ಆ್ಯಪ್ನಗರ

ಜಾಕ್ವೆಲ್‌ಗೆ ಸಂಸದ, ಸಿಇಒ ಭೇಟಿ

ಸ್ಥಳೀಯ ಪಟ್ಟಣ ಸೇರಿ ಐದು ಗ್ರಾಮಗಳಿಗೆ ನೀರು ಪೂರೈಕೆಯ ಬಹುಗ್ರಾಮಗಳ ಕುಡಿವ ನೀರಿನ ಯೋಜನೆಯ ಕೃಷ್ಣಾ ನದಿ ದಡದಲ್ಲಿರುವ ಜಾಕ್ವೆಲ್‌ಗೆ ಸಂಸದ ರಾಜಾ ಅಮರೇಶ್ವರ ನಾಯಕ, ಜಿ.ಪಂ. ಸಿಇಒ ಲಕ್ಷಿತ್ರ್ಮೕಕಾಂತ ರೆಡ್ಡಿ ಬುಧವಾರ ಭೇಟಿ ನೀಡಿ, ಲಿಂಗಸುಗೂರಿನ ಜಿ.ಪಂ.ಉಪ ವಿಭಾಗದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

Vijaya Karnataka 29 Aug 2019, 5:00 am
ಹಟ್ಟಿಚಿನ್ನದಗಣಿ: ಸ್ಥಳೀಯ ಪಟ್ಟಣ ಸೇರಿ ಐದು ಗ್ರಾಮಗಳಿಗೆ ನೀರು ಪೂರೈಕೆಯ ಬಹುಗ್ರಾಮಗಳ ಕುಡಿವ ನೀರಿನ ಯೋಜನೆಯ ಕೃಷ್ಣಾ ನದಿ ದಡದಲ್ಲಿರುವ ಜಾಕ್ವೆಲ್‌ಗೆ ಸಂಸದ ರಾಜಾ ಅಮರೇಶ್ವರ ನಾಯಕ, ಜಿ.ಪಂ. ಸಿಇಒ ಲಕ್ಷಿತ್ರ್ಮೕಕಾಂತ ರೆಡ್ಡಿ ಬುಧವಾರ ಭೇಟಿ ನೀಡಿ, ಲಿಂಗಸುಗೂರಿನ ಜಿ.ಪಂ.ಉಪ ವಿಭಾಗದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
Vijaya Karnataka Web meet jacquel mp and ceo
ಜಾಕ್ವೆಲ್‌ಗೆ ಸಂಸದ, ಸಿಇಒ ಭೇಟಿ


ಈ ಯೋಜನೆ ಆರಂಭವಾದಾಗಿನಿಂದ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. 15 ದಿನಗಳವರೆಗೆ ನಿರಂತರ ನೀರು ಪೂರೈಕೆ ನಡೆದ ಉದಾಹರಣೆಗಳಿಲ್ಲ. ಪದೇಪದೆ ಮೋಟಾರ್‌ ದುರಸ್ತಿ ಸೇರಿ ಇತರ ಕಾರಣಗಳನ್ನೊಡ್ಡಿ ನೀರು ಪೂರೈಕೆ ಸ್ಥಗಿತವಾಗುತ್ತಿದೆ ಎಂದು ಅಲ್ಲಿನ ಜನರು ಸಿಇಒಗೆ ದೂರಿದರು. ಈ ಸಂದರ್ಭ ಸಿಇಒರವರು ಜಿ.ಪಂ.ಉಪ ವಿಭಾಗದ ಎಇಇ ಶ್ರೀಮಂತ ಮಿಣಜಿಗಿ ಹಾಗೂ ಇತರ ಎಂಜಿನಿಯರ್‌ಗಳನ್ನು ಸ್ಥಳದಲ್ಲೇ ತರಾಟೆಗೆ ತೆಗೆದುಕೊಂಡರು. ಶೀಘ್ರ ಟೆಂಡರ್‌ ಕರೆಯಿರಿ, ಸದ್ಯ ಪ್ರವಾಹದಿಂದ ಹಾಳಾದ ಮೋಟಾರ್‌ಗಳನ್ನು ಆದಷ್ಟು ಬೇಗ ದುರಸ್ತಿ ಮಾಡಿಸಿ ನೀರು ಪೂರೈಸಿ ಎಂದು ಸೂಚಿಸಿದರು.

ವಿಕ ದಲ್ಲಿ'ಪ್ರವಾಹ ತಗ್ಗಿದರೂ ಪೂರೈಕೆಯಾಗದ ನೀರು' ಶೀರ್ಷಿಕೆಯಡಿ ಬುಧವಾರ ಸುದ್ದಿ ಪ್ರಕಟಗೊಂಡಿತ್ತು.

ಮುಖಂಡರುಗಳಾದ ರಾಜಾ ಶ್ರೀನಿವಾಸ ನಾಯಕ, ರಾಜಾ ಸೋಮನಾಥ ನಾಯಕ, ಗಜೇಂದ್ರ ನಾಯಕ, ನಂದೇಶ ನಾಯಕ, ಗೋವಿಂದ ನಾಯಕ, ಎಸ್‌.ಸೋಮನಾಥ ನಾಯಕ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ