ಮುಂದಿನ ಮನಿ ಎಂಬುವವರ ಸುಮಾರು 30 ಮೇಕೆಗಳು ಗುರುವಾರ ರಾತ್ರಿ ಸುರಿದ ಭಾರೀ ಮಳೆಯಿಂದ ಸಾವಿಗೀಡಾಗಿ ಅಪಾರ ನಷ್ಟ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ