ಆ್ಯಪ್ನಗರ

ಮಸ್ಕಿ: ಚೆಕ್‌ ಪೋಸ್ಟ್‌ ನಿರ್ವಹಣೆ ಸೇನಾ ವಶಕ್ಕೆ

ಶಾಂತಿಯುತ ಹಾಗೂ ಅಕ್ರಮ ಚಟುವಟಿಕೆ ಮುಕ್ತ ಚುನಾವಣೆ ನಡೆಸಲು ಸನ್ನದ್ಧವಾಗಿರುವ ಚುನಾವಣೆ ಆಯೋಗವು ಅಕ್ರಮ ಹಣ ಸಾಗಣೆ ಹಾಗೂ ಮದ್ಯ ಸಾಗಾಟ ತಡೆಯುವ ಸಲುವಾಗಿ ನಿರ್ಮಿಸಿರುವ ವಿಧಾನಸಭಾ ವ್ತಾಪ್ತಿಯ ಚೆಕ್‌ ಪೋಸ್ಟ್‌ಗಳನ್ನು ಸೇನಾ ವಶಕ್ಕೆ ಒಪ್ಪಸಲಾಗಿದೆ ಎಂದು ಚುನಾವಣಾ ಅಧಿಕಾರಿ ಡಾ.ಚೇತನಾ ಪಾಟೀಲ ತಿಳಿಸಿದರು.

Vijaya Karnataka Web 21 Apr 2018, 5:00 am
ಮಸ್ಕಿ : ಶಾಂತಿಯುತ ಹಾಗೂ ಅಕ್ರಮ ಚಟುವಟಿಕೆ ಮುಕ್ತ ಚುನಾವಣೆ ನಡೆಸಲು ಸನ್ನದ್ಧವಾಗಿರುವ ಚುನಾವಣೆ ಆಯೋಗವು ಅಕ್ರಮ ಹಣ ಸಾಗಣೆ ಹಾಗೂ ಮದ್ಯ ಸಾಗಾಟ ತಡೆಯುವ ಸಲುವಾಗಿ ನಿರ್ಮಿಸಿರುವ ವಿಧಾನಸಭಾ ವ್ತಾಪ್ತಿಯ ಚೆಕ್‌ ಪೋಸ್ಟ್‌ಗಳನ್ನು ಸೇನಾ ವಶಕ್ಕೆ ಒಪ್ಪಸಲಾಗಿದೆ ಎಂದು ಚುನಾವಣಾ ಅಧಿಕಾರಿ ಡಾ.ಚೇತನಾ ಪಾಟೀಲ ತಿಳಿಸಿದರು.
Vijaya Karnataka Web RAC-RCH20MSK01


ಪಟ್ಟಣದ ಬಸವೇಶ್ವರ ವೃತ್ತದಲ್ಲಿರುವ ಚೆಕ್‌ಪೋಸ್ಟ್‌ನಲ್ಲಿ ಶುಕ್ರವಾರದಿಂದ ಸೇನಾ ಸಿಬ್ಬಂದಿಯನ್ನು ನಿಯೋಜನೆ ಮಾಡುವ ಮೂಲಕ ಮತ್ತಷ್ಟು ವಾಹನಗಳ ತಪಾಸಣೆಯನ್ನು ಬಿಗಿಗೊಳಿಸಲಾಗಿದೆ. ಬಿಹಾರ ಮೂಲದ 707ಡಿ ಕಂಪನಿಯ ಸಹಾಯಕ ಕಮಾಂಡರ್‌ ಗೌತಮ್‌ ಕುಮಾರ ನೇತೃತ್ವದಲ್ಲಿ ಆಗಮಿಸಿರುವ ಸೀಮಾ ಸುರಕ್ಷಾ ಬುಲ್‌ನ 150 ಸೈನಿಕರು, ಕ್ಷೇತ್ರದ ಚುನಾವಣೆಯ ಬಿಗಿ ಭದ್ರತೆಗೆ ನಿಯೋಜನೆಗೊಂಡಿದ್ದಾರೆ. ಚೆಕ್‌ ಪೋಸ್ಟ್‌ನಲ್ಲಿ ಪ್ರತಿ ನಾಲ್ಕು ಗಂಟೆಯೊಂದರಂತೆ 6ಜನ ಸೇನಾ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದೆ, ದಿನದ 24 ಗಂಟೆಯೂ ಪಾಳೆಯ ಪ್ರಕಾರ ಚೆಕ್‌ ಪೋಸ್ಟ್‌ನ್ನು ಸೇನಾ ಸಿಬ್ಬಂದಿ ತಪಾಸಣೆ ನಡೆಸಲಿದೆ ಎಂದು ಸರ್ಕಲ್‌ ಇನ್ಸ್‌ಸ್ಪೆಕ್ಟರ್‌ ಚನ್ನಯ್ಯ ಹಿರೇಮಠ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ