ಮಸ್ಕಿ; ಪಟ್ಟಣದ ಪುರಸಭೆ ಚುನಾವಣೆಗೆ ಸಲ್ಲಿಸಿದ ನಾಮಪತ್ರಗಳಲ್ಲಿ 13 ತಿರಸ್ಕೃತಗೊಂಡಿದ್ದು, 125 ನಾಮಪತ್ರ ಕ್ರಮಬದ್ಧವಾಗಿವೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಒಂದೇ ಕಾರ್ಯಾಲಯದಲ್ಲಿ ನಾಮಪತ್ರ ಸಲ್ಲಿಸಲು ವ್ಯವಸ್ಥೆ ಕಲ್ಪಿಸುವುದರಿಂದ ನೂಕುನುಗ್ಗಲು ಉಂಟಾಗುತ್ತದೆ ಎಂಬ ಕಾರಣಕ್ಕೆ 1 ರಿಂದ 11 ವಾರ್ಡ್ವರೆಗೆ ಸಾಮರ್ಥ್ಯ ಸೌಧದ ಮೊದಲನೇ ಮಹಡಿಯಲ್ಲಿ ನಾಮಪತ್ರ ಸಲ್ಲಿಸಲು ವ್ಯವಸ್ಥೆ ಕಲ್ಪಿಸಲಾಗಿತ್ತು. 12 ರಿಂದ 23 ವಾರ್ಡ್ವರೆಗೆ ಸಾಮರ್ಥ್ಯ ಸೌಧದ ನೆಲ ಮಹಡಿಯಲ್ಲಿ ನಾಮಪತ್ರ ಸಲ್ಲಿಸುವ ವ್ಯವಸ್ಥೆ ಮಾಡಲಾಗಿತ್ತು. ಪುರಸಭೆಯ 23 ವಾರ್ಡ್ಗಳಿಗೆ ಒಟ್ಟು ಸಲ್ಲಿಕೆಯಾಗಿದ್ದ 132 ನಾಮಪತ್ರ ಪರಿಶೀಲನೆ ಮಾಡಿದಾಗ 13 ನಾಮಪತ್ರ ತಿರಸ್ಕೃತಗೊಂಡಿವೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
21ನೇ ವಾರ್ಡ್ನ ನಾಮಪತ್ರಗಳ ಪರಿಶೀಲನೆ ವೇಳೆ ಕೆಲಕಾಲ ಗೊಂದಲ ಉಂಟಾಗಿತ್ತು. ನಂತರ ವಾತಾವರಣ ತಿಳಿಯಾಗಿ, ಪರಿಶೀಲನೆ ನಡೆಯಿತು.